Film News:
ನಟ ರಮೇಶ್ ಅರವಿಂದ್ ಯಕ್ಷ ಯುವರಾಜನಾಗಿ ಮಿಂಚಿದ್ದಾರೆ. ಬಹುಭಾಷಾ ಕಲಾವಿದ ರಮೇಶ್ ಅರವಿಂದ್ ಯಕ್ಷಗಾನದ ವೇಷ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಹಲವು ದಶಕಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಲು ಉಡುಪಿಗೆ ಬಂದಿದ್ದ ರಮೇಶ್ ಅರವಿಂದ್, ನಟ, ಬರಹಗಾರ, ಸ್ಪೂರ್ತಿ ತುಂಬುವ ಭಾಷಣಕಾರ, ನಿರೂಪಕ, ರಮೇಶ್ ಅರವಿಂದ್ ಉಡುಪಿಯ ಮನೋವೈದ್ಯ ಡಾ. ವಿರೂಪಾಕ್ಷ ದೇವರು ಮನೆಯವರೊಂದಿಗೆ ಫೋಕಸ್ ರಾಘು ಅವರ ಕುದ್ರು ನೆಸ್ಟ್ ಭೇಟಿ ನೀಡಿದ್ದರು. ಪರಿಸರ, ನದಿ, ಮನೆ, ಕ್ರಿಯಾಶೀಲ ವಿನ್ಯಾಸವನ್ನು ಕಂಡು ಮೆಚ್ಚುಗೆ ಸೂಚಿಸಿದ್ದರು. ರಾಘು ಅವರ ಛಾಯಾಚಿತ್ರಗಳನ್ನು ಕಂಡು ಬೆರಗು ವ್ಯಕ್ತಪಡಿಸಿ ತನಗೂ ಫೋಟೋ ಶೂಟ್ ಮಾಡ್ತೀರಾ ಎಂದು ಕೇಳಿದ್ದರು. ಅದರಂತೆ ರಮೇಶ್ ಅರವಿಂದ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಉಡುಪಿಯ ಪ್ರವಾಸದಲ್ಲಿರುವ ರಮೇಶ್ ಅರವಿಂದ್ ಕೂದ್ರು ನೆಸ್ಟ್ ಗೆಸ್ಟ್ ಹೌಸಿಗೆ ಭೇಟಿ ಕೊಟ್ಟಿದ್ದರು. ಈ ಸಮಯದಲ್ಲಿ ಬಹುಕಾಲದ ಕನಸಾಗಿದ್ದ ಯಕ್ಷಗಾನದ ವೇಷವನ್ನು ಹಾಕಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ವೇಷ ಮತ್ತು ಬಣ್ಣಗಾರಿಕೆಯನ್ನು ಕಲಾವಿದ ಶೈಲೇಶ್ ವ್ಯವಸ್ಥೆ ಮಾಡಿದ್ದರು. ಅಂತರಾಷ್ಟ್ರೀಯ ಛಾಯಾಗ್ರಾಹಕ ಫೋಕಸ್ ರಾಘು , ರಮೇಶ್ ಅರವಿಂದ್ ಅವರ ಫೋಟೋ ಶೂಟ್ ಮಾಡಿದ್ದಾರೆ.
ಯಕ್ಷಗಾನ ಕಲೆಯ ಬಗ್ಗೆ ರಮೇಶ್ ಅರವಿಂದ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಛಾಯಾಗ್ರಹಣದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ, ಉಡುಪಿ ಕೊಡಂಗಳದ ರಾಘವೇಂದ್ರ ಫೋಟೋ ಕ್ಲಿಕ್ ಮಾಡಿದ್ದಾರೆ. ಸುರ‍್ಣಾ ನದಿ ತೀರದಲ್ಲಿರುವ ಕುದ್ರು ನೆಸ್ಟ್ ಎಂಬ ಹೋಮ್ ಸ್ಟೇಯಲ್ಲಿ ರಮೇಶ್ ಅರವಿಂದ್ ಸಾಂಪ್ರದಾಯಿಕವಾಗಿ ಬಣ್ಣಹಚ್ಚಿದ್ದಾರೆ.