State News:
ಚನ್ನರಾಯಪಟ್ಟಣ. ನುಗ್ಗೆಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಾರಿ ಗೋಲ್ ಮಾಲ್ ನಡೆದಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಆರೋಪಿಸಿದ್ದಾರೆ
ಅವರು ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನುಗ್ಗೆಹಳ್ಳಿ ಗ್ರಾಮ ಪಂಚಾಯಿತಿ ಪಿ ಡಿ ಓ ಹರೀಶ್ ಎಂಬುವವರು ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿ ನಕಲಿ ಬಿಲ್ಲುಗಳನ್ನು ಸೃಷ್ಟಿ ಮಾಡಿ ಹಣವನ್ನು ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಹಾಗೂ ಈ ಹಣ ದುರುಪಯೋಗದ ಬಗ್ಗೆ ಸದಸ್ಯರು ದಾಖಲಾತಿಗಳು ಏನಾದರೂ ಕೇಳಿದರೆ ಜಾತಿ ನಿಂದನೆ ಮಾಡುತ್ತಿದ್ದಾರೆ ಎಂದು ಹೇಳಿ ದೂರು ದಾಖಲಿಸುತ್ತೇನೆ ಎಂದು ಬೆದರಿಕೆಯನ್ನು ಸಹ ಒತ್ತುತ್ತಿರುವುದು ಎಷ್ಟರಮಟ್ಟಿಗೆ ಸರಿ ಒಂದೇ ದಿನ ಸುಮಾರು 6, 40,00 ರೂಪಾಯಿ ಚೆಕ್ಕನ್ನು ನೀಡಿ ಈ ಚೆಕ್ಕಿಗೆ ಸಂಬಂಧಿಸಿದಂತೆ ಬಿಲ್ ಗಳು ಇರುವುದಿಲ್ಲ ಅದೇ ರೀತಿ ಕಂಪ್ಯೂಟರ್ ರಿಪೇರಿಗಾಗಿ 65,000 ನಕಲಿ ಬಿಲ್ಲನ್ನು ಸಹ ನೀಡಿರುತ್ತಾರೆ ಹಾಗೂ ಅಧಿಕಾರಿಗಳು ಕಚೇರಿ ವೀಕ್ಷಣೆಗಾಗಿ ಬಂದಿರುವ ಸಂದರ್ಭದಲ್ಲಿ ಊಟದ ಬಿಲ್ 15 ಸಾವಿರ ರೂಪಾಯಿ ಎಂದು ಸುಳ್ಳು ದಾಖಲಾತಿಯನ್ನು ಸೃಷ್ಟಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನುಗ್ಗೆಹಳ್ಳಿಗ್ರಾಮ ಪಂಚಾಯತಿ ಸದಸ್ಯರಾದ ಮಂಜಪ್ಪ ಕಿರಣ್ ಸವಿತಾ ರೇಷ್ಮಾ ಬಾನು ರಮ್ಯಾ ಹಾಜರಿದ್ದರು.