Tuesday, December 24, 2024

Latest Posts

‘ಪುನೀತ್ ಫುಡ್ ಫೆಸ್ಟಿವಲ್’ ಹೇಗಿದೆ ಫುಡ್ ಮೆನು..?!

- Advertisement -

Film News:

ಕರ್ನಾಟಕದಾದ್ಯಂತ ‘ಪುನೀತ್ ಫುಡ್ ಫೆಸ್ಟಿವಲ್’ ಶುರುವಾಗುತ್ತಿದೆ. ಅಪ್ಪು ಪರ್ವದಲ್ಲಿ ಗಮನ ಸೆಳೆಯಲಿದೆ ವೈರೈಟಿ ಫುಡ್ ..? ಹಾಗಿದ್ರೆ ಈ ಫುಡ್ ಫೆಸ್ಟಿವಲ್ ನಲ್ಲಿ ಯಾವ್ಯಾವ ಆಹಾರಗಳು ಇರಲಿವೆ..? ಹೇಗಿದೆ ಮೆನು ಕಾರ್ಡ್..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..

ಅಪ್ಪು ಕನಸಿನ ಕೂಸು ‘ಗಂಧದ ಗುಡಿ’ ಬಿಡುಗಡೆಯಾಗುತ್ತಿರುವ ಬೆನ್ನಲ್ಲೇ ಅಭಿಮಾನಿಗಳು ಹಬ್ಬ ಆಚರಿಸುವುದಕ್ಕೆ ಸಜ್ಜಾಗಿದ್ದಾರೆ. ಭೋಜನ ಪ್ರಿಯ ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಕರ್ನಾಟಕದಾದ್ಯಂತ ವಿನೂತನ ಪ್ರಚಾರ ಮಾಡಲು ಸಜ್ಜಾಗಿದ್ದು, ಅಪ್ಪು ಹೆಸರಲ್ಲಿ ಫುಡ್‌ಫೆಸ್ಟಿವಲ್ ನಡೆಯಲಿದೆ. ಅದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇದೇ ತಿಂಗಳು (ಅಕ್ಟೋಬರ್ 29ಕ್ಕೆ ) ಒಂದು ವರ್ಷ ಆಗುತ್ತೆ. ಒಂದು ದಿನ ಮುನ್ನ (ಅಕ್ಟೋಬರ್ 28)ರಂದು ‘ಗಂಧದ ಗುಡಿ’ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈ ಬೆನ್ನಲ್ಲೇ ಅಭಿಮಾನಿಗಳು ಕರ್ನಾಟದಾದ್ಯಂತ ವಿನೂತನ ಪ್ರಚಾರ ಮಾಡಲು ಮುಂದಾಗಿದ್ದಾರೆ. ಅಪ್ಪು ಭೋಜನ ಪ್ರಿಯ ಅನ್ನೋದು ಗೊತ್ತಿದೆ. ಹೀಗಾಗಿ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ರಾಜ್ಯಾದ್ಯಂತ ‘ಪುನೀತ್ ಫುಡ್ ಫೆಸ್ಟಿವಲ್’ ಅನ್ನು ಎರಡು ದಿನಗಳ ಕಾಲ ನಡೆಸಲು ಮುಂದಾಗಿದ್ದಾರೆ. ಅಕ್ಟೋಬರ್ 22 ಹಾಗೂ 23 ಈ ಎರಡು ದಿನಗಳ ಕಾಲ ನಡೆಯಲಿದೆ.
ಕರ್ನಾಟಕದ ಮೂಲೆ ಮೂಲೆಯಲ್ಲಿ ಪುನೀತ್ ಫುಡ್ ಫೆಸ್ಟಿವಲ್ ಅನ್ನು ಆಯೋಜನೆ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಎಷ್ಟು ಸಾಧ್ಯವೋ ಅಷ್ಟು ಹೊಟೇಲ್‌ಗಳಲ್ಲಿ ಪುನೀತ್ ರಾಜ್‌ಕುಮಾರ್ ಇಷ್ಟು ಪಡುತ್ತಿದ್ದ ಆಹಾರವನ್ನು ಸಿದ್ಧಪಡಿಸಲಿದ್ದಾರೆ. ಈ ಮೆನ್ಯೂಗಳಿಗೆ ‘ಫ್ಲೇವರ್ಸ್ ಆಫ್ ಗಂಧದ ಗುಡಿ’ ಎಂದು ಹೆಸರಿಡಲಾಗಿದೆ. ಸಸ್ಯಾಹಾರಿ ಹೊಟೇಲ್‌ಗಳಲ್ಲಿ ವೆಬ್ ಮೆನ್ಯೂ ಹಾಗೂ ಮಾಂಸಹಾರಿ ಹೊಟೇಲ್‌ಗಳಲ್ಲಿ ನಾನ್ ವೆಜ್ ಇರುತ್ತೆ. ಈ ಆಹಾರವನ್ನು ಹಣ ನೀಡಿ ಜನರು ಸವಿಯಬಹುದು.

ಅಪ್ಪು ಭೋಜನ ಪ್ರಿಯ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಭೋಜನ ಪ್ರಿಯ ಅನ್ನೋದು ಗೊತ್ತೇ ಇದೆ. ಅದರಲ್ಲೂ ಬಿರಿಯಾನಿ ಅಂದ್ರೆ, ನಾನ್ ವೆಜ್ ಅಂದ್ರೆ ಎಲ್ಲಿಲ್ಲದ ಪ್ರೀತಿ. ಈಗಾಗಲೇ ಅವರು ಇಷ್ಟ ಪಡುವ ಫುಡ್ ಬಗ್ಗೆ ಹೇಳಿಕೊಂಡಿದ್ದಾರೆ. ಅದನ್ನು ಆಧಾರವಾಗಿಟ್ಟುಕೊಂಡೇ ಫುಡ್ ಮೆನ್ಯು ಸಿದ್ಧವಾಗುತ್ತಿದೆ. ಸದ್ಯದ್ರಲ್ಲೇ ಅಪ್ಪು ಅಭಿಮಾನಿಗಳು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿಲಿದ್ದಾರೆ. ಪುನೀತ್ ರಾಜ್‌ಕುಮಾರ್ ಫುಡ್‌ಫೆಸ್ಟಿವಲ್‌ನಲ್ಲಿ ಭಾಗವಹಿಸಿದವರಿಗೆ ಸರ್ಪ್ರೈಸ್ ಕೂಡ ಇರುತ್ತೆ.

ಯಕ್ಷಗಾನ ಕಲಾವಿದನಾದ್ರಾ ಸಿನಿಮಾ ನಟ…?!

ಪುನೀತ್ ಪರ್ವಕ್ಕೆ ದೊಡ್ಮನೆ ಕುಟುಂಬದ ಭರ್ಜರಿ ತಯಾರಿ…!

ತಂದೆಯ ಹಾದಿ ಹಿಡಿದ ಸ್ಟಾರ್ ನಟನ ಮಗ..?! ನೆಟ್ಟಿಗರು ಫುಲ್ ಫಿದಾ…!

- Advertisement -

Latest Posts

Don't Miss