ಬಿಹಾರಿ ಹುಡುಗನ ಕನ್ನಡ ಪ್ರೇಮ..!
ಕಾಂತಾರ ಚಿತ್ರ ಎಲ್ಲೆಡೆ ಎಷ್ಟು ಹಿಟ್ ಆಯ್ತೋ , ಅದೇ ರೀತಿಯಲ್ಲಿ ಕಾಂತಾರ ಚಿತ್ರದ ಹಾಡುಗಳು ಕೂಡ ಬಹಳಷ್ಟು ಹಿಟ್ ಆಗಿವೆ ಇನ್ನು ಸಿಂಗಾರ ಸಿರಿಯೇ ಹಾಡಿನ ಬಗ್ಗೆ ಹೇಳೋದೇ ಬೇಡ ಯಾಕೆಂದ್ರೆ
ಗ್ರಾಮೀಣ ಸೊಗಡನ್ನು ಹೊಂದಿಕೊಂಡಿರುವ ಈ ಸಿಂಗಾರ ಸಿರಿಯೇ ಹಾಡು ಸೂಪರ್ ಹಿಟ್.
ಬೆಂಗಾಲಿ ಯುವಕನೊಬ್ಬ ಕಾಂತಾರ ಸಿನಿಮಾದ ರೊಮ್ಯಾಂಟಿಕ್ ಹಾಡು ಸಿಂಗಾರ ಸಿರಿಯೇ ಹಾಡನ್ನು ಹಾಡಿದ್ದಾನೆ. ಆತ ಹಾಡುವ ರೀತಿ ನೋಡಿ ಕನ್ನಡಿಗರೇ ಅಚ್ಚರಿಪಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಿಂಗಾರ ಸಿರಿಯೇ ಹಾಡು ವೈರಲ್ ಆಗಿದ್ದು ಇದು ಒರಿಜಿನಲ್ ಹಾಡು ಅಲ್ಲ.
ಬಿಹಾರ್ ಹುಡುಗನ ಕನ್ನಡ ಪ್ರೇಮ ಎಂದು ಇನ್ಸ್ಟಾಗ್ರಾಮ್ ಖಾತೆಯಿಂದ ಶೇರ್ ಮಾಡಲಾಗಿದೆ.
ಬಿಹಾರಣ್ಣನಿಗೆ ಒಂದು ಚಪ್ಪಾಳೆ ಎಂದು ಪ್ರೋತ್ಸಾಹ ಕೊಟ್ಟಿದ್ದಾರೆ. ಈ ವಿಡಿಯೋ ಸ್ವಲ್ಪ ರಶ್ಮಿಕಾಗೆ ಕಳಿಸಿ ಎಂದಿದ್ದಾರೆ ಇನ್ನೊಬ್ಬರು.
ಮೊದಲೇ ನೀನು ಶೆಟ್ಟರಿಗೆ ಸಿಕ್ಕಿದೆ ಅಂದ್ರೆ ನಿನ್ನಿಂದ ಈ ಸಾಂಗ್ ಹಾಡಿಸ್ತಿದ್ದರು ಎಂದು ಬರೆದಿದ್ದಾರೆ.