Beauty tips:
ಇದೀಗ ಚಳಿಗಾಲ ಶುರುವಾಗಿದೆ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಯೆಂದರೆ ಸ್ಕಿನ್ ಡ್ರೈ ಆಗುವುದು ,ಯಾರು ಚಳಿಗಾಲದಲ್ಲಿ ತ್ವಚೆಯ ಆರೈಕೆಯ ಕಡೆಗೆ ಗಮನ ಕೊಡುತ್ತಾರೋ ಅವರು ಮೃದುವಾದ ತ್ವಚೆಯನ್ನು ಪಡೆಯಬಹುದು .ಸ್ಕಿನ್ ಡ್ರೈ ಯಿಂದ ತುರಿಕೆ, ಕೈಗಳು, ಕಾಲು ಒಡೆಯಲಾರಂಭಿಸುತ್ತದೆ, ಅಲ್ಲದೆ ತ್ವಚೆ ತುಂಬಾ ಬಿರುಕಾದರೆ ನೋವು ಕೂಡ ಸಂಭವಿಸುತ್ತದೆ, ಮುಂತಾದ ತೊಂದರೆಗಳು ಉಂಟಾಗುತ್ತದೆ. ಈ ಸಮಸ್ಯೆಗಳನ್ನು ತಡೆಗಟ್ಟಲು ನಾವೂ ಹೇಳುವ ಈ ಕ್ರಮಗಳನ್ನು ಅನುಸರಿಸಿದರೆ ಎಷ್ಟೋ ಸಮಸ್ಯೆಗಳನ್ನು ತಡೆಗಟ್ಟಬಹುದು.
ಚಳಿಗಾಲದಲ್ಲಿ ಮೈಗೆ ಎಣ್ಣೆ ಹಚ್ಚಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಮೈಗೆ ಹಚ್ಚಲು ಸಾಸಿವೆಯೆಣ್ಣೆ, ತೆಂಗಿನೆಣ್ಣೆ, ಬಾದಾಮಿಎಣ್ಣೆ ಯಾವ ಎಣ್ಣೆ ಬೇಕಾದರೂ ಹಚ್ಚಬಹುದು. ನಂತರ ಹಳೆಯ ಪದ್ಧತಿ ಬೆಸ್ಟ್ ಎನ್ನಬಹುದು ಕಡಲೆ ಹಿಟ್ಟಿಗೆ ಸ್ವಲ್ಪ ಹಾಲನ್ನು ಹಾಕಿ ಮಿಕ್ಸ್ ಮಾಡಿ ಅದನ್ನು ಸ್ನಾನ ಮಾಡುವಾಗ ಮೈಗೆ ಹಚ್ಚಿ ತೊಳೆಯಿರಿ.
ಚಳಿಗಾಲದಲ್ಲಿ ಹೆಚ್ಚು ನಿದ್ರೆಯ ಅಗತ್ಯವಿರುತ್ತದೆ ,ಚಳಿಗಾಲದ ನಿದ್ರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ನಿದ್ರಾಹೀನತೆ ಉಂಟಾದರೆ ರೋಗನಿರೋಧಕ ಶಕ್ತಿ ಕಡಿಮೆಯಾಗುವುದು. ಕಣ್ಣಿನ ಕೆಳಭಾಗದಲ್ಲಿ ಕಪ್ಪು ಕಲೆಗಳು ಬರುವ ಸಾಧ್ಯತೆಗಳು ಇರುತ್ತದೆ .
ಮೊಣಕೈ, ಮೊಣಕಾಲು ,ಕುತ್ತಿಗೆ, ಕಪ್ಪಗಿದ್ದರೆ ಸ್ನಾನಕ್ಕೆ ಮುಂಚೆ ನಿಂಬೆ ಹಣ್ಣಿನ ಹೋಳಿನಿಂದ ತಿಕ್ಕಿ ನಂತರ ಸ್ನಾನ ಮಾಡಿ, ಹೀಗೆ ಮಾಡುವುದರಿಂದ ಬೆಳ್ಳಗಾಗುವುದು. ಸ್ನಾನ ಮಾಡಿದ ಮೇಲೆ ಕೊನೆಯಲ್ಲಿ ಬಕೆಟ್ ನೀರಿಗೆ ಸ್ವಲ್ಪ ವಿನೆಗರ್ ಹಾಕಿ ಅದನ್ನು ಮೈಗೆ ಸುರಿದರೆ ತ್ವಚೆ ಮೃದುವಾಗಿರುತ್ತೆ.
ಡ್ರೈ ಸ್ಕಿನ್ ಇರುವವರು ಸೋಪು ಬಳಸಲೇಬೇಡಿ ಬದಲಿಗೆ ಬಾಡಿ ವಾಶ್ ಅಥವಾ ಗ್ಲಿಸರಿನ್ ಇರುವ ಸೋಪು ಬಳಸುವುದು ಉತ್ತಮ. ಸ್ನಾನವಾದ ಬಳಿಕ ದೇಹಕ್ಕೆ ಮಾಯಿಶ್ಚರೈಸರ್ ಹಚ್ಚುವುದನ್ನೂ ಮರೆಯಬೇಡಿ . 10 ನಿಮಿಷಗಳಿಗಿಂತ ಹೆಚ್ಚು ಕಾಲ ಬಿಸಿನೀರಿನ ಶವರ್ ಸ್ನಾನ ಮಾಡಿದರೆ ತ್ವಚೆಯ ತೇವಾಂಶವನ್ನು ಕಡಿಮೆ ಕಡಿಮೆಯಾಗುತ್ತದೆ ಇದರಿಂದ ಚರ್ಮವು ಬಿರುಕು, ಒಣಗಿರುವ ಹಾಗೂ ಉರಿಯಲೂ ಆರಂಭಿಸುತ್ತದೆ .
ಹೆಚ್ಚು ನೀರನ್ನು ಕುಡಿಯಬೇಕು ನಾವು ಸೇವಿಸುವ ಅಪಾಯಕಾರಿ ರಾಸಾಯನಿಕ ಪದಾರ್ಥಗಳನ್ನು ಹೊರ ಹಾಕಲು ನೀರು ಸಹಾಯಮಾಡುತ್ತದೆ. ಚಳಿಗಾಲದಲ್ಲಿ ಹೆಚ್ಚು ತಂಪಿನ ವಾತಾವರಣ ಇರುವುದರಿಂದ ನೀರು ಕುಡಿಯುವ ಬಯಕೆ ಆಗುವುದಿಲ್ಲ ಆದರೂ ದಿನಕ್ಕೆ ಕನಿಷ್ಠ 3-4 ಲೀ. ನೀರನ್ನು ಕುಡಿಯಬೇಕು. ಆಗ ದೇಹಕ್ಕೆ ಹಾಗೂ ಚರ್ಮಕ್ಕೆ ಬೇಕಾದ ನೀರಿನಂಶವು ದೊರೆಯುತ್ತದೆ. ಚರ್ಮವೂ ಆರೋಗ್ಯದಿಂದ ಇರುತ್ತದೆ .
ಚಳಿಯಿಂದ ರಕ್ಷಣೆ ಹೇಗೆ?
ಚಳಿಗಾಲದಲ್ಲಿ ನಮ್ಮ ದೇಹವನ್ನು ಚಳಿಯಿಂದ ರಕ್ಷಿಸಿಕೊಳ್ಳುವುದು ಬಹಳ ಪ್ರಮುಖವಾಗಿರುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ಹತ್ತಿ ಹಾಗೂ ಉಣ್ಣೆ ಬಟ್ಟೆಯನ್ನು ಬಳಸಿ. ಕಿವಿ, ಎದೆ, ಕೈ-ಕಾಲುಗಳು ಬೆಚ್ಚಗಿರುವಂತೆ ನೋಡಿಕೊಳ್ಳಬೇಕು. ಅದರಲ್ಲೂ ರಾತ್ರಿ ಮತ್ತು ಮುಂಜಾನೆಯ ಸಮಯದಲ್ಲಿ ಹೊರಗೆ ಹೋಗುವಾಗ ಮತ್ತು ತಣ್ಣನೆ ಗಾಳಿ ಬೀಸುವಾಗ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುವುದು. ಪಪ್ಪಾಯಿ ಯಲ್ಲಿರುವಂತಹ ಅಧಿಕ ನೀರಿನಾಂಶವು ಚರ್ಮವನ್ನು ನಯ, ಮೃಧು ಹಾಗೂ ತೇವಾಂಶದಿಂದ ಇಡುತ್ತದೆ ಅವಕಾಡೋ ಮತ್ತು ಬಾಳೆಹಣ್ಣಿನಲ್ಲಿ ವಿಟಮಿನ್ ಇ ಮತ್ತು ಪೊಟಾಶಿಯಂ ಅತ್ಯಧಿಕವಾಗಿದೆ. ಇದರಿಂದ ಚರ್ಮದಲ್ಲಿ ಮಾಯಿಶ್ಚರೈಸರ್ ಅನ್ನು ಉಳಿಸಿ ಕೊಳ್ಳಬಹುದು.
ಒಳ್ಳೆಯ face pack ಮಾಡಿಕೊಳ್ಳುವುದು ಹೇಗೆ?
ಬಾಳೆಹಣ್ಣು , ಅವಕಾಡೋ ಮತ್ತು ಪಪ್ಪಾಯಿಯನ್ನು ಮಿಕ್ಸ್ ಮಾಡಿ ಒಳ್ಳೆಯ ಪೇಸ್ಟ್ ಮಾಡಿಕೊಳ್ಳಿ. ಪೇಸ್ಟ್ ಅನ್ನೂ ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಿ. ಮುಖದ ಮೇಲೆ ಸುಮಾರು 15 ನಿಮಿಷ ಕಾಲ ಹಾಗೆ ಬಿಡಿ. ನಂತರ ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ. ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬಳಸಿ .