Friday, July 11, 2025

Latest Posts

ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಫೋಟ : 9 ವರ್ಷದ ಬಾಲಕಿ ಸಾವು

- Advertisement -

ಕಚ್ಚಾ ಬಾಂಬ್ ಸ್ಫೋಟವಾಗಿದ್ದು 9 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಬಕ್ಟೋರಾ ಗ್ರಾಮದಲ್ಲಿ ತನ್ನ ತಾಯಿಯ ಚಿಕ್ಕಪ್ಪನ ಮನೆಯಲ್ಲಿ ಬಾಲಕಿ ಕುತೂಹಲದಿಂದ ಬಾಂಬ್ ಅನ್ನು ಎತ್ತಿದ್ದಕ್ಕೆ ಸ್ಫೋಟಗೊಂಡಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಬಾಲಕಿಯನ್ನು ಕೂಡಲೇ ಮಿನಾಖಾನ್ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆ ನಂತರ ಕುಟುಂಬದವರೆಲ್ಲ ಪರಾರಿಯಾಗಿದ್ದು, ಬಾಲಕಿ ತಾಯಿಯ ಚಿಕ್ಕಪ್ಪನನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಬಳಿ ಯಾವುದೇ ಬಾಂಬ್ ತಯಾರಿಕಾ ಸಾಮಾಗ್ರಿಗಳು ಕಾಣಿಸಿಲ್ಲ,ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಹೇಳಿದ್ದಾರೆ.

ಡ್ರಗ್ಸ್ ಸಾಗಾಣೆ ಮಾಡಲು ಐನಾತಿ ಪ್ಲಾನ್ ಮಾಡಿದ್ದ ಮೂವರ ಬಂಧನ

ಕಾರ್ಯಕ್ರಮದ ವೇದಿಕೆಯಲ್ಲೇ ಅಸ್ವಸ್ಥರಾದ ಕೇಂದ್ರ ಸಚಿವ ನಿತನ್ ಗಡ್ಕರಿ

- Advertisement -

Latest Posts

Don't Miss