Friday, November 22, 2024

Latest Posts

ಥೈರಾಯ್ಡ್ ಸಮಸ್ಯೆಗೆ ಸೂಪರ್ ಫುಡ್ …!

- Advertisement -

Health tips:

ಥೈರಾಯ್ಡ್ ಸಮಸ್ಯೆ ಇಂದ ಬರುವ ಸಮಸ್ಯೆಗಳು ಒಂದೆರಡಲ್ಲ ಆಹಾರ ಸೇವನೆಯಲ್ಲಂತೂ ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಅನ್ನುವ ಬಗ್ಗೆ ಬಹಳಷ್ಟು ಗೊಂದಲಗಳು ಕಾಡುತ್ತಿರುತ್ತದೆ .ಈಗಿನ ಪರಿಸ್ಥಿತಿಯಲ್ಲಿ ಅನೇಕ ಪುರುಷರು ,ಮಹಿಳೆಯರು, ಮಕ್ಕಳು ಥೈರಾಯ್ಡ್ ಸಮಸ್ಯೆಇಂದ ಬಳಲುತ್ತಿದ್ದಾರೆ. ಮುಖ್ಯವಾಗಿ ಒತ್ತಡದ ಜೀವನಶೈಲಿ ಆಹಾರದಲ್ಲಿ ಪೋಷಕಾಂಶಗಳ ಕೊರತೆ ಇದಕ್ಕೆ ಕಾರಣವಾಗುತ್ತದೆ.

ಥೈರಾಯ್ಡ್ ಗ್ರಂಥಿಯು ಕುತ್ತಿಗೆ ಭಾಗದಲ್ಲಿ ಚಿಟ್ಟೆಯ ಆಕಾರದಲ್ಲಿರುತ್ತದೆ ಇದು ನಮ್ಮ ದೇಹದ ಚಯಾಪಚಯ ಕ್ರಿಯೆಗಳಿಗೆ ಪ್ರಮುಖವಾದ ಪಾತ್ರ ವಹಿಸುತ್ತದೆ, ಉಸಿರಾಟ, ಹೃದಯಬಡಿತ, ಜೀರ್ಣಕ್ರಿಯೆ ಮೊದಲಾದ ಚಟುವಟಿಕೆಗಳು ಸರಿಯಾದ ಕ್ರಮದಲ್ಲಿ ಆಗುವಂತೆ ನೋಡಿಕೊಳ್ಳುತ್ತದೆ. ಥೈರಾಯ್ಡ್ ಕಾರ್ಯ ನಿರ್ವಹಣೆ ಸರಿಯಾಗಿ ಆಗದಿದ್ದಲ್ಲಿ ಅಜೀರ್ಣ ಸಮಸ್ಯೆ, ಮಲಬದ್ಧತೆ, ಕೂದಲು ಉದುರುವುದು, ತೂಕ ಕಡಿಮೆಯಾಗುವುದು, ಅಥವಾ ತೂಕ ಹೆಚ್ಚಗುವುದು ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಹೀಗಾಗಿ ಥೈರಾಯ್ಡ್ ಬಗ್ಗೆ ಹೆಚ್ಚು ಗಮನ ಅರಿಸುವುದು ಒಳ್ಳೆಯದು.

ಥೈರಾಯ್ಡ್ ಸಮಸ್ಯೆಯನ್ನು ಕಡಿಮೆ ಮಾಡಲೆಂದೇ ನಿರ್ಧಿಷ್ಟವಾಗಿ ಯಾವುದೇ ಆಹಾರಕ್ರಮವಿಲ್ಲ ಆದರೆ ಉತ್ತಮ ಫೈಬರ್, ಸತು, ಸೆಲೆನಿಯಮ್, ವಿಟಮಿನ್ ಡಿ ಇರುವಂತಹ ಆಹಾರಗಳ ಸೇವನೆ ಉತ್ತಮವಾಗಿದೆ ಥೈರಾಯ್ಡ್ ಸಮಸ್ಯೆಗೆ ಸಂಬಂಧಿಸಿದ ಹಲವು ರೋಗಲಕ್ಷಣಗಳಿಗೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಹೀಗಾಗಿ ಥೈರಾಯ್ಡ್ ನಿಂದ ದೂರವಿರಲು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮ್ಮ ಆಹಾರದಲ್ಲಿ ಥೈರಾಯ್ಡ್ ಕಾರ್ಯವನ್ನು ಹೆಚ್ಚಿಸಲು ಸಾಬೀತಾಗಿರುವ ಹಲವಾರು ಆಹಾರಗಳನ್ನು ಸೇರಿಸಬೇಕಾಗಿದೆ ಆದರೆ ಆ ಆಹಾರಗಳು ಯಾವುವು ?ಎಂದು ತಿಳಿದು ಕೊಳ್ಳೋಣ .

ಮೊದಲನೆಯದಾಗಿ ನೆಲ್ಲಿಕಾಯಿ: ನೆಲ್ಲಿಕಾಯಿ ಅಥವಾ ಆಮ್ಲ ಎಂದು ಕರೆಯಲ್ಪಡುವ ಈ ಹಣ್ಣಿನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ . ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆಮ್ಲ ಕಿತ್ತಳೆ ಹಣ್ಣಿನ ಎಂಟು ಪಟ್ಟು ವಿಟಮಿನ್ ಸಿ ಮತ್ತು ದಾಳಿಂಬೆಯ 17 ಪಟ್ಟು ವಿಟಮಿನ್ ಸಿ ನೀಡುತ್ತದೆ.ಅಲ್ಲದೆ ಇದು ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮವಾದ ಟಾನಿಕ್ ಎಂದು ಹೇಳಬಹುದು ಹಾಗೂ ಕೂದಲು ಬಿಳಿಯಾಗುವುದನ್ನು ತಡೆಗಟ್ಟುತ್ತದೆ, ತಲೆಹೊಟ್ಟು ಇಲ್ಲವಾಗಿಸುತ್ತದೆ ಕೂದಲನ್ನು ಬಲಪಡಿಸುತ್ತದೆ ಮತ್ತು ರಕ್ತ ಸಂಚಲನೆ ಹೆಚ್ಚಿಸುತ್ತದೆ,ಇದರಿಂದ ನಿಮ್ಮ ಕೂದಲು ಸೊಂಪಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಎರಡನೆಯದು ತೆಂಗಿನಕಾಯಿ: ತೆಂಗಿನಕಾಯಿ ಥೈರಾಯ್ಡ್ ಸಮಸ್ಯೆಗೆ ಅತ್ಯುತ್ತಮವಾದ ಆಹಾರವಾಗಿದೆ, ಹಸಿ ತೆಂಗಿನಕಾಯಿ ಅಥವಾ ಬೇಯಿಸಿದ ತೆಂಗಿನಕಾಯಿ ಯಾವುದಾದರೂ ಇದು ಥೈರಾಯ್ಡ್ ಸಮಸ್ಯೆಗೆ ಉತ್ತಮವಾಗಿದೆ.ತೆಂಗಿನಕಾಯಿಯಲ್ಲಿ ಮಧ್ಯಮ ಸರಪಳಿ ಕೊಬ್ಬಿನಾಮ್ಲಗಳಿದ್ದು, ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ .ಹಾಗೂ ಕುಂಬಳಕಾಯಿ ಬೀಜಗಳಲ್ಲಿ zinc ಪ್ರಮಾಣ ಅಧಿಕವಾಗಿದೆ ಇದು ದೇಹದ ಇತರ ಜೀವಸತ್ವಗಳು ಮತ್ತು ಖನಿಜಗಳನ್ನು ಹೀರಿಕೊಳ್ಳಲು ಮತ್ತು ಥೈರಾಯ್ಡ್ ಹಾರ್ಮೋನುಗಳ ಸಮತೋಲನಕ್ಕೆ ಅಗತ್ಯವಾಗಿರುತ್ತದೆ.

ಹೆಸರುಕಾಳಿನಲ್ಲಿ ,ಪ್ರೋಟೀನ್,Antioxidantsಗಳ, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು,ಜೀವಸತ್ವಗಳು ಮತ್ತು ಖನಿಜಗಳು ಹೆಸರುಕಾಳಿನಲ್ಲಿ ಹೇರಳವಾಗಿರುತ್ತದೆ ,ಹಾಗೂ ಇವು ಹೆಚ್ಚಿನ ಫೈಬರ್ ಹಾಗೂ ಅಯೋಡಿನ್ಗಳನ್ನು ಹೊಂದಿರುತ್ತದೆ. ಹೀಗಾಗಿ ಇದು ಅತ್ಯುತ್ತಮವಾದ ಆಹಾರವಾಗಿದೆ.ಇದಲ್ಲದೆ, ಹುರುಳಿ ಕಾಳು, ಕೇಸರಿ, ಬಾಳೆಹಣ್ಣು ಆಹಾರದಲ್ಲಿ ಸೇವಿಸುದುವುದರಿಂದ ಥೈರಾಯ್ಡ್ ಉತ್ತಮ ಕಾರ್ಯನಿರ್ವಹಣೆ ಯಾಗುತ್ತದೆ.

ಆದರೆ ಥೈರಾಯ್ಡ್ ಇರುವವರು ಈ ಆಹಾರವನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ
ಥೈರಾಯ್ಡ್ ಇರುವವರು ಕೆಲವೊಂದು ಆಹಾರವನ್ನು ಸೇವಿಸದೇ ಇರುವುದು ಒಳ್ಳೆಯದು. ಸಂಸ್ಕರಿಸಿದ ಆಹಾರ, ಜಂಕ್ಫುಡ್, ಕೊಬ್ಬಿನಾಂಶವುಳ್ಳ ಆಹಾರ, ಮಸಾಲೆಯುಕ್ತ ಆಹಾರದ ಸೇವನೆ ಒಳ್ಳೆಯದಲ್ಲ. ಎಲೆಕೋಸು, ಹೂಕೋಸುಗಳನ್ನು ಸಹ ನಿಯಮಿತ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.

ನೀವು ಟೊಮ್ಯಾಟೊ ಪ್ರಿಯರಾ..? ಹಾಗಿದ್ರೆ ಈ ವಿಷಯದ ಬಗೆ ಜಾಗೃತರಾಗಿರಿ .

ಈ ಆರೋಗ್ಯ ಸಮಸ್ಯೆ ಇರುವವರು ಮೊಳಕೆಕಾಳು ತಿಂದರೆ ಅಪಾಯ ಖಂಡಿತ ….!

ಸರ್ವ ರೋಗಕ್ಕೂ ರಾಮಬಾಣ ಸಿರಿಧಾನ್ಯ …!

 

- Advertisement -

Latest Posts

Don't Miss