ಮಂಡ್ಯ: ಜಗತ್ತಿಗೆ ಅನ್ನ ನೀಡುವ ಅನ್ನದಾತನೇ ಇಂದು ರಸ್ತೆಗಿಳಿದು ತನ್ನ ಬೇಡಿಕೆ ಈಡೇರಿಸುವಂತೆ ಪ್ರತಿಭಟಿಸುತ್ತಿದ್ದಾನೆ. ತಮ್ಮ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ, ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಿಲ್ಲವೆಂದು ರೈತರು ರೊಡಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಕಬ್ಬಿಗೆ ಮತ್ತು ಹಾಲಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬೆಂಗಳೂರು ಟೆಕ್ ಶೃಂಗಸಭೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ರೈತರ ಬೇಡಿಕೆ ಈಡೇರಿಸುತ್ತಿಲ್ಲವೆಂದು ಸರ್ಕಾರದ ವಿರುದ್ಧ ಮಂಡ್ಯದಲ್ಲಿ ರೈತರು ಸಿಎಂ ಅಣಕು ಶವಯಾತ್ರೆ ಮಾಡಿದ್ದಾರೆ. ಮಂಡ್ಯದ ಸಂಜಯ್ ವೃತ್ತದಿಂದ ಡಿಸಿ ಕಚೇರಿ ವರೆಗೆ ಸಿಎಂ ಅಣುಕು ಶವಯಾತ್ರೆ ನಡೆಸಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಕಬ್ಬಿನ ಬೆಲೆ ಏರಿಕೆ ಮಾಡಿ, ಹಾಲಿನ ದರ ಏರಿಕೆ ಮಾಡಿ ಎಂದು ರೈತರು 3 ದಿನದಿಂದ ಧರಣಿ ಕುಳಿತಿದ್ದಾರೆ. ಪ್ರತಿ ಟನ್ ಕಬ್ಬಿಗೆ 4,500 ರೂ, ಹಾಲಿನ ದರ ಪ್ರತಿ ಲೀ ಗೆ 40 ರೂ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಾಗಮಂಗಲದಲ್ಲಿ ನಾನು ಗೆಲ್ಲದಿದ್ದರೆ ಶಿರಚ್ಛೇದನ ಮಾಡಿಕೊಳ್ಳುವೆ : ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ
ಇನ್ನು ಸಿಎಂ ಶವಯಾತ್ರೆ ವೇಳೆ ಬಾಯಿ ಬಡಿದುಕೊಂಡು ರೈತರು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಸಿಎಂ ಅಣಕು ಶವಯಾತ್ರೆ ಮಾಡದಂತೆ ರೈತರನ್ನು ಪೊಲೀಸರು ತಡೆದಿದ್ದಾರೆ. ಪೊಲೀಸರ ಮಾತಿಗೂ ಬಗ್ಗದ ರೈತರು ಸಿಎಂ ಅಣಕು ಶವಯಾತ್ರೆ ಮೆರವಣಿಗೆಯನ್ನು ಮುಂದುವರೆಸಿದ್ದಾರೆ. ನಾಲ್ಕು ಜನ ಹೆಗಲು ಕೊಟ್ಟು ಸಿಎಂ ಅಣಕು ಶವಯಾತ್ರೆ ಮಾಡುತ್ತಿದ್ದಾರೆ. ಇನ್ನು ಈ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗಿಯಾಗಿದ್ದು,ಬೆಂಗಳೂರು -ಮೈಸುರು ಹೆದ್ದಾರಿ ಸಂಚಾರದಲ್ಲಿ ವ್ಯತ್ಯಯವಾಗಿದೆ. ಪೊಲೀಸರು ಎಷ್ಟೇ ತಡೆದರೂ ಅವರ ಮಾತನ್ನೂ ಲೆಕ್ಕಿಸದೆ ರೈತರು ಹೆದ್ದಾರಿಯಲ್ಲೇ ಸಿಎಂ ಪ್ರತಿಕೃತಿ ದಹನ ಮಾಡಿದ್ದಾರೆ. ಅಣಕು ಶವ ಸಂಸ್ಕಾರ ಮಾಡಿ, ಬಾಯಿ ಬಡಿದುಕೊಂಡು ಸತ್ತರಪ್ಪ ಸತ್ತರು, ರೈತವಿರೋಧಿ ಮಂತ್ರಿಗಳು ಸತ್ತರು ಎಂದು ಘೋಷಣೆ ಕೂಗಿದ್ದಾರೆ.
2024ರ ಅಮೆರಿಕಾ ಅದ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ನಾನು ಸಿದ್ಧ: ಡೊನಾಲ್ಡ್ ಟ್ರಂಪ್ ಘೋಷಣೆ