- Advertisement -
ಸ್ವತಂತ್ರ ಭಾರತದ ನಂತರ ನಡೆದ ಮೊದಲ ಚುನಾವಣೆಯಲ್ಲಿ ವೋಟ್ ಮಾಡಿದ್ದ ಹಿರಿಯ ನಾಗರಿಕ ನಿಧನರಾಗಿದ್ದಾರೆ. ಹಿಮಾಚಲ ಪ್ರದೇಶದ ಕಲ್ಪಾದಲ್ಲರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.106 ವರ್ಷದ ಶ್ಯಾಮ್ ಸರಣ್ ನೇಗಿ ಹಿಮಾಚಲ ಪ್ರದೇಶದ ಕಲ್ಪಾ ಮತಗಟ್ಟೆಯಲ್ಲಿ ಮೊದಲಬಾರಿಗೆ ಮತ ಚಲಾವಣೆ ಮಾಡಿ ಒಟ್ಟು 34 ಬಾರಿ ಮತ ಚಲಾಯಿಸಿದ್ದರು.
ನೇಗಿಯವರು ಸ್ವತಂತ್ರ ಭಾರತದ ಅಕ್ಟೋಬರ್ 23, 1951ರಂದು ಮೊದಲ ಬಾರಿ ಮತದಾನ ಮಾಡಿದ್ದರು. ಅವರ ಕೊನೆ ಮತದಾನ ಇದೇ ವರ್ಷ ನವೆಂಬರ್ 2 ರಂದು ಮಾಡಿದ್ದರು. ನೇಗಿ ಅವರು 1917, ಜುಲೈನಲ್ಲಿ ಹಿಮಾಚಲ ಪ್ರದೇಶದ ಕಿನೌರ್ ಜಿಲ್ಲೆಯಲ್ಲಿ ಜನಿಸಿದ್ದರು. ಶ್ಯಾಮ್ ಅಂತ್ಯಕ್ರಿಯೆ ಇಂದು ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.
- Advertisement -