Saturday, January 11, 2025

Latest Posts

ಹಾಸನ : ಕಟ್ಟಡ ಕಾರ್ಮಿಕರಿಂದ ಕಾರ್ಮಿಕ ಇಲಾಖೆಗೆ ಮುತ್ತಿಗೆ ಆಕ್ರೋಶ, ಪ್ರತಿಭಟನೆ

- Advertisement -

Hassan News:

ಹಾಸನ : ಉಚಿತ ಬಸ್ ಪಾಸ್ ನೀಡುವ ನೆಪದಲ್ಲಿ ಸರಕಾರವು ವರ್ಷದಲ್ಲಿ ಸಾವಿರಾರು ಕೋಟಿ ರೂಗಳ ಹಗರಣ ಮಾಡುವ ಹುನ್ನಾರ ಮಾಡಲಾಗುತ್ತಿದೆ ಎಂದು ಖಂಡಿಸಿ ಜಿಲ್ಲಾ ಕಾರ್ಮಿಕ ಇಲಾಖೆ ಮುಂದೆ ರಾಜ್ಯ ಕಟ್ಟಡ ಕಾರ್ಮಿಕರ ಸಂಘದವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.

​ ​ ​ ​ ​ ​ ​ಸರಕಾರವು ಬಸ್ ಪಾಸ್ಗಳನು ಕಟ್ಟಡ ಕಾರ್ಮಿಕರಿಗೆ ನೀಡುವ ನೆಪದಲ್ಲಿ ವರ್ಷಕ್ಕೆ ೫ ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು ಸರಕಾರವು ಪಡೆಯುವ ಉದ್ದೇಶಹೊಂದಿದೆ. ಎಲ್ಲಾ ಕಟ್ಟಡ ಕಾರ್ಮಿಕರು ಸಮಯಕ್ಕೆ ಸರಿಯಾಗಿ ಬಸ್ ನಲ್ಲೆ ಪ್ರಯಾಣ ಮಾಡಿ ಕೆಲಸ ಮಾಡಲು ಆಗುವುದಿಲ್ಲ. ಅವರವರ ಬೈಕ್ ಮೂಲಕ ತೆರಳುವುದರಿಂದ ಸರಿಯಾಗಿ ತಲುಪಿ ಕೆಲಸ ನಿರ್ವಹಿಸಿದ ನಂತರ ವಾಪಸ್ ತೆರಳ ಬಹುದು. ಬಸ್ ಪಾಸ್ ನೆಪದಲ್ಲಿ ಕಟ್ಟಡ ಕಾರ್ಮಿಕ ನಿಧಿ ಹಣವನ್ನು ಯಾವ ಕಾರಣಕ್ಕೂ ತೆಗೆಯಬಾರದು. ತೆಗೆದ್ರೆ ನಮ್ಮ ಬೊಕ್ಕಸ ಖಾಲಿಯಾಗುತ್ತದೆ. ಮುಂದೆ ಕಲ್ಯಾಣ ಕೆಲಸಗಳಿಗೆ ಹಣ ಇಲ್ಲದಂತಾಗುತ್ತದೆ ಎಂದು ಖಂಡಿಸಿ ರಾಜ್ಯಾಧ್ಯಂತ ಕಟ್ಟಡ ಕಾರ್ಮಿಕರು ಹೋರಾಟಕ್ಕೆ ಇಳಿದಿದ್ದಾರೆ. ಈಗ ಕೆಎಸ್ಆರ್ಟಿಸಿಯಿಂದ ೪೫ ಕಿ.ಮೀ ಬಸ್ ಪಾಸ್ ಸೌಲಭ್ಯವನ್ನು ಕಟ್ಟಡ ಕಾರ್ಮಿಕರಿಗೆ ಒದಗಿಸಲಾಗುತ್ತಿದೆ. ಈ ಬಸ್ ಪಾಸ್ಗೆ ಮಾಸಿಕ ೧೪೦೦ ರೂಗಳನ್ನು ಒಬ್ಬ ಕಾರ್ಮಿಕನಿಗೆ ಮಂಡಳಿಯು ಕೆಎಸ್ಆರ್ಟಿಸಿಗೆ ಪಾವತಿಸುತ್ತಿದೆ. ಒಟ್ಟು ೩೭ ಲಕ್ಷ ಜನ ಕಟ್ಟಡ ಕಾರ್ಮಿಕರು ನಮ್ಮ ರಾಜ್ಯದಲ್ಲಿ ನೊಂದಣಿಯಾಗಿದ್ದು, ಅವರಲ್ಲಿ ೨೦ ಲಕ್ಷ ಜನಕ್ಕೆ ಪಾಸ್ ವಿತರಿಸಿದರೆ ಒಂದು ವರ್ಷಕ್ಕೆ ಅಂದಾಜು ೩೦೦೦ ಕೋಟಿಗಳಷ್ಟು ಮಂಡಳಿಯ ಹಣ ಖಾಲಿಯಾಗುತ್ತದೆ. ಮುಂದೆ ಯಾವುದೇ ಸೌಲಭ್ಯಗಳನ್ನು ನೀಡಲು ಮಂಡಳಿಯಲ್ಲಿ ಹಣ ಇರುವುದಿಲ್ಲ. ಯಾವ ಮುಂದಾಲೋಚನೆಯಿಲ್ಲದೇ ಬೇಜಾವಬ್ದಾರಿಯಾಗಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳಾಗಲೀ ಮಂತ್ರಿಗಳಾಗಲೀ ನಮಗೆ ಅವಶ್ಯಕತೆ ಇರುವುದಿಲ್ಲ. ನಮ್ಮ ಹೋರಾಟಕ್ಕೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಹಕರಿಸುವಂತೆ ಮನವಿ ಮಾಡುತ್ತೇವೆ ಎಂದರು. ಕೋವಿಡ್ ಹಂತದಲ್ಲಿ ಹಾಗೂ ನಂತರದಲ್ಲಿ ಫಲಾನುಭವಿಗಳಿಗೆ ಆಹಾರ ಕಿಟ್ ಹಾಗೂ ಆರೋಗ್ಯ ಕಿಟ್ಗಳನ್ನು ವಿತರಿಸಲಾಗಿದೆ. ನಂತರ ಅವರ ಕೆಲಸಗಳಿಗೆ ಅನುಕೂಲವಾಗುವಂತಹ ಉಪಕರಣಗಳು(ಗಾರೆಕೆಲಸ ಕಿಟ್, ಎಲಿಸ್ಟ್ರಿಷಿಯನ್ ಕಿಟ್, ಪೈಂಟರ್ ಕಿಟ್, ಮರಗೆಲಸದ ಕಿಟ್) ಗಳನ್ನು ನೀಡಲಾಗಿದೆ. ಈ ಉಪಕರಣದ ಕಿಟ್ಗಳು ಕಳಪೆಯಿಂದ ಕೂಡಿದ್ದು, ಕೆಲಸಕ್ಕೆ ಅನುಪಯುಕ್ತವಾಗಿವೆ. ತದನಂತರ ಮೆಡಿಕಲ್ ಕ್ಯಾಂಪ್ಗಳನ್ನು ನಡೆಸಿ ಕಟ್ಟಡ ಕಾರ್ಮಿಕರ ಆರೋಗ್ಯ ಪರೀಕ್ಷೆ ಮಾಡಿ ವರದಿ ನೀಡಲಾಗಿದೆ. ಈ ವರದಿಗಳು ತಪ್ಪಿನಿಂದ ಕೂಡಿವೆ ಹಾಗೂ ಅನುಪಯುಕ್ತವಾಗಿವೆ. ಈ ಎಲ್ಲಾ ಅನವಶ್ಯಕ ಯೋಜನೆಗಳಿಂದ ಮಂಡಳಿಯ ಹಣ ಪೋಲಾಗಿದೆ. ಇದರ ಹಿಂದೆ ಭ್ರಷ್ಟಾಚಾರ ಇರುವುದು ಕಂಡು ಬಂದಿರುತ್ತದೆ ಎಂದು ಗಂಭೀರವಾಗಿ ಆರೋಪಿಸಿದರು.

​ ​ ​ ​ ಕಟ್ಟಡ ಕಾರ್ಮಿಕರ ಸಂಘದವರ ಗಣನೆಗೆ ತೆಗೆದುಕೊಳ್ಳದೇ ತಮ್ಮದೇ ಸರ್ವಾಧಿಕಾರಿ ಧೋರಣೆಯಿಂದ ಮಂಡಳಿಯ ಹಣವನ್ನು ದುರುಪಯೋಗವಾಗುತ್ತಿರುವುದನ್ನು ಈಗಲೇ ನಿಲ್ಲಿಸದಿದ್ದರೆ ಇಡೀ ರಾಜ್ಯದಾದ್ಯಂತ ಕಟ್ಟಡ ಮತ್ತು ಇತರೆ ನಿರ್ಮಾಣ ಸಂಘಟನೆಗಳು ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

​ ​ ​ ​ ​ ​ ​ ಪ್ರತಿಭಟನೆಯಲ್ಲಿ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ಅಧ್ಯಕ್ಷ ಹೆಚ್.ಟಿ. ರಾಮೇಗೌಡ, ಸಂಘದ ಅಧ್ಯಕ್ಷ ಹೆಚ್.ವಿ. ಸ್ವಾಮಿ ಕಟ್ಟಡ ಕಾರ್ಮಿಕ ವಿವಿಧ ಸಂಘದ ಅಧ್ಯಕ್ಷರಾದ ಮಂಜೇಗೌಡ, ಮೋಹನ್ ಕುಮಾರ್, ನಾಗೇಶ್, ರಾಜೀವ್ ಇತರರು ಉಪಸ್ಥಿತರಿದ್ದರು.

- Advertisement -

Latest Posts

Don't Miss