Health tips:
ಟೊಮೆಟೊ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗು ಇದು ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಹಾಗು ಇದರ ಬಳಕೆಯಿಂದ ಸೌಂದರ್ಯವು ಹೆಚ್ಚುತ್ತದೆ ಟೊಮೇಟೊ ನಿಮ್ಮ ಚರ್ಮವನ್ನು ಅತಿ ನೇರಳೆ ಕಿರಣಗಳಿಂದ ರಕ್ಷಿಸುತ್ತದೆ ಹಾಗು ಮುಖದ ಕಾಂತಿಯನ್ನು ಹೆಚ್ಚಿಸುವ ಗುಣ ಹೊಂದಿದೆ ಆದರೆ ಟೊಮೆಟೊವನ್ನು ಹೆಚ್ಚು ಬಳಸಿದರೆ ಅನೇಕ ಸೈಡ್ ಎಫೆಕ್ಟ್ಗಳು ಉಂಟಾಗಬಹುದು ಹಾಗಾದರೆ ಟೊಮ್ಯಾಟೋವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಎದುರಾಗುವ ಸಮಸ್ಯೆಗಳು ಯಾವುವು ಎಂಬುದನ್ನು ತಿಳಿಯೋಣ.
ಬದಲಾದ ಜೀವನ ಶೈಲಿಯಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ತುಂಬಾ ದುರ್ಬಲವಾಗಿದೆ, ಇದೇ ಕಾರಣದಿಂದ ನಾವು ದಿನಾಲು ಸೇವನೆ ಮಾಡುವ ಕೆಲವೊಂದು ಆಹಾರ ಪದಾರ್ಥಗಳು ಸ್ವಲ್ಪ ಮಿತಿ ಮೀರಿದರೆ ನಮಗೆ ಆರೋಗ್ಯ ಸಮಸ್ಯೆಗಳು ಕಾಡುವುದು ಖಂಡಿತ ,ಬೇರೆ ದೇಶಗಳಲ್ಲಿ ಇತ್ತೀಚಿಗೆ ನಡೆಯುತ್ತಿರುವ ಸಂಶೋಧನೆಗಳಲ್ಲಿ ಇಂತಹ ಒಂದು ಅಂಶ ಬಯಲಾಗಿದೆ ಟೊಮೆಟೋ ಹಣ್ಣುಗಳನ್ನು ಹೆಚ್ಚಾಗಿ ತಿಂದರೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ .
ಟೊಮೆಟೊ ಹಣ್ಣುಗಳು ಹುಳಿ ಮತ್ತು ಸಿಹಿಯ ಮಿಶ್ರಣ ಹೊಂದಿರುತ್ತದೆ ಇವುಗಳಲ್ಲಿ ‘ಮ್ಯಾಲಿಕ್ ಆಸಿಡ್ ‘ ಮತ್ತು ‘ ಸಿಟ್ರಿಕ್ ಆಸಿಡ್ ‘ ಎಂಬ ಎರಡು ಆಮ್ಲೀಯ ಅಂಶಗಳು ಇದ್ದು, ಇವುಗಳು ನಮ್ಮ ಹೊಟ್ಟೆಯಲ್ಲಿ ವಿಪರೀತ ಗ್ಯಾಸ್ಟಿಕ್ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇದೆ ಹಾಗಾಗಿ ಅಡುಗೆಯಲ್ಲಿ ಅತಿ ಹೆಚ್ಚು ಟೊಮೇಟೊ ಬಳಕೆ ಮಾಡಿ ಸೇವಿಸುವವರಿಗೆ ಯಾವಾಗಲೂ ಎದೆಯುರಿ ಮತ್ತು ವಿಪರೀತ ಗ್ಯಾಸ್ಟಿಕ್ ಸಮಸ್ಯೆ ಕಾಡುತ್ತದೆ. ಒಂದು ವೇಳೆ ಈಗಾಗಲೇ ನೀವು ನಿಮ್ಮ ಜೀರ್ಣ ವ್ಯವಸ್ಥೆಯ ಅನಾರೋಗ್ಯವನ್ನು ಅನುಭವಿಸುತ್ತಿದ್ದರೆ ನಿಮ್ಮ ದಿನ ನಿತ್ಯದ ಆಹಾರ ಪದ್ಧತಿಯಲ್ಲಿ ಟೊಮ್ಯಾಟೋ ವನ್ನು ಮಿತಿಯಾಗಿ ಬಳಸಿ.
ಟೊಮ್ಯಾಟೊದಲ್ಲಿ ಕ್ಯಾಲ್ಸಿಯಂ ಮತ್ತು ಆ್ಯಕ್ಸಲೇಟ್‌ಗಳು ಹೇರಳವಾಗಿದ್ದು ಇವು ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಆದಕಾರಣ ಟೊಮ್ಯಾಟೊವನ್ನು ಅತಿಕಡಿಮೆ ಸೇವಿಸಿದರೆ ಒಳ್ಳೆಯದು ಹೆಚ್ಚು ಟೊಮೆಟೊ ಸೇವನೆಯಿಂದ ಕಿಡ್ನಿ ಸ್ಟೋನ್ ಗೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ,ಟೊಮೆಟೊದಲ್ಲಿ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾ ಇದೆ ಇದು ದೇಹವನ್ನು ಪ್ರವೇಶಿಸಿದಾಗ ಅತಿಸಾರವು ಸಹ ಸಂಭವಿಸಬಹುದು.
ಅನಾರೋಗ್ಯದಿಂದ ಪಾರಾಗಲು ಸೀಮಿತ ಪ್ರಮಾಣದ ಟೊಮ್ಯಾಟೋಗಳನ್ನು ಸೇವಿಸಬೇಕು ಇದನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತದಲ್ಲಿ ಲೈಕೋಪಿನ್ ಪ್ರಮಾಣವು ಹೆಚ್ಚಾಗುವ ಸಾಧ್ಯತೆ ಇದೆ ಲೈಕೋಪೆನ್ ದೇಹಕ್ಕೆ ಒಳ್ಳೆಯದು ಆದರೆ ಇದು ವಿಪರೀತವಾದಾಗ ಲೈಕೋಪೆನೊಡರ್ಮಿಯಾದಂತಹ ಸಮಸ್ಯೆಗಳು ಕಾಡುತ್ತದೆ ,ಇದು ಟೊಮೇಟೊ ಹೆಚ್ಚು ಸೇವನೆಯಿಂದ ಬರುವಂತಹ ಸಮಸ್ಯೆಯಾಗಿದೆ .
ಪ್ರತಿದಿನ 75 ಮಿ.ಗ್ರಾಂ ಗಿಂತ ಹೆಚ್ಚು ಟೊಮ್ಯಾಟೊಗಳನ್ನು ಸೇವನೆ ಮಾಡುವುದು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಟೊಮೆಟೊವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಕೀಲುಗಳಲ್ಲಿ ಊತ ಮತ್ತು ನೋವು ಉಂಟಾಗಬಹುದು.ಈ ಸಂಯುಕ್ತವು ಅಂಗಾಂಶಗಳಲ್ಲಿ ಕ್ಯಾಲ್ಸಿಯಂ ಅನ್ನು ಉಂಟುಮಾಡುತ್ತದೆ, ಇದು ಕೀಲುನೋವು ಮತ್ತು ಊತಕ್ಕೆ ಕಾರಣವಾಗುತ್ತದೆ.
ಟೊಮೆಟೊದಲ್ಲಿ‘ ಹಿಸ್ಟಮೈನ್ ‘ ಎಂಬ ಅಂಶ ಹೆಚ್ಚಾಗಿರುವ ಕಾರಣ ಇದು ಚರ್ಮದ ಮೇಲೆ ಅಲರ್ಜಿ ಮತ್ತು ಕಲೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ ಟೊಮೆಟೋ ಹಣ್ಣುಗಳಿಗೆ ಅಲರ್ಜಿ ಇರುವವರು ಇದರ ಸೇವನೆಯಿಂದ ದೂರ ಉಳಿದರೆ ಒಳ್ಳೆಯದು. ಏಕೆಂದರೆ ಟೊಮೇಟೊ ಹಣ್ಣುಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ಬಳಕೆ ಮಾಡಿಕೊಂಡು ಸೇವನೆ ಮಾಡಿದರೆ ಬಾಯಿ, ಮುಖ ಮತ್ತು ನಾಲಿಗೆ ಭಾಗ ಊದಿಕೊಂಡು ವಿಪರೀತ ಸೀನುವಿಕೆ ಮತ್ತು ಗಂಟಲಿನ ಕಿರಿಕಿರಿ ಎದುರಾಗುವ ಸಾಧ್ಯತೆ ಇರುತ್ತದೆ. ಅತಿಯಾದ ಸೇವನೆ ನಿಮ್ಮ ಆರೋಗ್ಯವನ್ನು ಖಂಡಿತ ಹಾಳು ಮಾಡುತ್ತದೆ .
ನಿಮಗೆ ಈ ಸಮಸ್ಯೆ ಕಾಡುತ್ತಿದ್ದರೆ ಬಾದಾಮಿಯನ್ನು ತಿಂದರೆ ಅಪಾಯ ತಪ್ಪಿದಲ್ಲ…..!
ವಿರುದ್ಧ ಆಹಾರ ಸೇವನೆಯಿಂದ ಆಹಾರವು ವಿಷವಾಗಿ ಪರಿವರ್ಥನೆ ಯಾಗುತ್ತದೆಯ …?