ಸಕ್ಕರೆನಾಡಲ್ಲಿ ಮತಾಂತರಕ್ಕೆ ಯತ್ನ, ಐವರು ಯುವಕರ ಬಂಧನ!

ಮಂಡ್ಯ: ಜಿಲ್ಲೆಯ ಕೆ.ಎಂ.ದೊಡ್ಡಿ ಸಮೀಪದ ಅಣ್ಣೂರು ರಸ್ತೆಯಲ್ಲಿ ಯುವಕರ ಗುಂಪೊಂದು ಕರಪತ್ರ ಹಂಚುತ್ತಾ ಕ್ರೈಸ್ತ ಧರ್ಮ ಮತಾಂತರಕ್ಕೆ ಒತ್ತಾಯ ಮಾಡುತ್ತಿದ್ದು ಕಂಡುಬಂದಿದೆ. ಚರ್ಚ್ ಬಳಿ ಮತಾಂತರಕ್ಕೆ ಒತ್ತಾಯಿಸುತ್ತಿದ್ದರು. ಮೆಣಸಕೆರೆ ಗ್ರಾಮದ ಶಿವರಾಮ ಎಂಬುವರಿಗೆ ಕ್ರೈಸ್ತ ಧರ್ಮಕ್ಕೆ ಮತಾಂತವಾಗುವಂತೆ ಒತ್ತಾಯಿಸುತ್ತಿದ್ದಾಗ ಸ್ಥಳೀಯರು ಯುವಕರ ಗುಂಪನ್ನು ಪೋಲಿಸರಿಗೆ ಒಪ್ಪಿಸಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲಾ ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ಕುಮಾರ್ ನಾಯಕ್, ಸಮಂತ್, ವಿಜಯ್ ಗೌಡ, ಹೇಮಂತ್ ಕುಮಾರ್ ಸಂದೀಪ್ ಮತಾಂತರಕ್ಕೆ ಯತ್ನಿಸಿದ ಗುಂಪು.  ಐವರು ಯುವಕರ ವಿರುದ್ದ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಯುವಕರ ಗುಂಪಿನೊಂದಿಗೆ ಪೊಲೀಸರು ವಿಚಾರಣೆ ನಡೆಸಿದರು ಮತ್ತು ತನಿಖೆ ಕೈಗೊಂಡಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲಾ ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ಜಿಮ್ ಮಾಡುವಾಗ ಕುಸಿದು ಬಿದ್ದು ನಟ ಸಿದ್ದಾಂತ್ ಸೂರ್ಯವಂಶಿ ನಿಧನ

About The Author