Special News:
ತಿಳಿ ನೀಲಿ ಆಕಾಶದಲ್ಲಿ ಚಿಟ್ಟೆಗಳು ಸ್ವಚ್ಛಂದವಾಗಿ ಸುತ್ತಾಡುತ್ತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಮೋನಾರ್ಕ್ ಬಟರ್ಫ್ಲೈ ಎಂದು ಕರೆಯಲ್ಪಡುವ ಈ ಚಿಟ್ಟೆಗಳ ವಿಡಿಯೋವನ್ನು ಬ್ಯುಟೆಂಗೆಬೀಡೆನ್ ಎಂಬ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಪೇಜ್ ಸದಾ ಕಾಲ ಪ್ರಾಣಿ ಪಕ್ಷಿಗಳ ಹಾಗೂ ಪ್ರಕೃತಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳನ್ನು ಆಗಾಗ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡುತ್ತಿರುತ್ತದೆ. ಅದೇ ರೀತಿ ಈ ಸುಂದರ ಚಿಟ್ಟೆಗಳ ವಿಡಿಯೋ ಪೋಸ್ಟ್ ಮಾಡಲಾಗಿದ್ದು ಕಣ್ಮನ ಸೆಳೆಯುತ್ತಿದೆ. ಸಾವಿರಾರು ಚಿಟ್ಟೆಗಳು, ಸ್ವಚ್ಛ ನೀಲಾಕಾಶದಲ್ಲಿ ಸೊಗಸಾಗಿ ಹಾರಾಡುತ್ತಾ ಬಾನ ಸೌಂದರ್ಯಕ್ಕೆ ಕಳೆ ಕಟ್ಟಿವೆ. ಲಕ್ಷಾಂತರ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ನೂರಾರು ಜನ ಕಾಮೆಂಟ್ ಮಾಡಿದ್ದಾರೆ. ಒಟ್ಟಾ ರೆ ತಿಳಿ ಬಾನಿನಲ್ಲಿ ತಿಥಲಿಯ ಹಾರಾಟಕ್ಕೆ ಮನ ಸೋತಿದ್ದಾರೆ.
Monarch butterflies.. 🦋 pic.twitter.com/ThXKA3D4B2
— Buitengebieden (@buitengebieden) September 23, 2022
ಮುಸ್ಲಿಂ ನೇಕಾರನಿಂದ ಶಾರದಾ ದೇವಿಗೆ 8 ಲಕ್ಷ ರೂ ಮೌಲ್ಯದ ಚಿನ್ನದ ಸೀರೆ ದೇಣಿಗೆ..?!




