Healt tips:
ಕಡಲೆ ಬೀಜದಲ್ಲಿ ಪ್ರೋಟೀನ್ಸ್ ,ವಿಟಮಿನ್ಸ್ ,ಕ್ಯಾಲ್ಸಿಯಂಗಳು ,zink , ಮೆಗ್ನೀಷಿಯಂ ,ಪೊಟ್ಯಾಸಿಯಂ ,ಐರನ್ ಎಲ್ಲಾ ಜೀವಸತ್ವಗಳು ಹೇರಳವಾಗಿ ಕಂಡು ಬರುತ್ತದೆ ,ಅತ್ಯಂತ ಶಕ್ತಿಶಾಲಿ ಆಹಾರ ಸರ್ವಪೋಷಕಾಂಶಗಳನ್ನು ಒಳಗೊಂಡಿರುವ ಆಹಾರ ಶರೀರದ ಎಲ್ಲ ಕೊರತೆಗಳನ್ನು ನೀಗಿಸುವ ಆಹಾರ ಎಲ್ಲ ಅಂಗಾಂಗಗಗಳಿಗೆ ಬಲವನ್ನು ಕೊಡುವ ಆಹಾರ ಜೀವಶಕ್ತಿಯನ್ನು ಗಟ್ಟಿ ಗೊಳಿಸುವ ಹಾಗು ನಿಮ್ಮ ಅಯಸ್ಸನ್ನು ವೃದ್ಧಿ ಗೊಳಿಸುವಂತಹ ಆಹಾರ ,ಸುಲಭವಾಗಿ ಕಡಿಮೆ ಬೆಲೆಯಲ್ಲಿ ಎಲ್ಲ ಕಡೆ ಸಿಗುವಂತಹ ಆಹಾರ ,ಇದನ್ನು ಬಡವರ ಬಾದಾಮಿ ಎಂದು ಸಹ ಕರೆಯುತ್ತಾರೆ. ಹಾಗಾದರೆ ಕಡಲೆ ಬೀಜದ ಅದ್ಬುತ ರಹಸ್ಯಗಳನ್ನು ತಿಳಿದುಕೊಳ್ಳೋಣ ಬನ್ನಿ .
ಕಡಲೆ ಬೀಜವನ್ನು ಬೆಲ್ಲದ ಜೊತೆ ತಿಂದರೆ ಎಷ್ಟು ಅದ್ಭುತಗಳು ಸಿಗುತ್ತದೆ ಗೊತ್ತಾ …? ನೆನೆಸಿದ ಕಡಲೆ ಬೀಜ ಬೆಲ್ಲದ ಜೊತೆ ತಿನ್ನುವುದರಿಂದ ಮಲಬದ್ದತ್ತೆ,ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ,ಹಾಗು ಶುಗರ್ ಇರುವವರು ಕೂಡ ಇದನ್ನು ಸೇವಿಸಬಹುದು ಆದರೆ ಒರಿಜಿನಲ್ ಬೆಲ್ಲ ,ಕಪ್ಪು ಬೆಲ್ಲವನ್ನು ಮಾತ್ರ ಸೇವಿಸಬೇಕು ಮತ್ತು ಐರನ್ ,ವಿಟಮಿನ್ B12 ,ಹಿಮೋಗ್ಲೋಬಿನ್ ಕೊರತೆ ಇಂದ ಬಳಲುತ್ತಿರುವವರು ಬೆಲ್ಲ ಮತ್ತು ಕಡಲೆಬೀಜವನ್ನು ತಿಂದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಹಾಗು ಶ್ವಾಸಕೋಶದ ಸಮಸ್ಯೆ,ಅಸ್ತಮಾ ದೂರವಾಗುತ್ತದೆ .ಮುನ್ನೆಚ್ಚರಿಕೆಯಾಗಿ ಶ್ವಾಸಕೋಶವನ್ನು ಸರಿಯಾಗಿ ಇಟ್ಟುಕೊಳ್ಳ ಬೇಕೆಂದರೆ ,ಅರೋಗ್ಯ ಚೆನ್ನಾಗಿರಬೇಕು ಎಂದರೆ ಕಡಲೆ ಬೀಜ ಹಾಗು ಬೆಲ್ಲವನ್ನು ಸೇವಿಸಬೇಕು .ಇನ್ನು ಕಣ್ಣಿನ ಹಾಗು ದೂರದೃಷ್ಟಿ ದೋಷ ,ಕಣ್ಣಿನ ಪೊರೆ ಬರುವುದು ,ಕಣ್ಣಿನ ನರಗಳು ಬ್ಲಾಕ್ ಹಾಗುವುದು ಈ ಸಮಸ್ಯೆಯಿಂದ ಮುಕ್ತಿ ಹೊಂದಬೇಕು ಎಂದರೆ ನೆನೆಸಿರುವ ಕಡಲೆಬೀಜ ಹಾಗು ಬೆಲ್ಲವನ್ನು ಸೇವಿಸಿ ,ಇದು ನಿಮ್ಮ ಚರ್ಮದ ಕಾಂತಿಯನ್ನು ವೃದ್ಧಿಸುತ್ತದೆ ಸೌಂದರ್ಯ ವರ್ದಕವಾಗಿ ಕೆಲಸ ಮಾಡುತ್ತದೆ ನಿಮ್ಮ ದೇಹವನ್ನು ಒಳಗಿನಿಂದ ಬ್ರೈಟ್ ಅಂಡ್ ಲೈಟ್ ಆಗಿ ಮಾಡುತ್ತದೆ ಹಾಗು ನಿಮ್ಮ ಸ್ಕಿನ್ ಟೋನ್ಅನ್ನು ಚೇಂಜ್ ಮಾಡುವ ಶಕ್ತಿ ಇದಕ್ಕಿದೆ ನಿಮ್ಮ ಸ್ಕಿನ್ ಅದ್ಭುತವಾಗಿರುತ್ತದೆ ,ಹೆಣ್ಣುಮಕ್ಕಳಿಗೆ pcod ,pcos ಸಮಸ್ಯೆಗಳು ದೂರವಾಗುತ್ತದೆ .ಕಡಲೆ ಬೀಜ ಬೆಲ್ಲದ ಜೊತೆ ತಿನ್ನುವುದರಿಂದ ಕಂಡುಬರುವ ಸೆಲೆನಿಯಮ್, ಮೆಗ್ನೀಸಿಯಮ್ ಮತ್ತು ಕಬ್ಬಿಣವು ಸಂತಾನೋತ್ಪತ್ತಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ. ಅಲ್ಝೈಮರ್ಸ್‌ನಂತಹ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ.
ಬೊನ್ಸ್ ಸಮಸ್ಯೆಯಿಂದ ಬಳಲುತ್ತಿರುವವರು ಕಡಲೆಬೀಜ ಹಾಗು ಕಪ್ಪು ಬೆಲ್ಲವನ್ನು ಸೇವಿಸಿದರೆ ಬೋನ್ಸ್ ಸ್ಟ್ರಾಂಗ್ ಆಗುತ್ತದೆ,ಹಾಗು ಸಂಧಿವಾತದ ಸಮಸ್ಯೆಯಿಂದ ಮುಕ್ತಿಹೊಂದ ಬಹುದು ಹಲ್ಲುಗಳನ್ನು ಬಲಪಡಿಸುತ್ತದೆ. ಹಾಗು ಇದರ ಸೇವನೆಯಿಂದ ಏಕಾಗ್ರತೆ ಹಾಗು ಜ್ಞಾಪಕ ಶಕ್ತಿ ಕೊರತೆ ಎಂದಿಗೂ ಉಂಟಾಗುವುದಿಲ್ಲ ಮೆದುಳಿಗೆ ಅದ್ಭುತವಾದ ಜೀವಶಕ್ತಿಯನ್ನು ಒದಗಿಸುತ್ತದೆ, ನರಗಳ ದೌರ್ಬಲ್ಯೆತೆಯನ್ನು ದೂರ ಮಾಡುತ್ತದೆ ಮೆದುಳಿಗೆ ಅತ್ಯಂತ ಶಕ್ತಿಶಾಲಿ ಆಹಾರ ಎಂದು ಹೇಳಬಹುದು .ಕಿಡ್ನಿಗೆ ಸಂಬಂದಿಸಿದ ರೋಗಗಳನ್ನು ತಡೆಗಟ್ಟುತ್ತದೆ ,ಕೈ ಕಾಲು ಜೋಮು ಇರುವಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ ,ಶರೀರದಲ್ಲಿನ ಕೊಲೆಸ್ಟ್ರಾಲ್ ಕರಗುತ್ತದೆ ಹಾಗು ಬೊಜ್ಜು ಕರಗಲು ಸಹಾಯ ಮಾಡುತ್ತದೆ ಎಷ್ಟಲ್ಲಾ ಪ್ರಯೋಜನ ಹೊಂದಿರುವ ಕಡಲೆ ಬೀಜ ಮತ್ತು ಬೆಲ್ಲವನ್ನು ಯಾರು ಬೇಕಾದರೂ ಸೇವಿಸ ಬಹುದು .ಇಷ್ಟೊಂದು ಪ್ರಯೋಜನವಿರುವ ಆಹಾರವನ್ನು ಸೇವಿಸಿ ನೀವು ಕೂಡ ಆರೋಗ್ಯವಾಗಿರಿ .ಆರೋಗ್ಯಕ್ಕೆ ಒಳ್ಳೆಯದು ಅಂತ ಹೆಚ್ಚಾಗಿ ತಿನ್ನಬಾರದು. ಹೆಚ್ಚು ತಿನ್ನುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ, ಮಲಬದ್ಧತೆ ಸಮಸ್ಯೆಗಳನ್ನು ಎದುರಿಸಬಹುದು.