ಬೆಂಗಳೂರು: ವಿಶ್ವಾಸಮತ ಯಾಚನೆ ಇಂದೇ ಆಗಬೇಕು ಅಂತ ಬಿಜೆಪಿ ಪಟ್ಟು ಹಿಡಿದಿದೆ. ಆದ್ರೆ ಸಂಜೆಯಾಗುತ್ತಲೇ ವರಸೆ ಬದಲಿಸಿದ ಸಿಎಂ ಕುಮಾರಸ್ವಾಮಿ, ಸ್ಪೀಕರ್ ರನ್ನು ಭೇಟಿಯಾಗಿ ಇನ್ನೆರಡು ದಿನ ಸಮಯ ನೀಡಲು ಕೋರಿದ್ದಾರೆ.
ಶುಕ್ರವಾರದ ಕಲಾಪದಲ್ಲಿ ಸೋಮವಾರ ವಿಶ್ವಾಸಮತ ಯಾಚನೆ ಮಾಡೋದು ಫೈನಲ್ ಅಂತ ಹೇಳಿದ್ದ ಸಿಎಂ ಕುಮಾರಸ್ವಾಮಿ ಇದೀಗ ಯಾಕೋ ತಮ್ಮ ನಿರ್ಧಾರ ಬದಲಿಸಿದ್ದಾರೆ. ಮಧ್ಯಾಹ್ನದವರೆಗೂ ಸದನದಲ್ಲಿ ಹಾಜರಿದ್ದ ಸಿಎಂ ಕುಮಾರಸ್ವಾಮಿ ಸ್ಪೀಕರ್ ರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ದಯವಿಟ್ಟು ಇನ್ನೆರಡು ದಿನ ವಿಶ್ವಾಸಮತ ಯಾಚನೆಗೆ ಸಮಯ ನೀಡಿ ಅಂತ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೊಪ್ಪದ ಸ್ಪೀಕರ್ ರಮೇಶ್ ಕುಮಾರ್ ಶುಕ್ರವಾರವೇ ಇಂದು ವಿಶ್ವಾಸಮತ ಯಾಚನೆ ಪೂರ್ಣಗೊಳಿಸೋ ಭರವಸೆ ನೀಡಲಾಗಿದೆ. ಇಂದೂ ಸಹ ವಿಶ್ವಾಸಮತ ಯಾಚನೆಯಾಗಲಿಲ್ಲವೆಂದರೆ ಬಿಜೆಪಿಯವರು ಪ್ರತಿಭಟನೆಗಿಳಿಯುತ್ತಾರೆ ಅಂತ ಉತ್ತರಿಸಿದ್ದಾರೆ. ಇನ್ನು ಸದನದಲ್ಲಿ ಬಿಜೆಪಿಯವರು ಎಷ್ಟು ಬೇಕಾದ್ರೂ ಪ್ರತಿಭಟನೆ ಮಾಡಿಕೊಳ್ಳಲಿ ನೀವು ಮಾತ್ರ ನಮಗೆ ಮತ್ತೆರಡು ದಿನ ಸಮಯ ಕೊಡಿ ಅಂತ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಸ್ಪೀಕರ್ ಪ್ರತಿಕ್ರಿಯೆಯಿಂದ ತುಸು ಬೇಸರಗೊಂಡಂತೆ ಭಾಸವಾಗಿರೋ ಸಿಎಂ ಕುಮಾರಸ್ವಾಮಿ ಸದನಕ್ಕೆ ಹಾಜರಾಗದೆ ವಿಧಾನಸೌಧದ ತಮ್ಮ ಕಚೇರಿಯಲ್ಲೇ ಏಕಾಂತವಾಗಿ ಕುಳಿತಿದ್ದಾರೆ ಎನ್ನಲಾಗಿದೆ. ಅಂದಹಾಗೆ ಮುಂಬೈನಲ್ಲಿ ಬೀಡುಬಿಟ್ಟು ಯಾರು ಏನೇ ಹೇಳಿದ್ರು ನಾವು ಮಾತ್ರ ನಿರ್ಧಾರ ಬದಲಿಸಲ್ಲ ಅಂತ ಹೇಳುತ್ತಿರುವ ಅತೃಪ್ತ ಶಾಸಕರನ್ನು ದೋಸ್ತಿಗಳು ಈವರೆಗೂ ಸಂಪರ್ಕಿಸಲು ಸಾಧ್ಯವಾಗದ ಇರೋದು ವಿಶ್ವಾಸಮತ ಮುಂದೂಡಿಕೆ ಮಾಡುತ್ತಿರೋದಕ್ಕೆ ಕಾರಣವಾಗಿದೆ.