Saturday, April 19, 2025

Latest Posts

ಹಾಸನದಲ್ಲಿ ನೋಡುಗರ ಗಮನ ಸೆಳೆದ ಡಾಗ್ ಶೋ : ವಿಜೇತ ಶ್ವಾನಕ್ಕೆ ಒಂದುವರೆ ಲಕ್ಷ ಬಹುಮಾನ

- Advertisement -

ಹಾಸನ: ಕುಳಿತುಕೊ ಎಂದರೆ ಕೂರುವ, ನಿಲ್ಲು ಎಂದರೇ ನಿಲ್ಲುವ ಮಾಲಿಕನ ಆಜ್ಞೆಯನ್ನು ಚಾಚು ತಪ್ಪದೆ ಪಾಲಿಸುವ ಶ್ವಾನಗಳ ಪ್ರದರ್ಶನ, ಪ್ರಾಣಿ ಪ್ರೀಯರನ್ನು ರಂಜಿಸಿದ್ದು ಮಾತ್ರ ಸುಳ್ಳಲ್ಲ. ಹಾಸನದ ಕೆನಲ್ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ದೇಶಿ ಹಾಗೂ ವಿದೇಶಿ ಶ್ವಾನಗಳ ಪ್ರದರ್ಶನ ಆಯೋಜಿಸಲಾಗಿತ್ತು. ಶ್ವಾನಗಳ ಪ್ರದರ್ಶನಕ್ಕೆ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಯಿತಲ್ಲದೇ ಬಲು ಆಕರ್ಷಣೆ ಎನಿಸಿತು. ಸುಮಾರು 25 ತಳಿಯ 300 ಕ್ಕೂ ಹೆಚ್ಚು ತರೆಹೇವಾರಿ ಶ್ವಾನಗಳು ಸ್ಪರ್ಧೆಯಲ್ಲಿ ಭಾಗಿಯಾಗಿ, ಪ್ರಾಣಿ ಪ್ರಿಯರ ಗಮನ ಸೆಳೆದವು. ಒಂದಕ್ಕಿಂತ ಒಂದು ವಿಭಿನ್ನ. ಒಂದಕ್ಕಿಂತ ಮತ್ತೊಂದು ಸುಂದರ ಎನಿಸಿದವು. ವಿವಿಧ ಜಾತಿಯ ಶ್ವಾನಗಳನ್ನು ಒಂದೆಡೆ ಕಂಡು ಜನರು ಖುಷಿಪಟ್ಟರು.

ಅಕಾಲಿಕ ಮಳೆಯಿಂದ ಆತಂಕದಲ್ಲಿರುವ ಕಾಫಿ ಬೆಳೆಗಾರರು

ಕೆನಲ್ ಕ್ಲಬ್ ವತಿಯಿಂದ ಮೂರನೇ ವರ್ಷದ ಶ್ವಾನಗಳ ಪ್ರದರ್ಶನವನ್ನು ಇಂದು ಆಯೋಜಿಸಲಾಗಿತ್ತು.  ಶೋನಲ್ಲಿ ಸುಮಾರು 25 ತಳಿಯ 300ಕ್ಕೂ ಹೆಚ್ಚು ಶ್ವಾನಗಳು ಈ ಪ್ರದರ್ಶನದಲ್ಲಿ ತಮ್ಮ ಮಾಲೀಕರೊಂದಿಗೆ ಭಾಗಿಯಾಗಿ ಗಮನ ಸೆಳೆದವು. ವಿವಿಧ ಆಕಾರದಲ್ಲಿದ್ದ ನಾಯಿಗಳು ನೋಡುಗರನ್ನು ಆಕರ್ಷಿಸಿದವು. ಭಾನುವಾರವಾದ್ದರಿಂದ ನಿರೀಕ್ಷೆಗೂ ಮೀರಿ ಶ್ವಾನ ಪ್ರಿಯರು ಜಮಾಯಿಸಿ, ವಿವಿಧ ಬಗೆಯ ನಾಯಿ ಮತ್ತು ಅವುಗಳ ತುಂಟಾಟ ಕಂಡು ಸಖತ್ ಮನ ರಂಜನೆ ಪಡೆದರು. ನಮ್ಮ ದೇಶೀಯ ತಳಿಯಾದ ಮುಧೋಳ್ ಜೊತೆಗೆ  ಡಾಬರ್ ಮನ್ , ಲ್ಯಾಬ್ರಡಾರ್, ರಾಟ್ ವೀಲರ್, ಡ್ಯಾಶಂಡ್, ಪಿಟ್ಬುಲ್, ಬಾಕ್ಸರ್, ಪಗ್, ಹಸ್ಕಿ, ಆಲ್ಸಿಷನ್, ಹೆಸರಿನ ತಳಿಯ ಶ್ವಾನಗಳು ಬಲು ಆಕರ್ಷಣೆ ಎನಿಸಿದವು. ಚೈನಾ, ಟಿಬೇಟಿಯನ್, ಜರ್ಮನಿ ತಳಿಗಳನ್ನು ಒಂದೇ ಕಡೆ ಕಣ್ತುಂಬಿಕೊಳ್ಳುವ ಭಾಗ್ಯ ಪ್ರಾಣಿ ಪ್ರಿಯರಿಗೆ ಸಿಕ್ಕಿತು. ಇವಲ್ಲದೇ ಜರ್ಮನ್ ಶೆಫರ್ಡ್, ಪೊಮೇರಿಯನ್, ಸೇಂಟ್ ಬರ್ನಾಡ್, ಗ್ರೇಟ್ ಡೆನ್, ಗೋಲ್ಡನ್ ರಿಟ್ರಿವರ್ ಡಾಗ್‌ಗಳು ಪ್ರದರ್ಶನದಲ್ಲಿ ಭಾಗವಹಿಸಿ ನೋಡುಗರನ್ನು ಮುದಗೊಳಿಸಿದವು.

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ : ಪತಿಯೇ ಕೊಂದಿರುವ ಶಂಕೆ

ಮಾಲೀಕರು ಹೇಳಿದಂತೆ ಶ್ವಾನಗಳು ಹೆಜ್ಜೆ ಹಾಕಿದ್ದು, ಓಡಾಡಿದ ರೀತಿ ಎಲ್ಲರಲ್ಲೂ ಖುಷಿ ತರಿಸಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅನೇಕರು, ತಮ್ಮ ಸಾಕು ಪ್ರಾಣಿಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಅದರಲ್ಲಿ ಸ್ಪರ್ಧೆಯಲ್ಲಿ ಭಾಗಿಯಾಗಿ ಬಹುಮಾನ ಪಡೆದವರ ಸಂತಸಕ್ಕೆ ಪಾರವೇ ಇರಲಿಲ್ಲ. ಈವರೆಗೆ ತಮ್ಮ ಶ್ವಾನವೇ ಹೆಚ್ಚು ಮುದ್ದು ಎಂದುಕೊಂಡಿದ್ದವರು, ಬೇರೆ ಬೇರೆ ತಳಿಯ ಶ್ವಾನ ಕಂಡು ಖುಷಿಪಟ್ಟರು. ಲವಲವಿಕೆಯಿಂದ ತಮ್ಮದೇ ಮ್ಯಾನರಿಸಂ ಮೂಲಕ ಓಡಾಡುವ ಶ್ವಾನ ಕಂಡು ಹಿಗ್ಗಿದರು. ಜಿ.ಪಂ. ಮಾಜಿ ಸದಸ್ಯೆ ಭವಾನಿರೇವಣ್ಣ ಶ್ವಾನಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು‌. ನಮ್ಮ ಮನೆಯಲ್ಲೂ ಒಂಭತ್ತು ಜಾತಿಯ ಶ್ವಾನಗಳನ್ನು ಸಾಕಿದ್ದು ಮುಂದೆ ಆಯೋಜಿಸುವ ಪ್ರದರ್ಶನಕ್ಕೆ ಅವುಗಳನ್ನು ಕರೆ ತರುವುದಾಗಿ ಹೇಳಿದರು.

ರಟ್ಟಿನ ಡಬ್ಬಿಯಲ್ಲಿಟ್ಟಿದ್ದ ಹಸುಗೂಸನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿ

ಪ್ರದರ್ಶನದಲ್ಲಿ ಭಾಗಿಯಾಗಿದ್ದ ಎಲ್ಲಾ ನಾಯಿಗಳಿಗೂ ಸರ್ಟಿಫಿಕೇಟ್ ವಿತರಿಸಲಾಯಿತು. ಅಲ್ಲದೇ ವಯೋಮಿತಿ ಆಧಾರದ ಮೇಲಿನ ಪ್ರದರ್ಶನದಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು. ಎಲ್ಲಾ ವಿಭಾಗಗಳಲ್ಲೂ ಪ್ರಥಮ ಬಹುಮಾನ ಪಡೆದ ಶ್ವಾನಗಳಿಗೆ ವಿಶೇಷ ದಿ ಬೆಸ್ಟ್ ಡಾಗ್ ಶೋ ನಡೆಸಲಾಯಿತು. ಇದರಲ್ಲಿ ವಿಜೇತರಾದ ಶ್ವಾನಕ್ಕೆ ಒಂದುವರೆ ಲಕ್ಷ ರೂ. ಬಹುಮಾನ ನೀಡಲಾಯಿತು. ಒಟ್ಟಿನಲ್ಲಿ ಹಲವು ತಳಿಗಳ ಶ್ವಾನಗಳ ಪ್ರದರ್ಶನ ನಿಜಕ್ಕೂ ಜನಾಕರ್ಷಣೆ ಎನಿಸಿದ್ದು ಸುಳ್ಳಲ್ಲ.

ಅಕಾಲಿಕ ಮಳೆಯಿಂದ ಆತಂಕದಲ್ಲಿರುವ ಕಾಫಿ ಬೆಳೆಗಾರರು

- Advertisement -

Latest Posts

Don't Miss