Wednesday, May 7, 2025

Latest Posts

ಸಿಕ್ವೆಲ್ ಮೊರೆ ಹೋದ ರಿಷಬ್ ಶೆಟ್ಟಿ ಕಾಂತರ ಅಥವಾ ಬೆಲ್ ಬಾಟಮ್ -2 ?

- Advertisement -

ಸಿಕ್ವೆಲ್ ಮೊರೆ ಹೋದ ರಿಷಬ್ ಶೆಟ್ಟಿ ಕಾಂತರ ಅಥವಾ ಬೆಲ್ ಬಾಟಮ್ -2?

2019 ರಲ್ಲಿ ಸೂಪರ್ ಹಿಟ್ ಆಗಿದ್ದ ಬೆಲ್ ಬಾಟಮ್ ಚಿತ್ರ ಒಳ್ಳೆ ಸೌಂಡ್ ಮಾಡಿತ್ತು, ಸಿನಿಮಾದ ಎರಡನೇ ಭಾಗ ಶೀಘ್ರ ಸೆಟ್ಟೇರಲಿದೆ.ಕಾಂತಾರ ಹಿಟ್ ನಂತರ ಬೆಲ್ ಬಾಟಮ್ 2 ಚಿತ್ರದಲ್ಲಿ ರಿಷಬ್ ನಟಿಸ್ತಾರ ಅನ್ನೋ ಕುತೂಹಲ ಈಗಾಗಲೇ ಅಭಿಮಾನಿಗಳು ವ್ಯಕ್ತಪಡಿಸಿದ್ದರು.ಕಾಂತಾರ 2 ಮುಗಿಸಿ ಬೆಲ್ ಬಾಟಮ್ 2 ಮಾಡೋಣ ಅಂತ ರಿಷಬ್ ಹೇಳಿದ್ದಾರೆ ಎಂದು ಅವರು ರಿವೀಲ್ ಮಾಡಿದ್ದಾರೆ.ಬೆಲ್ ಬಾಟಮ್ 2 ನಲ್ಲಿ ರಿಷಬ್ ಜೊತೆಗೆ ಸ್ಟಾರ್ ನಟರನ್ನು ಕರೆತರುತ್ತೇವೆ. ಡಿಟೆಕ್ಟಿವ್‌ ಅನ್ನೋದು ಯೂನಿವರ್ಸಲ್ ಸಬ್ಜೆಕ್ಟ್.
ಈಗಿನ ಟ್ರೆಂಡ್​​ಗೆ ತಕ್ಕಂತೆ ನಾವು ಕೂಡ ಬೆಲ್ ಬಾಟಮ್ 2 ಅನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತೇವೆ ಎಂದು ಹೇಳಿದ್ದಾರೆ..
ಕಾಂತಾರ ಸಿನಿಮಾ ನಂತರ ರಿಷಬ್ ಶೆಟ್ಟಿ  ಬ್ಯಾಕ್ ಟು ಬ್ಯಾಕ್ ಸಿಕ್ವೇಲ್ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್​​ವುಡ್ ಹಿಟ್ ಸಿನಿಮಾ ಕಾಂತಾರದ  ನಂತರ ನಟ ಕಾಂತಾರ 2 ನಂತರ ಬೆಲ್ ಬಾಟಮ್ 2 ಸಿನಿಮಾ ಮಾಡೊದು ಕನ್ಫರ್ಮ್ ಆಗಿದೆ.
ಕಾಂತಾರ 2 ಸಿನಿಮಾ ಬಗ್ಗೆ ರಿಷಬ್ ಶೆಟ್ಟಿ ಅವರು ಇದುವರೆಗೂ ಯಾವುದೇ ಅಪ್ಡೇಟ್ ಕೊಡದೇ ಇದ್ದರೂ ಈ ಬಗ್ಗೆ ಈಗಾಗಲೇ ಸಾಕಷ್ಟು ಹಿಂಟ್ ಸಿಕ್ಕಿದೆ.

- Advertisement -

Latest Posts

Don't Miss