ಕನ್ನಡಾಂಬೆ ಭುವನೇಶ್ವರಿ ದೇವಿ ಚಿತ್ರ ಅಧಿಕೃತವಾಗಿ ಜಾರಿಗೆ ತರಲು ಒಪ್ಪಿದ ಸರ್ಕಾರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಮಾತೆಯ ಅಧಿಕೃತ ಚಿತ್ರವನ್ನು ಬಿಡುಗಡೆ ಮಾಡಲು ಒಪ್ಪಿದೆ. ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಅನೇಕ ಕಾರ್ಯಕ್ರಮಗಳಲ್ಲಿ ಕನ್ನಡಾಂಬೆಯ ಚಿತ್ರದ ಬದಲಿಗೆ ಸರಸ್ವತಿ ದುರ್ಗಾದೇವಿ ಸೇರಿದಂತೆ ಬೇರೆ ದೇವರ ಫೋಟೋಗಳನ್ನು ಇಟ್ಟು ಪೂಜಿಸಲಾಗುತ್ತಿತ್ತು. ಕನ್ನಡಾಂಬೆಯ ನಿರ್ದಿಷ್ಟವಾದ ಚಿತ್ರ ಇಲ್ಲದನ್ನು ಗಮನಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದೆ.

ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗೆ ಮಾಡಿ..

ಕಲಾವಿದರಾದ ಸೋಮಶೇಖರ್.ಕೆ ಅವರು  ರಚಿಸಿದ ಕನ್ನಡಾಂಬೆಯ ಚಿತ್ರವನ್ನು ಅಧಿಕೃತವಾಗಿ ಜಾರಿಗೆ ತರಲು,  ಲಲಿತಾ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ.ಮಹೇಂದ್ರ ನೇತೃತ್ವದ ಸಮಿತಿ ಈ ಬಗ್ಗೆ ಶಿಫಾರಸು ನೀಡಿತ್ತು. ಸಮಿತಿಯ ಡಾ. ಚೂಡಾಮಣಿ ನಂದಗೋಪಾಲ್ ಹೆಚ್. ಹೆಚ್. ಮ್ಯಾದರ್, ಬಾಬು ನಡೋಣಿ, ವಿ.ಎಸ್. ಕಡೇಮನಿ ಸದಸ್ಯರಾಗಿದ್ದರು. ಇದರಂತೆ ಈಗ ಕರ್ನಾಟಕ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರವನ್ನು 5 ಜನರ ಕಲಾವಿದರ ಸಮಿತಿಯ ಶಿಫಾರಸುಗಳನ್ನು ಒಪ್ಪಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳದ್ದಾರೆ. ಕನ್ನಡಾಂಬೆಯ ಅಧಿಕೃತ ಚಿತ್ರದಲ್ಲಿ ಕರ್ನಾಟಕದ ಸಾಂಪ್ರಾದಾಯಿಕ ಕಲೆಯನ್ನು ಬಿಂಬಿಸುವ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ. ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಶಾಲಾ ಕಾಲೇಜುಗಳ ಗೋಡೆಯ ಮೇಲೆ ಈ ಚಿತ್ರವನ್ನು ಕಡ್ಡಾಯವಾಗಿ ರಚಿಸಬೇಕೆಂಬ ಆದೇಶ ಆದಷ್ಟು ಬೇಗ ಹೊರ ಬೀಳಲಿದೆ. ಇದರ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಚೇರಿಯಿಂದ ಆದೇಶ ಬರಲಿದೆ.

ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ1

ಬದಲಿ ವ್ಯವಸ್ಥೆ ಮಾಡದೇ ಏಕಾಏಕಿ ಹಾಲುವಾಗಿಲು ಸೇತುವೆ ಡೆಮಾಲಿಶ್- ಗ್ರಾಮಸ್ಥರ ಹಿಡಿ ಶಾಪ..

About The Author