Friday, July 11, 2025

Latest Posts

ಚಳಿಗಾಲದಲ್ಲಿ ಹೂಕೋಸು..ಇವರು ತಿನ್ನಲೇಬಾರದು..!

- Advertisement -

Cauliflower:

ನೀವು ಹೂಕೋಸು ಇಷ್ಟಪಡುತ್ತೀರಾ? ಗೋಬಿ ಮಂಚೂರಿಯಾದಂತೆ ಫ್ರೈ ಮಾಡಿ ತಿನ್ನುತ್ತೀರಾ? ಹುಷಾರ್ ಚಳಿಗಾಲದಲ್ಲಿ ಅದನ್ನು ದೂರವಿಡಬೇಕು ಇಂತಹವರು ಅದನ್ನು ತಿನ್ನಬಾರದು.

ಅನೇಕ ಜನರು ಚಳಿಗಾಲದಲ್ಲಿ ಹುರಿದ ಹೂಕೋಸು ತಿನ್ನಲು ಇಷ್ಟಪಡುತ್ತಾರೆ. ಹೂಕೋಸು ಕೂಡ ತುಂಬಾ ಪೌಷ್ಟಿಕವಾಗಿದೆ. ಉತ್ಕರ್ಷಣ ನಿರೋಧಕಗಳು, ಫೈಟೊನ್ಯೂಟ್ರಿಯೆಂಟ್‌ಗಳು, ಫೋಲೇಟ್, ವಿಟಮಿನ್ ಕೆ ಮುಂತಾದ ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ. ಅದಕ್ಕಾಗಿಯೇ ಇದನ್ನು ಹೆಚ್ಚಾಗಿ ತಿನ್ನಲಾಗುತ್ತದೆ.

ಹೂಕೋಸು ಗ್ಲುಕೋಸಿನೋಲೇಟ್ಸ್ ಎಂಬ ಸಲ್ಫರ್-ಒಳಗೊಂಡಿರುವ ರಾಸಾಯನಿಕಗಳನ್ನು ಸಹ ಹೊಂದಿದೆ. ಹಾಗಾಗಿ ಹೂಕೋಸು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವರಿಗೆ ಇದು ಒಂದಿಕೊಳ್ಳುವುದಿಲ್ಲ ಹಾಗಾದರೆ ಯಾರು ಹೂಕೋಸನ್ನು ತಿನ್ನಬಾರದು ಎಂದು ತಿಳಿದುಕೊಳ್ಳೋಣ.

ಈ ಕಾರ್ಬೋಹೈಡ್ರೇಟ್ ಭರಿತ ತರಕಾರಿಯನ್ನು ನೀವು ಜಾಸ್ತಿ ಸೇವಿಸಿದಾಗ, ಇದು ಸಣ್ಣ ಕರುಳಿನಿಂದ ದೊಡ್ಡ ಕರುಳಿಗೆ ಹಾದುಹೋಗುತ್ತದೆ. ಅಲ್ಲಿ ಬ್ಯಾಕ್ಟೀರಿಯಾಗಳು ಹುದುಗುವಿಕೆಯ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ನಂತರ ಹೊಟ್ಟೆಯಲ್ಲಿ ಗ್ಯಾಸ್ ರೂಪುಗೊಳ್ಳವ ಸಾಧ್ಯತೆ ಇದೆ ಇದರ ಪರಿಣಾಮವಾಗಿ, ಹೊಟ್ಟೆಯು ಊದಿಕೊಳ್ಳುವಂತೆ ಅನುಭವವಾಗುತ್ತದೆ.

ಥೈರಾಯ್ಡ್ ಸಮಸ್ಯೆ ಇರುವವರಿಗೆ ಹೂಕೋಸು ಹಾನಿಕಾರಕ ಏಕೆಂದರೆ ಇದು T-3 ಮತ್ತು T-4 ಹಾರ್ಮೋನುಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇದು ಹೆಚ್ಚಾದರೆ ಥೈರಾಯ್ಡ್ ಸಮಸ್ಯೆ ಹೆಚ್ಚುತ್ತದೆ.

ಹೂಕೋಸುಗಳಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ. ನೀವು ಹೆಚ್ಚು ತಿಂದರೆ, ರಕ್ತವು ಕ್ರಮೇಣ ದಪ್ಪವಾಗುತ್ತದೆ. ಆದ್ದರಿಂದ ರಕ್ತ ತೆಳುಗೊಳಿಸುವ ಔಷಧಿಯನ್ನು ತೆಗೆದುಕೊಳ್ಳುವವರು ತಮ್ಮ ವೈದ್ಯರ ಸಲಹೆಯ ನಂತರವೇ ಹೂಕೋಸು ತೆಗೆದುಕೊಳ್ಳಬೇಕು.

ಅಧಿಕ ತೂಕ ಇರುವವರು ಹೂಕೋಸು ತಿನ್ನುವುದರಿಂದ ತೂಕ ಹೆಚ್ಚಾಗುವುದಿಲ್ಲ. ಹಾಗಾಗಿ.. ತೂಕ ಹೆಚ್ಚಿಸಿಕೊಳ್ಳಲು ಬಯಸುವವರು ಇದನ್ನು ತಿನ್ನಬಾರದು, ಇದು ಹಸಿವನ್ನು ತಡೆಯುತ್ತದೆ ಹಾಗೂ ಹಾಲುಣಿಸುವ ತಾಯಂದಿರು ಹೂಕೋಸು ತಿನ್ನಬಾರದು .

ಗೋಬಿ ಮಂಚೂರಿ, ಹೂಕೋಸು ಜೊತೆ ಫ್ರೈ ಮುಂತಾದವುಗಳನ್ನು ಹೆಚ್ಚಾಗಿ ತಿಂದರೆ ಅತಿಯಾದ ಎಣ್ಣೆ ದೇಹಕ್ಕೆ ಸೇರುತ್ತದೆ. ಇದು ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ಈ ತರಕಾರಿಯನ್ನು ಹೆಚ್ಚು ಫ್ರೈ ಮಾಡುವುದು ಒಳ್ಳೆಯದಲ್ಲ.

ನೀವು ಹಸಿ ಹೂಕೋಸು ತಿನ್ನುತ್ತಿದ್ದರೆ, ಹಸಿ ಹೂಕೋಸು ಅಗತ್ಯಕ್ಕಿಂತ ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ ಎಂದು ತಿಳಿದಿರಲಿ. ನೀವು ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ಬೇಯಿಸಿದ ಹೂಕೋಸನ್ನು ಮಾತ್ರ ಸೇವಿಸಿ. ಬೇಯಿಸಿದ ಹೂಕೋಸಿನಿಂದ ಅದರಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಬಹುತೇಕ ನಾಶವಾಗುತ್ತದೆ. ಆದ್ದರಿಂದ ಈ ತರಕಾರಿಗಳನ್ನು ಸೀಮಿತ ಪ್ರಮಾಣದಲ್ಲಿ ಬೇಯಿಸಲು ವೈದ್ಯರು ಶಿಫಾರಸು ಮಾಡುತ್ತಾರೆ.

ಚಳಿಗಾಲದಲ್ಲಿ ಹೆರಿಗೆಯಾದರೆ ಈ 6ಪದಾರ್ಥಗಳನ್ನು ತೆಗೆದುಕೊಳ್ಳಲೇಬೇಕು…!

ಮೆಟಬಾಲಿಕ್ ಸರ್ಜರಿಯಿಂದ ಮಧುಮೇಹವನ್ನು ನಿಯಂತ್ರಿಸಬಹುದೇ..?ತಜ್ಞರು ಏನು ಹೇಳುತ್ತಾರೆ..?

ಹೆಚ್ಚು ಹಾಲು ಕುಡಿದರೆ ಇಷ್ಟೆಲ್ಲಾ ಸಮಸ್ಯೆಗಳು ಬರುತ್ತದಾ…?

 

- Advertisement -

Latest Posts

Don't Miss