ಮಂಡ್ಯ: ಮಂಡ್ಯ ಜನರಿಗೆ ಮುಳ್ಳಂದಿ ಕಾಟ ಶುರುವಾಗಿದ್ದು, ತಡರಾತ್ರಿ ಜನರ ನಿದ್ದೆಗೆಡಿಸಿದ ಘಟನೆ ನಗರದ ವಿವಿ ನಗರದ 23ನೇ ಕ್ರಾಸ್ ನಲ್ಲಿ ನಡೆದಿದೆ. ಮನೆಮನೆಗೆ ನುಗ್ಗಿ ಮುಳಂದಿಗಳು ಜನರಿಗೆ ಕಾಟ ಕೊಟ್ಟಿವೆ, ಇವುಗಳ ಹಾವಳಿ ತಾಳಲಾರದೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟಿದ್ದಾರೆ.
ಕೊಯಂಬತ್ತೂರಿನಲ್ಲಿ ಕಾರ್ ಬ್ಲಾಸ್ಟ್ : ತಮಿಳುನಾಡಿನಲ್ಲಿ ಹುಡುಕಾಟ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ
ತಡರಾತ್ರಿ ನಗರಸಭೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಮುಳ್ಳಂದಿ ಹಿಡಿಯಲು ಹರಸಾಹಸ ಪಟ್ಟಿದ್ದು, ಒಂದು ಮುಳ್ಳಂದಿಯನ್ನು ಸೆರೆ ಹಿಡಿದಿದ್ದಾರೆ ಮತ್ತೊಂದಕ್ಕೆ ಕಾರ್ಯಾಚರಣೆ ಮುಂದುವರೆದಿದೆ. ಕೂಡಲೆ ಖಾಲಿ ಜಾಗದಲ್ಲಿ ಬೆಳೆದಿರುವ ಗಿಡಗಂಟಿಗಳ ಸ್ವಚ್ಛಗೊಳಿಸಿ ವನ್ಯ ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ದೆಹಲಿ ಮದ್ಯ ಹಗರಣ : ಅರಬಿಂದೋ ಫಾರ್ಮಾದ ನಿರ್ದೇಶಕ ಶರತ್ ರೆಡ್ಡಿ ಬಂಧಿಸಿದ ಇಡಿ