ಸೈಬರ್ ವಂಚನೆಯಿಂದ ಉಪನ್ಯಾಸಕಿ ಆತ್ಮಹತ್ಯೆ

ಬೀದರ್: ಆನ್ ಲೈನ್ ನಲ್ಲಿ ಪರಿಚಯವಾದ ವ್ಯಕ್ತಿಯಿಂದ ವಂಚನೆಗೊಳಗಾದ ಮಹಿಳೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಸ್ಲಾಂಪುರದ ಆರತಿ ಕನಾಟೆ(28) ಮೃತ ದುರ್ದೈವಿ. ನಗರದ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆ ಆನ್ ಲೈನ್ ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ 2.50 ಲಕ್ಷದ ಹಣ ಹೂಡಿಕೆ ಮಾಡಿದ್ದಾರೆ. ಪಾರ್ಟ್ ಟೈಮ್ ಕೆಲಸಕ್ಕಾಗಿ ಆನ್ ಲೈನ್ ಮುಖಾಂತರ ಹಣ ವರ್ಗಾವಣೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಕ್ರಮ ಮರಳುಗಾರಿಕೆ ತಡೆಯಲು ಕೊಪ್ಪಳ ಎಸ್ ಪಿಯಿಂದ ಹೊಸ ಮಾರ್ಗ

ಹಣ ಪಡೆದ ವ್ಯಕ್ತಿ ಮತ್ತಷ್ಟು ಹಣ ಕೊಟ್ಟರೆ ಬಾಕಿ ಹಣ ಕ್ಲಿಯರ್ ಮಾಡುತ್ತೇನೆ ಎಂದು ಹೇಳಿದ್ದಾನೆ ಆದರೆ ಹಣ ಹೊಂದಿಸಲು ಸಾಧ್ಯವಾಗದಿದ್ದಾಗ ಮಹಿಳೆ ಕುಟುಂಬದವರಿಗೂ ಹೇಳದೆ ಭೀತಿಯಿಂದ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಜಿತೇಂದ್ರ ಅವ್ಹಾದ್ ಬಂಧನ

About The Author