6ನೇ ದಿನದ ದಸರಾದಲ್ಲಿ ಗಮನ ಸೆಳೆದ ಪಾರಂಪರಿಕ ನಡಿಗೆ…!

Dasara News:

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ದಸರಾ ೬ ನೇ ದಿನ ನಾನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಮುಂಜಾನೆಯೇ ಪ್ರಾರಂಭವಾದ ಪಾರಂಪರಿಕ ನಡಿಗೆ ಕಾರ್ಯಕ್ರಮ ಗಮನ ಸೆಳೆಯಿತು. ಮೈಸೂರಿನ ಟೌನ್ ಹಾಲ್ ನಿಂದ  ಈ ನಡಿಗೆ ಪ್ರಾರಂಭವಾಗಿತ್ತು. ಮೈಸೂರು ನಗರದ ಪರಂಪರೆಯ ಹಾಗೂ ಕಟ್ಟಡಗಳ ಬಗ್ಗೆ ಮಾಹಿತಿಯನ್ನು ನಡಿಗೆಯಲ್ಲಿ ಭಿತ್ತರ ಮಾಡಲಾಗಿತ್ತು.

ನಡಿಗೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ರು. ಪುರಾತತ್ವ ತಜ್ಞ ಪ್ರೊ. ಎನ್‌.ಎಸ್ ರಂಗರಾಜು ರಿಂದ ಮಾಹಿತಿ ನೀಡಲಾಗಿತ್ತು.ಕಾರ್ಯಕ್ರಮಕ್ಕೆ ಶಾಸಕ ಎಲ್ ನಾಗೇಂದ್ರ ಚಾಲನೆ ನೀಡಿದರು. ವಿದ್ಯಾರ್ಥಿಗಳು ಜೊತೆ ಪಾರಂಪರಿಕ ನಡಿಗೆಯಲ್ಲಿ ಶಾಸಕರು ಭಾಗಿಯಾದ್ರು. ಪುರಭವನದಿಂದ ದೊಡ್ಡಗಡಿಯಾರ, 10 ನೇ‌ ಚಾಮರಾಜ ಒಡೆಯರ್ ವೃತ್ತ,  ಅರಮನೆ, ಕೆ.ಆರ್.ಸರ್ಕಲ್ ಚಿಕ್ಕಗಡಿಯಾರ, ದೇವರಾಜ‌ ಮಾರುಕಟ್ಟೆ, KR ಆಸ್ಪತ್ರೆ,  ಮೆಡಿಕಲ್ ಕಾಲೇಜು ವರೆಗೆ ಪಾರಂಪರಿಕ ನಡಿಗೆ ನಡೆಯಿತು.

ರೈತ ದಸರಾ ಕ್ರೀಡಾಕೂಟಕ್ಕೆ ಬಲೂನುಗಳನ್ನು ಹಾರಿ ಬಿಡುವ ಮೂಲಕ ಚಾಲನೆ..!

‘’ಕರಕುಶಲ ಪ್ರಾತ್ಯಕ್ಷಿಕೆ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆ’’ ಉದ್ಘಾಟಿಸಿದ ಎಸ್.ಟಿ.ಸೋಮಶೇಖರ್:

ಶ್ರೀ ಬಂಡೆ ಮಹಾ೦ಕಾಳಿ ದೇವಾಲಯದಲ್ಲಿ ನವರಾತ್ರಿ ನಾಲ್ಕನೇ ದಿನದ ಅಲಂಕಾರ…!

 

About The Author