ಸಾಮೂಹಿಕ ಅತ್ಯಾಚಾರ ಎಸಗಿ ಅಪ್ರಾಪ್ತ ಬಾಲಕಿಯನ್ನು ಕೊಲೆಗೈದಿದ್ದ ಇಬ್ಬರು ಆರೋಪಿಗಳಿಗೆ ಉತ್ತರ ಪ್ರದೇಶದ ಪೊಕ್ಸೊ ನ್ಯಾಯಲಯ ಮರಣದಂಡನೆ ವಿಧಿಸಿದೆ. ಡಿಸೆಂಬರ್ 27, 2021ರಂದು ಇಬ್ಬರು ಯುವಕರು ಸೇರಿ 11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು.
ಇದರ ಕುರಿತು ವರದಿ ಪಡೆದಿದ್ದ ಮುಖ್ಯಮಂತ್ರಿ ಆದಿತ್ಯನಾಥ್, ತಪ್ಪಿತಸ್ಥರ ವಿರುದ್ಧ ತ್ವರಿತ ಕ್ರಮಕ್ಕೆ ನಿರ್ದೇಶನ ನೀಡಿದರು. ಮೂವರು ಆರೋಪಿಗಳು ಬಾಲಕಿಯನ್ನು ಅತ್ಯಾಚಾರ ಮಾಡಿ ಗಂಭೀರವಾಗಿ ಗಾಯಗೊಳಿಸಿ ರೈಲ್ವೆ ಹಳಿ ಮೇಲೆ ಎಸೆದಿದ್ದರು. ಪ್ರತಾಪ್ ಗಢ ಜಲ್ಲೆಯ ನವಾಬ್ ಗಂಜ್ ಪೋಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು ಮತ್ತು ಒಬ್ಬ ಅಪ್ರಾಪ್ತನಾಗಿದ್ದರಿಂದ ಆತನ ಪ್ರಕರಣವನ್ನು ಬಾಪಾರಾಧಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.
ಗೌರಿಗದ್ದೆ ಆಶ್ರಮದಿಂದ ಹೊರಡುವ ಮೊದಲು ಚಂದ್ರಶೇಖರ್ ಗೆ ವಿನಯ್ ಗುರೂಜಿಯಿಂದ ಕಿವಿಮಾತು..

