ಮತ್ತೆ ” ಕಾಂಟ್ರಾವರ್ಸಿ ಯಲ್ಲಿ ” ಡಿ ಬಾಸ್
ದರ್ಶನ್ ಅಭಿಮಾನಿಗಳು ಕ್ರಾಂತಿ ಚಿತ್ರವನ್ನು ವಿಜೃಂಭಣೆಯಿಂದ ಬರ ಮಾಡಿಕೊಳ್ಳಲು ಕಾತರರಾಗಿ ಕಾಯುತ್ತಿದ್ದಾರೆ.
ಅಭಿಮಾನಿಗಳು ಸ್ವತಃ ಕ್ರಾಂತಿ ಚಿತ್ರದ ಪ್ರಚಾರವನ್ನು ಹಲವಾರು ತಿಂಗಳುಗಳಿಂದ ಮಾಡುತ್ತಾ ಬರುತ್ತಿದ್ದು, ಈಗ ಸಿನಿಮಾ ಮೇಲಿನ ಹೈಪ್ ಹೆಚ್ಚಾಗಿದೆ.
ದರ್ಶನ್ ತಮ್ಮ ಚಿತ್ರದ ಪ್ರಚಾರ ಮಾಡಲು ಹಲವಾರು ಸಂದರ್ಶನಗಳನ್ನು ಕೊಡುತ್ತಿದ್ದು, ಮಾತಿನ ಬರದಲ್ಲಿ ಇದೀಗ ಎಡವಿದ್ದಾರೆ..
ಹೀಗೆ ಸಂದರ್ಶನದಲ್ಲಿ ಅದೃಷ್ಟದ ಬಗ್ಗೆ ಮಾತನಾಡುವಾಗ “ಅದೃಷ್ಟ ದೇವತೆ ಬಾಗಿಲು ತಟ್ಟುವುದು ಅತಿ ಅಪರೂಪ, ಅಂತ ಸಮಯದಲ್ಲಿ ಬಾಗಿಲು ತೆಗೆದು, ಆಕೆಯನ್ನು ಹಿಡಿದು ರೂಮ್‌ಗೆ ಕರೆದುಕೊಂಡು ಬಟ್ಟೆ ಬಿಚ್ಚಿ ಕೂರಿಸಿಕೊಂಡುಬಿಡಬೇಕು” ಎಂದು ದರ್ಶನ್ ಹೇಳಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.
ಇನ್ನು ದರ್ಶನ್ ಅವರ ಸೆಲೆಬ್ರಿಟೀಸ್ ತಮ್ಮ ನೆಚ್ಚಿನ ನಟನ ಪರವೇ ಬ್ಯಾಟ್ ಬೀಸಿದ್ದಾರೆ.
ದರ್ಶನ್ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಿಡಿದೆದ್ದ ದರ್ಶನ್ ಫ್ಯಾನ್ಸ್ ತಮ್ಮ ನಟನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ದರ್ಶನ್ ಪರ ಹಾಗೂ ವಿರೋಧವಾಗಿ ಎರಡು ಗುಂಪುಗಳು ಬ್ಯಾಟ್ ಬೀಸಿದ್ರೆ , ಮಾತಿನ ಭರಾಟೆಯಲ್ಲಿ ದರ್ಶನ್ ಎಡವಿದ್ದಾರೆ ಎಂದು ಹೇಳಿದ್ದಾರೆ