ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಪ್ರವಾಸದ ವೇಳೆ ಬೇರೆಡೆಯಿಂದ ಜನರನ್ನುಕರೆತರಲಾಗಿತ್ತು ಎಂಬ ಮಾಜಿ ಸಚಿವ ವರ್ತೂರು ಪ್ರಕಾಶ್ ಆರೋಪಕ್ಕೆ, ಕೋಲಾರದ ಪಿ,ಎಲ್,ಡಿ ಬ್ಯಾಂಕ್ ಮಾಜಿ ಅಧ್ಯಕ್ಷ್ಯ, ಕಾಂಗ್ರೆಸ್ ಮುಖಂಡ ಚಂಜಿಮಲೆ ರಮೇಶ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರ ಪ್ರವಾಸಕ್ಕೆ ಹೊರಗಿನಿಂದ ಜನರನ್ನು ಕರೆತಂದಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಸಿದ್ದರಾಮಯ್ಯ ಅಭಿಮಾನಿಗಳು ಕೋಲಾರದಲ್ಲಿ ಅಪಾರ ಸಂಖ್ಯೆಯಲ್ಲಿ ಇದ್ದಾರೆ, ಸುಖಾ ಸುಮ್ಮನೆ ವರ್ತೂರು ಪ್ರಕಾಶ್ ಆರೋಪಿಸಿದ್ದಾರೆ.
ಚಲಿಸುತ್ತಿದ್ದ ರೈಲಿನಿಂದ ಸೈನಿಕನನ್ನು ತಳ್ಳಿದ ಟಿಟಿಇ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರ್ತೂರು ಪ್ರಕಾಶ್ ಮೂರನೇ ಸ್ತಾನ ಅಲಂಕರಿಸಿದ್ದರು, ಸಿದ್ದರಾಮಯ್ಯ ಅಂತಹ ದೊಡ್ಡ ನಾಯಕರು ಸ್ಪರ್ಧೆ ಮಾಡಿದ್ರೆ, ಕೋಲಾರದಲ್ಲಿ ನೆಲೆ ಕಳೆದುಕೊಳ್ಳುವ ಭೀತಿ ವರ್ತೂರು ಪ್ರಕಾಶ್ ರನ್ನ ಕಾಡ್ತಿದೆ. ಅದಕ್ಕಾಗಿಯೇ ಸುಳ್ಳು ಆರೋಪ ಮಾಡುತ್ತಿದ್ದಾರೆ ಕೋಲಾರ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಅವ್ರು ಸ್ಪರ್ಧೆ ಮಾಡಿದರೆ ಗೆಲುವು ಖಚಿತ. ಸೋಲಿನ ಭಯ ವರ್ತೂರು ಪ್ರಕಾಶ್ ರಿಗೆ ಕಾಡುತ್ತಿದ್ದು, ಸಿದ್ದರಾಮಯ್ಯ ಕೋಲಾರ ಪ್ರವಾಸ ಅತಿ ದೊಡ್ಡ ಯಶಸ್ಸನ್ನು ಕಂಡಿದೆ ಎಂದು ವರ್ತೂರು ಪ್ರಕಾಶ್ ರಿಗೆ ರಮೇಶ್ ತಿರುಗೇಟು ನೀಡಿದ್ದಾರೆ.
ಬೇಲೂರು ಕೃಷಿ ಪತ್ತಿನ ಸಹಕಾರ ಸಂಘ ನೂತನ ಆಡಳಿತ ಮಂಡಳಿ ಉದ್ಘಾಟಿಸಿದ ಸುಮಲತಾ ಅಂಬರೀಷ್

