State News:
ಎಣ್ಣೆ ನಶೆಯಲ್ಲಿ ಕಾರ್ ಚಾಲಕ ನಡುರಸ್ತೆಯಲ್ಲೇ ಕಾರ್ ನಿಲ್ಲಿಸಿ ನಿದ್ರೆಗೆ ಜಾರಿದ ಘಟನೆ ಮಡಿಕೇರಿ ನಗರದಲ್ಲಿ ತಡರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ.
ಮಡಿಕೇರಿಯ ಹಳೆ ಖಾಸಗಿ ಬಸ್ ನಿಲ್ದಾಣ ಬಳಿ ಕಳೆದ ರಾತ್ರಿ ಕಾರ್ ಚಾಲಕ ಬಸ್ ನಿಲ್ದಾಣದ ಪಕ್ಕದಲ್ಲೇ ಇದ್ದ ಬಾರ್‌ಗೆ ಹೋಗಿ ಕಂಠಪರ‍್ತಿ ಎಣ್ಣೆ ಹೊಡೆದು ನಂತರ ಕಾರಿಗೆ ಹತ್ತಿದ್ದಾನೆ. ಬಳಿಕ ಕಾರ್ ಚಾಲನೆ ಮಾಡಿಕೊಂಡು ಸ್ವಲ್ಪ ದೂರ ಬಂದು ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ನಿದ್ರೆಗೆ ಜಾರಿದ್ದಾನೆ. ಏಕಾಏಕಿ ನಡುರಸ್ತೆಯಲ್ಲಿ ಕಾರ್ ನಿಂತಿರುವುದನ್ನು ಕಂಡ ಸಾರ್ವಜನಿಕರು ಅತಂಕಕ್ಕೆ ಒಳಗಾಗಿ ಕಾರಿನ ಬಳಿ ಹೋಗಿದ್ದಾರೆ. ಈ ವೇಳೆ ವ್ಯಕ್ತಿ ಕಾರಿನಲ್ಲಿ ಮಲಗಿರುವುದು ಕಂಡುಬಂದಿದೆ. ಮಡಿಕೇರಿ ನಗರದ ಸಂಚಾರಿ ಪೊಲೀಸರು ಕಾರ್ ಚಾಲಕನನ್ನು ನಿದ್ದೆಯಿಂದ ಎಬ್ಬಿಸಲು ಪ್ರಯತ್ನ ಮಾಡಿದ್ರು ಚಾಲಕ ಮಾತ್ರ ಎದ್ದೇಳಲಿಲ್ಲ. ಇದರಿಂದ ಸಿಟ್ಟಿಗೆದ್ದ ಸರ‍್ವಜನಿಕರು ಕಾರನ್ನು ಎಳೆದಾಡಲು ಮುಗಿಬಿದ್ದರು. ನಂತರ ಕಾರ್ ಚಾಲಕ ಎಚ್ಚರಗೊಂಡು ಕಾರನ್ನು ರಸ್ತೆ ಬದಿಗೆ ಹಾಕಿದ್ದಾನೆ. ನಂತರ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿದ್ರು ಕಾರ್ ಚಾಲಕನ ಅವಾಂತರದಿಂದ ಸಾರ್ವಜನಿಕರು ಹಿಡಿಶಾಪ ಹಾಕಿ ರಾತ್ರಿ ಮನೆಗೆ ತೆರಳಿದರು. ಇತ್ತ ಕಾರ್ ಚಾಲಕನ ವಿರುದ್ಧ ಸಂಚಾರಿ ಪೊಲೀಸರು ಡ್ರಂಕ್ ಅಂಡ್ ಡ್ರೈವ್ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಭಾರತ ಐಕ್ಯತಾ ಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಮಾತುಗಳು:
ಗುಂಡ್ಲುಪೇಟೆಯಲ್ಲಿ ಭಾರತ ಐಕ್ಯತಾ ಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು