ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಇನ್ನೂ ನಿಗೂಡವಾಗಿದೆ, ಈ ಮಧ್ಯೆ ಇತರೆ ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಅಲರ್ಟ್ ಆಗಿದ್ದು, ಸೈಲೆಂಟಾಗಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಕೋಲಾರ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಮಾಜಿ ಮಾಜಿ ಅಧ್ಯಕ್ಷ ಹಾಗು ಅಬಕಾರಿ ಇಲಾಖೆ ಉಪಾಯುಕ್ತರಾಗಿದ್ದ, ಎಲ್.ಎ ಮಂಜುನಾಥ್ ಅವರು ಕಾಂಗ್ರೆಸ್ ಟಿಕೆಟ್ ಗಾಗಿ ಈಗಾಗಲೇ ಅರ್ಜಿ ಸಲ್ಲಿಸಿದ್ದು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗು ಕಾಂಗ್ರೆಸ್ ವಕ್ತಾರನಾಗಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.
ಯುಪಿಯ ಸಾನಿಯಾ ಮಿರ್ಜಾ ಭಾರತದ ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲಟ್
ಇತ್ತ ಕೋಲಾರ ತಾಲೂಕಿನ ವಿವಿಧ ಹೋಬಳಿಯ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ಮಂಜುನಾಥ್ ಅವರು, 2023ರ ಚುನಾವಣೆಯಲ್ಲಿ ತಮ್ಮ ಪರವಾಗಿ ನಿಲ್ಲುವಂತೆ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ, ಸದ್ಯ ಕೆ.ಎಚ್. ಮುನಿಯಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಂಜುನಾಥ್ ಅವರು, ಹಿಂದುಳಿದ ಸಮಾಜ ವಹ್ನಿಕುಲ ಸಮುದಾಯದ ನಾಯಕರಾಗಿದ್ದು, ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನಾನು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ, ಕಾಂಗ್ರೆಸ್ ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿದ್ದೇನೆ, ಕೋವಿಡ್ ಸಮಯದಲ್ಲು ಕೈಲಾದಷ್ಟು ಸಹಾಯ ಮಾಡಿರುವೆ, ಪಕ್ಷ ಅವಕಾಶ ಕೊಟ್ಟರೆ ಖಂಡಿತ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.
ಭಾರತದಲ್ಲಿ ವಾತಾವರಣ ಚೆನ್ನಾಗಿಲ್ಲ, ಮಕ್ಕಳಿಗೆ ವಿದೇಶದಲ್ಲಿ ನೆಲೆಸಲು ಸಲಹೆ : ಆರ್‌ಜೆಡಿ ನಾಯಕ ಸಿದ್ದಿಕಿ
ಹೊಸಪೇಟೆಯಲ್ಲಿ ಅನಧಿಕೃತವಾಗಿ ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದ 7 ಜನರ ಬಂಧನ