ಶಬರಿಮಲೆ ದರ್ಶನಕ್ಕೆ ತೆರೆಳಿದ್ದ ರಾಮನಗರ ಭಕ್ತರ ಮಿನಿ ಬಸ್ ಅಪಘಾತ : 23 ಭಕ್ತರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ

ರಾಮನಗರ: ಶಬರಿಮಲೆಯಿಂದ ರಾಮನಗರಕ್ಕೆ ಹಿಂದಿರುಗುವಾಗ ರಾಜ್ಯದ ಭಕ್ತರ ಬಸ್ ಗೆ ಲಾರಿ ಡಿಕ್ಕಿ ಹೊಡೆದು 23 ಭಕ್ತರಿಗೆ ಗಾಯಗಳಾಗಿವೆ. ಕೇರಳದ ಕಣ್ಣೂರಿನ ಪೊನ್ನೂರು ಬಳಿ ಅಪಘಾತವಾಗಿದ್ದು, ಇನ್ನು ಇಬ್ಬರ ಸ್ಥತಿ ಗಂಭೀರವಾಗಿದೆ. ಶಬರಿಮಲೆಯಿಂದ ಭಕ್ತರು ರಾಮನಗರ ತಾಲೂಕಿನ ಪೇಟಕುರುಬರಹಳ್ಳಿಗೆ  ಹಿಂದಿರುಗುವಾಗ ಇಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಭಕ್ತರ ಮಿನಿ ಬಸ್ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಭಕ್ತರ ಮಿನಿ ಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ನ.20 ರಂದು ರಾತ್ರಿ ಶಬರಿಮಲೆ ದರ್ಶನಕ್ಕೆಂದು ತೆರಳಿದ್ದ ಭಕ್ತರು. ದರ್ಶನ ಮುಗಿಸಿಕೊಂಡು ಧರ್ಮಸ್ಥಳಕ್ಕೆ ಬರುವಾಗ ಅವಘಡ ಸಂಭವಿಸಿದೆ. ಪೊನ್ನೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅನುಮತಿ ಇಲ್ಲದೆ ಅಮಿತಾಬ್ ಬಚ್ಚನ್ ಧ್ವನಿ, ಚಿತ್ರ ಬಳಸುವಂತಿಲ್ಲ : ಹೈಕೋರ್ಟ್ ತೀರ್ಪು

ಸಿಂಪಲ್ ಆಗಿ ಮಾಡಬಹುದಾದ ತಿಂಡಿ ಈ ಖಾರಾ ಪೊಂಗಲ್‌

ಸರ್ಕಾರಿ ನೌಕರರ ಸಂಘದಿಂದ ಗೋವುಗಳ ರಕ್ಷಣೆಗೆ 100 ಕೋಟಿ ಸಹಾಯಧನ : ಸಚಿವ ಪ್ರಭು ಚೌಹಾಣ್

About The Author