ಹಾಸನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಸಕ ಕೆ.ಎಸ್.ಲಿಂಗೇಶ್ ಅವರಿಗೆ ಆಕ್ಷೇಪಾರ್ಹ ಪದ ಬಳಸಿದ್ದಕ್ಕೆ, ಬೇಲೂರು ತಾಲ್ಲೂಕಿನ, ಹಳೇಬೀಡಿನಲ್ಲಿ ಶಾಸಕ ಲಿಂಗೇಶ್ ಹೇಳಿಕೆ ನೀಡಿದ್ದು, ಸಿಎಂ ಏನೇ ಹೇಳಿಕೊಂಡರು ಅವರು ಎಲ್ಲರಿಗೂ ಮುಖ್ಯಮಂತ್ರಿ, ಒಂದೇ ಪಕ್ಷಕ್ಕೆ ಮುಖ್ಯಮಂತ್ರಿ ಅಲ್ಲ. ನಾನು ಒಂದು ಕ್ಷೇತ್ರದ ಕರ್ನಾಟಕದ ಒಬ್ಬ ಶಾಸಕ, ನಾನು ಹೇಳಿದ್ದೆ, ನನ್ನ ಪಕ್ಷಕ್ಕೆ ಇರುವ ನಿಯತ್ತು ಅಂತ ಸೇರಿಸಿ ಹೇಳಿದ್ದೇನೆ. ಕೆಲಸ ಆಗಲು ಏನೇನೋ ಆಮೀಷ ತೋರಿಸುತ್ತಾರೆ ಅಂತ ಪಕ್ಷ ಬಿಡಲು ಆಗುವುದಿಲ್ಲಎಂದು ಹಳೇಬೀಡಿನಲ್ಲಿ ಶಾಸಕ ಲಿಂಗೇಶ್ ಸಿಎಂ ಬಸವರಾಜ ವಿರುದ್ಧ ತೀವ್ರ ಬೇಸರ ವ್ಯಕ್ತ ಪಡಿಸಿದ್ದಾರೆ. ಆಪರೇಷನ್ ಕಮಲದ ವೇಳೆ ಬಿಜೆಪಿಗೆ ನನನ್ನು ಆಹ್ವಾನಿಸಿದ್ದರು. ನಾನೊಬ್ಬ ಸಾಮಾನ್ಯ ರೈತನ ಮಗ, ನಮಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಸಂದರ್ಭದಲ್ಲಿ ನನಗೆ ಟಿಕೆಟ್ ಮತ್ತು ಹಣ ಕೊಟ್ಟ ಆಶೀರ್ವಾದ ಮಾಡಿ ಜನರ ಹತ್ತಿರ ಕಳುಹಿಸಿ ನನಗೆ ಸಹಕಾರ ಕೊಟ್ಟವರು ಕುಮಾರಣ್ಣ, ರೇವಣ್ಣ ಮತ್ತು ದೇವೇಗೌಡರು. ಹಾಗಾಗಿ ನಾನು ಬೇರೆ ರೀತಿ ಯೋಚನೆ ಮಾಡಲು ಸಾಧ್ಯವಿಲ್ಲ.
‘ಜೂ ರೈಡ್’ ಇನ್ಸ್ಟಾಲ್ ಮಾಡಿದರೆ ಮನೆ ಬಾಗಿಲಿಗೆ ಬರಲಿದೆ ಆಟೋ
12 ನೇ ಶತಮಾನದಲ್ಲಿ ಬಸವಣ್ಣ ನವರು ನಮಗೆ ಸಂಸ್ಕಾರ ನೀಡಿದ್ದಾರೆ. ನನಗೆ ಬೇಕಾಗಿರುವುದು ಕ್ಷೇತ್ರದ ಕೆಲಸ ರಾಜಕಾರಣ ಅಲ್ಲ, ಇವತ್ತು ರಾಜಕಾರಣ ಬರುತ್ತದೆ ಹೋಗುತ್ತದೆ ಆದ್ದರಿಂದ ರಾಜಕಾರಣ ದೃಷ್ಟಿ ಇಟ್ಟುಕೊಂಡು ಯಾವುದೇ ಕೆಲಸ ಮಾಡುತ್ತಿಲ್ಲ.ನನ್ನ ಮಗನನ್ನು ಕಳೆದುಕೊಂಡಿದ್ದೇನೆ, ನನ್ನ ಹೆಸರು ಉಳಿಸಲು ಅವನೊಬ್ಬ ಇದ್ದ ಈಗ ನನ್ನ ಹೆಸರು ಉಳಿಯಬೇಕೆಂದರೆ ನಾಲ್ಕಾರು ಒಳ್ಳೆಯ ಕೆಲಸ ಮಾಡಬೇಕು, ಜನರ ಮನದಲ್ಲಿ ಇರಬೇಕು. ರಣಘಟ್ಟ ಯೋಜನೆ ನನ್ನ ಕನಸು, ಕುಮಾರಣ್ಣ ಆಗಲ್ಲ ಅಂದಿದ್ದರು ಆದರೂ ಇಂಜಿನಿಯರ್‌ಗಳು ಹೇಳಿದ್ದಕ್ಕೆ ಬಜೆಟ್‌ನಲ್ಲಿ ನೂರು ಕೋಟಿ ಇಟ್ಟು ಹೋಗಿದ್ದರು. ನಾವು ರೈತರು ನಿಯತ್ತಿಗೆ ತಕ್ಕನಾಗಿ ನಡೆದುಕೊಳ್ಳುವವರು. ನನಗೆ ನನ್ನ ಕ್ಷೇತ್ರದ ಕೆಲಸ ಮುಖ್ಯ ಹಾಗಾಗಿ ಕೆಲವೊಂದು ಘಟನೆಗಳನ್ನು ನುಂಗಿಕೊಂಡು ಮುಂದೆ ನಡೆಯುತ್ತೇನೆ. ನನ್ನ ಕ್ಷೇತ್ರದ ಜನರಿಗೋಸ್ಕರ ಎಷ್ಟೇ ನೋವಾದರೂ ಸ್ವೀಕಾರ ಮಾಡುತ್ತೇನೆ. ಮಗನನ್ನು ಕಳೆದುಕೊಂಡು ಆಗಿರುವ ನೋವಿಗಿಂತ ದೊಡ್ಡದೇನಲ್ಲ ಇದು. ನನ್ನ ಕ್ಷೇತ್ರದ ಅಭಿವೃದ್ಧಿಗೆ ಯಾರ ಕೈ ಕಾಲು ಬೇಕಾದರೂ ಹಿಡಿಯುತ್ತೇನೆ. ಸಿಎಂ ಬೊಮ್ಮಾಯಿ ಅವರು ಬೇಕು ಅಂತ ಮಾತನಾಡಿದ್ದಲ್ಲ ಏನೋ ಆಕಸ್ಮಿಕವಾಗಿ ಪದ ಬಳಕೆ ಮಾಡಿರಬಹುದು ಎಂದು ತಿಳಿದ್ದೇನೆ. ಎಷ್ಟೇ ಆದರೂ ಅವರು ಹಿರಿಯರಿದ್ದಾರೆ ತೊಂದರೆಯಿಲ್ಲ. ನನಗೆ ನನ್ನ ಕ್ಷೇತ್ರ ಮುಖ್ಯ, ಕ್ಷೇತ್ರದ ಜನತೆಗೋಸ್ಕರ ಯಾವುದೇ ಮಾತನ್ನು ಕೇಳಲು ಸಿದ್ದನಿದ್ದೇನೆ ಎಂದು ಶಾಸಕ ಲಿಂಗೇಶ್ ಅವರು ಹೇಳಿದರು.
ಅಯ್ಯಪ್ಪ ಸ್ವಾಮಿ ಮಾಲೆ ಹಾಕುವವರು ಕಪ್ಪು ಬಟ್ಟೆಗಳನ್ನು ಧರಿಸಲು ಕಾರಣವೇನು..?
ಜೀವನದಲ್ಲಿ ಹೀಗೆ ಇದ್ದರೆ ಎಷ್ಟೇ ಕಷ್ಟದಲ್ಲಿ ಸಿಲುಕಿದರು ಹೊರಬರಬಹುದು ಚಾಣಕ್ಯ ಹೇಳಿದ್ದೇನು..?