ಗುವಾಹಟಿ: ದಿಬ್ರುಗಢ ವಿಶ್ವವಿದ್ಯಾನಿಲಯದಲ್ಲಿ ಜೂನಿಯರ್‌ಗೆ ರ್ಯಾಗಿಂಗ್ ಮಾಡಿದ ಆರೋಪದ ಮೇಲೆ ಐವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ನಂತರ ವಾಣಿಜ್ಯ ವಿಭಾಗದ ಜೂನಿಯರ್ ವರ್ಷದ ವಿದ್ಯಾರ್ಥಿ ಆನಂದ್ ಶರ್ಮಾ ವಿಶ್ವವಿದ್ಯಾಲಯದ ಸಿನಿಯರ್ಸ್ ನ ಕ್ರೂರ ಹಲ್ಲೆಯಿಂದ ರಕ್ಷಿಸಿಕೊಳ್ಳಲು ಹಾಸ್ಟೆಲ್‌ನ ಎರಡನೇ ಮಹಡಿಯಿಂದ ಜಿಗಿದಿದ್ದಾರೆ ಎಂದು ವರದಿಯಾಗಿದೆ. ವಿದ್ಯಾರ್ಥಿ ಆನಂದ್ ಶರ್ಮಾ ತೀವ್ರವಾಗಿ ಗಾಯಗೊಂಡಿದ್ದಾರೆ. ವಿದ್ಯಾರ್ಥಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಗಾವಹಿಸಲಾಗಿದೆ. ವಿದ್ಯಾರ್ಥಿಯ ಕುಟುಂಬದವರ ದೂರಿನ ಮೇರೆಗೆ ದಿಬ್ರುಗಢ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಓರ್ವ ಮಾಜಿ ಹಾಗೂ ನಾಲ್ವರು ಹಾಲಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಾಹಸ ಸಿಂಹ ವಿಷ್ಣುವರ್ಧನ್ ಹೊಸ ಮನೆಯೆ ಅದ್ದೂರಿ ಗೃಹ ಪ್ರವೇಶ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರ್ಯಾಗಿಂಗ್ ಬೇಡ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ. ಟ್ವೀಟ್ ಮಾಡಿರುವ ಸಿಎಂ ಅವರು, ದಿಬ್ರುಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ರ್ಯಾಗಿಂಗ್ ಆರೋಪದ ಪ್ರಕರಣದಲ್ಲಿ ಗಾಯಗೊಂಡಿರುವುದು ಗಮನಕ್ಕೆ ಬಂದಿದೆ. ತೀವ್ರ ನಿಗಾ ವಹಿಸಲಾಗಿದೆ ಮತ್ತು ಮುಂದಿನ ಕ್ರಮವನ್ನು ಜಿಲ್ಲಾಆಡಳಿತದೊಂದಿಗೆ ಚರ್ಚಿಸಲಾಗುವುದೆಂದು ಅವರು ಹೇಳಿದ್ದಾರೆ.