ಬೆಂಗಳೂರು: ಇಂದು ಪ್ರಿಯಾಂಕ ಉಪೇಂದ್ರ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಬರುತ್ತಿದೆ. ಇದೇ ಖುಷಿಯಲ್ಲಿ ಪ್ರಿಯಾಂಕ ಅವರು ಅಭಿನಯಿಸುತ್ತಿರುವ ‘ಕೈಮರ’ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವುದರ ಮೂಲಕ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ.
ನೀವು ಮೇಕಪ್ ಮಾಡಲು ಬಯಸುವಿರಾ..ಈ ಸಲಹೆಗಳನ್ನು ಅನುಸರಿಸಿ…!
ಖ್ಯಾತ ನಿರ್ದೇಶಕ ಪಿ.ವಾಸು ಅವರ ಸಹೋದರನ ಪುತ್ರ ಗೌತಮ್ ವಿಮಲ್ ನಿರ್ದೇಶನದ “ಕೈಮರ” ಚಿತ್ರ. ಇದರಲ್ಲಿ ಪ್ರಮುಖಪಾತ್ರದಲ್ಲಿ ಪ್ರಿಯಾಂಕ ಉಪೇಂದ್ರ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ವಿ.ಮತ್ತಿಯಳಗನ್ ನಿರ್ಮಾಣದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ, ಛಾಯಾಸಿಂಗ್, ಮತ್ತಿಯಳಗನ್ ಮುಂತಾದವರು ನಟಿಸುತ್ತಿದ್ದಾರೆ. ಇನ್ನು ‘ಕೈಮರ’ ಚಿತ್ರಕಥೆಯನ್ನು ಪಿ. ವಿಮಲ್ ಬರೆದಿದ್ದು, ಗುರುಕಿರಣ್ ಸಂಗೀತ ನಿರ್ದೇಶನ, ಮಣಿಕಂಠನ್ ಛಾಯಾಗ್ರಹಣ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನ ಮಾಡಲಿದ್ದಾರೆ.




