ಮಂಡ್ಯ: ಡಾ: ಬಿ.ಆರ್ ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿಯಾಗಲ್ಲದೆ ಸಮಾಜದ ಶಕ್ತಿಯಾಗಿ ಗೋಚರಿಸಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ ಅವರು ತಿಳಿಸಿದರು. ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಭಾರತ ರತ್ನ, ಸಂವಿಧಾನ ಶಿಲ್ಪಿ, ಬಾಬಾ ಸಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ 66 ನೇ ಪರಿನಿರ್ವಾಣ ದಿನದ ಅಂಗವಾಗಿ ಡಾ. ಬಿ.ಆರ್ .ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಅಂಬೇಡ್ಕರ್ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಗದ್ಗದಿತರಾದ ಶಾಸಕ ಹೆಚ್.ಕೆ. ಕುಮಾರಸ್ವಾಮಿ
ಭಾರತದಲ್ಲಿ ಸಂವಿಧಾನವನ್ನು ಜನರು ಗೌರವಿಸಿ ಪಾಲನೆ ಮಾಡುತ್ತಾರೆ. ಅತ್ಯುತ್ತಮವಾದ ಸಂವಿಧಾನವನ್ನು ರಚಿಸಿ ನಮ್ಮೆಲ್ಲರಿಗೂ ಕೊಡುಗೆಯಾಗಿ ನೀಡಿದ್ದಾರೆ ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿಯಾಗಷ್ಟೇ ಅಲ್ಲದೆ ಅರ್ಥಶಾಸ್ತ್ರಜ್ಞರಾಗಿ ವಿವಿಧ ಕ್ಷೇತ್ರಗಳಲ್ಲೂ ಅಪಾರವಾದ ಜ್ಞಾನ ನೀಡಿದ್ದಾರೆ. ಪುಸ್ತಕಗಳ ಬಗ್ಗೆ ಅವರಿಗಿದ್ದ ಪ್ರೀತಿ ನಮ್ಮೆಲ್ಲರಿಗೂ ಅನುಕರಣೀಯ ಎಂದರು. ಅಂಬೇಡ್ಕರ್ ಅವರು ಮಹಾನ್ ಮೇಧಾವಿ. ಅವರನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಕೂಡ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಾರ್ಗವನ್ನು ಪಾಲಿಸಬೇಕು, ಅವರ ದ್ಯೇಯಗಳನ್ನು ಪಾಲಿಸಿ ಅವರಿಗೆ ಗೌರವವನ್ನು ಸೂಚಿಸಬೇಕು ಎಂದರು.
ಡಿ.17 ರಂದು ಎನ್ಎಸ್ ಯುಐ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಕಾಲೇಜುಗಳ ಬಂದ್ ಮತ್ತು ಪ್ರತಿಭಟನೆಗೆ ಕರೆ
ದೇಶದಾದ್ಯಂತ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪರಿನಿರ್ವಾಣ ದಿನವನ್ನು ಒಂದು ಪವಿತ್ರ ದಿನವನ್ನಾಗಿ ಅಮೃತ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿ ಇಡೀ ದೇಶದ ಶೋಷಿತ ಸಮುದಾಯಕ್ಕೆ ದೀನ, ದುರ್ಬಲರಿಗೆ, ನೊಂದವರಿಗೆ, ಸಮಾನತೆಯ ತತ್ವವನ್ನು ಎತ್ತಿ ಹಿಡಿದು ಎಲ್ಲರೂ ಇದನ್ನು ಪಾಲನೆ ಮಾಡಬೇಕೆಂಬ ಬೃಹತ್ ಸಂವಿಧಾನವನ್ನು ರಚನೆ ಮಾಡಿ ಡಾ. ಬಿ.ಆರ್. ಅಂಬೇಡ್ಕರ್ ನಮ್ಮೆಲ್ಲರಿಗೂ ನೀಡಿದ್ದಾರೆ. ದೇಶದಾದ್ಯಂತ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪರಿನಿರ್ವಾಣ ದಿನವನ್ನು ಒಂದು ಪವಿತ್ರ ದಿನವನ್ನಾಗಿ ಅಮೃತ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ: ಹೆಚ್ ಎಲ್ ನಾಗರಾಜ್ ಅವರು ಹೇಳಿದರು.
ಕುಡಿಯುವ ನೀರಿನ ಬಾವಿಯಲ್ಲಿ ಡಿಸೇಲ್ ಯುಕ್ತ ನೀರು, ಆತಂಕದಲ್ಲಿರುವ ಜನರು
ಬಡವ, ಶ್ರೀಮಂತ, ಶೋಷಿತ,ಯಾರೇ ಇರಲಿ ಎಲ್ಲರಿಗೂ ಕೂಡ ಆದರ್ಶಪ್ರಾಯವಾಗಿದೆ ನಮ್ಮ ಸಂವಿಧಾನ, ಈ ಸಂವಿಧಾನವೇ ದೇವರು. ಈ ವಿಶೇಷವಾದ ದೇವರನ್ನು ಎಲ್ಲರೂ ಕೂಡ ಭಯ, ಭಕ್ತಿ, ಗೌರವದಿಂದ ಪಾಲನೆ ಮಾಡಿ ಅನುಸರಿಸಬೇಕು ಎಂದರು. ಗೌತಮ ಬುದ್ಧ ಹೇಗೆ ಜಗತ್ತಿಗೆ ಶಾಂತಿ, ಸಮಾನತೆ, ಭ್ರಾತೃತ್ವ, ಮೋಕ್ಷತ್ವವನ್ನು ಸಾರಿ ಹೋಗಿದ್ದಾರೆಯೋ, ಹಾಗೆಯೇ ದೇಶದಲ್ಲಿ ಶೋಷಿತ ಸಮುದಾಯವು ಹುಟ್ಟಿದ ಮೇಲೆ ಸಮಾನವಾಗಿ, ಸರ್ವ ಸ್ವತಂತ್ರವಾಗಿ ಎಲ್ಲರೊಂದಿಗೆ ಪ್ರೀತಿಯಿಂದ ಸಮಾನಕರವಾದ ಬದುಕನ್ನು ನಡೆಸಲು ಸಂವಿಧಾನದ ಜ್ಞಾನವನ್ನು ಡಾ. ಬಿ.ಆರ್ ಅಂಬೇಡ್ಕರ್ ಅವರು ನೀಡಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸರಸ್ವತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಮೂವರು ಯುವಕರ ಮೇಲೆ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದರ್ಶನ್ ಬಂಧಿಸಿದ ಪೊಲೀಸರು
ಚನ್ನರಾಯಪಟ್ಟಣದಲ್ಲಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ಕಾರ್ಯಕ್ರಮ