ಬೆಂಗಳೂರು: ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಜೆಡಿಎಸ್ ಪ್ರಮುಖ ನಾಯಕ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಆಪ್ತರಾದ ವೈ.ಎಸ್.ವಿ ದತ್ತಾ ಅವರು ಮಾತನಾಡಿದ್ದು, ನನ್ನದು ದೇವೇಗೌಡರ ರಾಜಕಾರಣ 50 ವರ್ಷದ್ದು, ಸಾಮಾನ್ಯ ಕಾರ್ಯಕರ್ತನಾಗಿ ನಾನು ಇದ್ದೇನೆ. ನಾನು ದೇವೇಗೌಡರ ಮಗನ ರೀತಿ ಇದ್ದವನು, ನನಗೆ ದೇವೇಗೌಡರು ತಂದೆ ಸಮಾನ ಪಕ್ಷ ರಾಜಕಾರಣಕ್ಕೂ ಮೀರಿದ ಭಾವನಾತ್ಮಕ ಸಂಬಂಧ ನಮ್ಮ ನಡುವೆ ಇದೆ.
ನಾಳೆ ನಡೆಯುವ ಜೆಪಿ ನಡ್ಡಾ ಕಾರ್ಯಕ್ರಮಕ್ಕೆ ಬಿಎಸ್ ವೈಗೆ ಅಧಿಕೃತ ಆಹ್ವಾನವಿಲ್ಲ
ಈಗಲೂ ದೇಶ ದೇವೇಗೌಡರ ಬಗ್ಗೆ ಅಪಾರ ಪೂಜ್ಯ ಭಾವನೆಯಿಂದ ಕಾಣುತ್ತದೆ. ಅವರು ಇರೋವರೆಗೂ ನಾನು ಅವರ ಜೊತೆಯಲ್ಲೇ ಇರ್ತೀನಿ ಅಂತ ಹೇಳಿದ್ದೆ. ಆದರೆ ಕ್ಷೇತ್ರದ ಪರಿಸ್ಥಿತಿ ಬದಲಾಗಿದ್ದರಿಂದ ಅದನ್ನು ದೇವೇಗೌಡರ ಬಳಿ ಹೇಳಿಕೊಳ್ಳಲು ಆಗಿಲ್ಲ. ಇಂದಿಗೂ ಕ್ಷೇತ್ರದಲ್ಲಿ ಎಲ್ಲಾ ಪಕ್ಷದಲ್ಲೂ ಕಾರ್ಯಕರ್ತರು ಇದ್ದಾರೆ. ಹೆಚ್.ಡಿ ದೇವೇಗೌಡ ಅವರು ಈಗಲೂ ನನ್ನ ಮೇಲೆ ಪ್ರೀತಿ ಇಟ್ಟಿದ್ದಾರೆ ನನ್ನ ಕ್ಷೇತ್ರದ ಮಟ್ಟಿಗೆ ಕೋಮುವಾದ ಮಣಿಸಲೇಬೇಕಾಗಿದೆ ಹೀಗಾಗಿ ಕಾಂಗ್ರೆಸ್ ಜೊತೆ ಸೇರಬೇಕಾಗಿದೆ ಎಂದು ದತ್ತಾ ಅವರು ಹೇಳಿದ್ದಾರೆ.
ಹುಲಿ ಯೋಜನೆ ವನ್ಯಜೀವಿ ಮಂಡಳಿಯ ಮುಂದಿದ್ದು, ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ
ಪೋಷಕರ ಜೊತೆ ಸೇರಿ ಅತ್ತಿಗೆಗೆ ಕಿರುಕುಳ ಆರೋಪ : ಸ್ಯಾಂಡಲ್ ವುಡ್ ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ