Thursday, August 21, 2025

Latest Posts

ಟ್ಯೂಶನ್ ಗೆ ಹೋಗಿದ್ದ ಬಾಲಕಿ ಶವವಾಗಿ ಪತ್ತೆ…!

- Advertisement -

State News:

ಈ ಘಟನೆ ಮಳವಳ್ಳಿ ಪಟ್ಟಣದ ಮೈಸೂರ್ ರಸ್ತೆಯಲ್ಲಿ ನಡೆದಿದೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ಮಧ್ಯಾಹ್ನ 10 ವರ್ಷದ ಬಾಲಕಿ ಟ್ಯೂಶನ್ ಗಾಗಿ  ಮನೆ ಇಂದ ಹೊರಟಿದ್ದಳು . ಆದರೆ ಸಂಜೆಯಾದರೂ ಬಾಲಕಿ ಮನೆಗೆ ಬರದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಬಾಲಕಿಯ ಮೃತದೇಹ ಟ್ಯೂಷನ್ ನಡೆಸುತ್ತಿದ್ದ ನಿವಾಸದ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿದ್ದ ಮನೆಯ ಸಂಪಿನಲ್ಲಿ ಪತ್ತೆಯಾಗಿದೆ.

ಇನ್ನು ಆ ಬಾಲಕಿಯ ಮೃತದೇಹವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಬಾಲಕಿಯ ಕುಟುಂಬಸ್ಥರ ಆಕ್ರಂದನದಲ್ಲಿ ಮುಗಿಲು ಮುಟ್ಟಿದೆ.

ಬಾಲಕಿಯ ಮೃತದೇಹ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಬಾಲಕಿಯನ್ನು ಅತ್ಯಾಚಾರ ಮಾಡಿ ಬಳಿಕ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಳವಳ್ಳಿ ಟೌನ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚನ್ನರಾಯಪಟ್ಟಣ ನುಗ್ಗೆಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಾರಿ ಗೋಲ್ ಮಾಲ್ ..!

ಅಂಚೆ ಇಲಾಖೆ ಭ್ರಷ್ಟ ನೌಕರನಿಗೆ ಚಳಿ ಬಿಡಿಸಿದ ಸಾರ್ವಜನಿಕರು..!

ವರ್ಷಕ್ಕೊಮ್ಮೆ ದರ್ಶನ ನೀಡೋ‌ ಹಾಸನಾಂಬೆ ಉತ್ಸವಕ್ಕೆ ಸಕಲ ತಯಾರಿ:

- Advertisement -

Latest Posts

Don't Miss