Tuesday, October 14, 2025

Latest Posts

ಕಾಡಾನೆಗಳನ್ನು ಸ್ಥಳಾಂತರ ಮಾಡುವುದಕ್ಕೆ ವಿಶೇಷ ಕಾರ್ಯಪಡೆ ಮಾಡಿದ್ದೇವೆ : ಸಿಎಂ ಬೊಮ್ಮಾಯಿ

- Advertisement -

ಹಾಸನ: ಹಾಸನ ಕೊಡಗು ಸೇರಿ ವಿವಿದೆಡೆ ಕಾಡಾನೆ ಹಾವಳಿ ವಿಚಾರವಾಗಿ ಸಿಎಂ ಮಾತನಾಡಿ, ಕಾಡಾನೆ ಹಾವಳಿ ಬಗ್ಗೆ ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ ಬರಗಾಲದಲ್ಲಿ ಕಾಡಿನಿಂದ ನಾಡಿಗೆ ಬಂದ ಪ್ರಾಣಿಗಳು ವಾಪಸ್ ಹೋಗಿಲ್ಲ ಮತ್ತೆ ಕೆಲವು ಸಂದರ್ಭಗಳಲ್ಲಿ ಮನುಷ್ಯ ಕೂಡ ಕಾಡಿನ ಕಡೆ ಹೋಗಿದ್ದಾನೆ. ಗುಂಪಿನಲ್ಲಿ ಇರುವ ಆನೆ ಚದುರಿಸೋದು ಕಷ್ಟ ಆದರೂ ಈ ವರ್ಷ16 ಆನೆಗಳನ್ನ ಹಿಮ್ಮೆಟ್ಟಿಸಲಾಗಿದೆ. ಮೊನ್ನೆ ನಾನು ಸಭೆ ಮಾಡಿ ಕಾರ್ಯಪಡೆ ರಚನೆ ಮಾಡಿದ್ದೇವೆ. ನಿರಂತರವಾಗಿ ಕಾರ್ಯಾಚರಣೆ ನಡೆದಾಗ ನಿಯಂತ್ರಣ ಸಾದ್ಯ, ಹಾಗಾಗಿ ವಿಶೇಷ ಕಾರ್ಯಪಡೆ ಮಾಡಬೇಕೆಂದು ಮಾಡಿದ್ದೇವೆ. ಅದಕ್ಕಾಗಿಯೇ ವಿಶೇಷ ತಂಡ ಇರುತ್ತೆ,ತರಬೇತಿ ಕೊಡುತ್ತೇವೆ, ವಾಹನ ಎಲ್ಲ ಕೊಟ್ಟು ಕಂಟ್ರೋಲ್ ಕೂಡ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬೇಲೂರು ತಾಲ್ಲೂಕಿನ ಹಳೆಬೀಡಿನಲ್ಲಿ ಹೇಳಿದರು.

‘ಡವ್ ಮಾಸ್ಟರ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

ದಿನವಹಿ ಕಾರ್ಯಾಚರಣೆ ಮಾಡಿ ಕಾಡಾನೆ ಹಾವಳಿ ನಿಯಂತ್ರಣ ಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. ಆನೆಗಳು ಹೆಚ್ಚಾಗಿ ಇರೊ ಕಡೆ ನೂರಾರು ಸಿಬ್ಬಂದಿ ಸೇರಿ ಆನೆಗಳನ್ನು ಹಿಮ್ಮೆಟ್ಟಿಸಲು ಸೂಚನೆ ನೀಡಿದ್ದೇನೆ. ಅದಕ್ಕೆ ಬೇಕಾದಷ್ಟು ಹಣ ಕೊಡಲು ಸರ್ಕಾರ ಕೂಡ ಸಿದ್ಧವಿದೆ. ಬಂಡೀಪುರದಲ್ಲಿ ಹೊಸ ರೀತಿಯ ಫೆನ್ಸಿಂಗ್ ಅನ್ನು ಟ್ರಯಲ್ ಮಾಡಿದ್ದೇವೆ, ಅದನ್ನು ಇಲ್ಲಿಗೂ ಮಾಡೋ ಪ್ರಯತ್ನ ಮಾಡುತ್ತೇವೆ. ಕಾಡಾನೆಗಳ ಸ್ಥಳಾಂತರ ಮಾಡುವ ಸಲುವಾಗಿಯೇ ವಿಶೇಷ ಕಾರ್ಯಪಡೆ ಮಾಡಿದ್ದೇವೆ. ಕಾಡಾನೆ ದಾಳಿಯಾಗಿ ಬಲಿಯಾಗೋ ಕುಟುಂಬ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಬೇಕೆಂಬ ಬೇಡಿಕೆ ವಿಚಾರವಾಗಿ ಹೇಳಿದ ಸಿಎಂ, ಆನೆ ದಾಳಿಗೆ ಬಲಿಯಾದವರಿಗೆ ಪರಿಹಾರ ಹಣ 15 ಲಕ್ಷಕ್ಕೆ ಏರಿಕೆ ಮಾಡಿದ್ದೇವೆ ಮತ್ತು ಮೃತರ ಕುಟುಂಬಕ್ಕೆ ಉದ್ಯೋಗ ಕೊಡೊ ಬಗ್ಗೆ ಕೂಡ ಗಂಭೀರವಾಗಿ ಚರ್ಚೆ ಮಾಡುತ್ತೇನೆ ಎಂದು ಸಿಎಂ ಹೇಳಿದರು.

ಪಾಸ್ ಪೋರ್ಟ್ ನಲ್ಲಿ ಒಂದೇ ಹೆಸರಿದ್ದರೆ ಯುಎಇ ಪ್ರಯಾಣಕ್ಕೆ ಅನುಮತಿ ಇಲ್ಲ

ಆ ವಯಸ್ಸಿನಲ್ಲಿ ಮಕ್ಕಳು ಕೆಳಗೆ ಬಿದ್ದರೂ ತಲೆಗೆ ಪೆಟ್ಟು ಬೀಳುವುದಿಲ್ಲ..!

- Advertisement -

Latest Posts

Don't Miss