Tuesday, December 24, 2024

Latest Posts

ಡಿ.24 ರಂದ ಬೇಕಲ್ ಅಂತರಾಷ್ಟ್ರೀಯ ಬೀಚ್ ಉತ್ಸವ

- Advertisement -

ಡಿಸೆಂಬರ್ 24ರಿಂದ ಜನವರಿ 2ರವೆರೆಗೆ 10 ದಿನಗಳ ಕಾಲ ಬೇಕಲ್ ಅಂತಾರಾಷ್ಟ್ರೀಯ ಬೀಚ್ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಬೇಕಲ ರೆಸಾರ್ಟ್‌ಗಳ ಅಭಿವೃದ್ಧಿ ನಿಗಮ, ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿ, ಕುಟುಂಬಶ್ರೀ ಮತ್ತು ಸ್ಥಳೀಯ ಸರ್ಕಾರ ಸಂಸ್ಥೆಗಳಿಂದ ಆಯೋಜಿಸಲಾಗಿದೆ. ಉತ್ಸವವು ಮನರಂಜೆಯಿಂದ ಕೂಡಿದ್ದು, ಅನೇಕ ಕಾರ್ಯಕ್ರಮಗನ್ನು ನೀಡುತ್ತದೆ ಎಂದು ಉತ್ಸವದ ಅಧ್ಯಕ್ಷ ಮತ್ತು ಉದ್ಮಾ ಶಾಸಕ ಸಿಎಚ್ ಕುಂಞಂಬು ಈ ವಿಷಯ ತಿಳಿಸಿದ್ದಾರೆ. ಈ ಹಬ್ಬದಲ್ಲಿ ಸುಮಾರು 4 ಲಕ್ಷ ಜನರು ಆಗಮಿಸುವ ನೀರಿಕ್ಷೆ ಇದ್ದು, ಉತ್ಸವವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಉದ್ಘಾಟಿಸಲಿದ್ದಾರೆ. ಕಾಸರಗೋಡಿನ  ಸಾಂಸ್ಕೃತಿಕ ಪರಂಪರೆ ಮತ್ತು ವಿಶಿಷ್ಟ ಸಂಪ್ರದಾಯಗಳನ್ನು ಆಚರಿಸಲು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಬೇಕಲ್ ಅಂತಾರಾಷ್ಟ್ರೀಯ ಬೀಚ್ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ವಿಪ್ ಉಲ್ಲಂಘನೆ ನಿಯಮ ರೂಪಿಸಲು ಹೈಕೋರ್ಟ್ ಆದೇಶ

ಇನ್ನು ಉತ್ಸವದಲ್ಲಿ ಕಯಾಕಿಂಗ್, ಪ್ಯಾರಾಸೈಲಿಂಗ್, ಕ್ಯಾನೋಯಿಂಗ್, ಸ್ನಾರ್ಕೆಲಿಂಗ್, ಸ್ಕೂಬಾ ಡೈವಿಂಗ್, ಕ್ಯಾಟಮರನ್ ಸೈಲಿಂಗ್ ಮತ್ತು ವಿಂಡ್‌ಸರ್ಫಿಂಗ್‌ನಂತಹ ಜಲ ಕ್ರೀಡೆಗಳನ್ನು ಆಡಬಹುದು. ಹಬ್ಬದ ಅಂಗವಾಗಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಇದು ವ್ಯಾಪಾರ ವ್ಯಾಪಾರ ಎಕ್ಸ್ಪೋವನ್ನು ಹೊಂದಿರುತ್ತದೆ. ದಡದಲ್ಲಿ ಮರಳು ಕಲೆ ಪ್ರದರ್ಶಿಸಲಿದ್ದು, 100ಕ್ಕೂ ಹೆಚ್ಚು ಸೆಲ್ಫಿ ಪಾಯಿಂಟ್ ಗಳನ್ನು ರಚಿಸಲಾಗಿದೆ. ಉತ್ಸವಕ್ಕೆ ಕೇರಳ ಸರ್ಕಾರ 10 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದು, 5 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಕುಂಞಂಬು ತಿಳಿಸಿದ್ದಾರೆ. ಉತ್ಸವದಲ್ಲಿ ಸಂಜೆ 7 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಜನರನ್ನು ಮನರಂಜಿಸಲಿವೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಅನುಷ್ಠಾನಕ್ಕೆ ಮುಂದಾದ ಸರ್ಕಾರ

ಜ್ಯೋತಿಷ್ಯದಲ್ಲಿ ನಿಂಬೆ ಹಣ್ಣಿನ ಪರಿಣಾಮಕಾರಿ ತಂತ್ರಗಳು..!

- Advertisement -

Latest Posts

Don't Miss