ಹಾಸನ: ಅಭಿವೃದ್ದಿ ಹೆಸರಿನಲ್ಲಿ ನೆನ್ನೆ ರಾತ್ರೋ ರಾತ್ರಿ ನಗರದ ಆರ್.ಸಿ ರಸ್ತೆ ಬದಿಯಲ್ಲಿರುವ ಬೃಹತ್ ಗಾತ್ರದ ಮರಗಳ ಮಾರಣಹೋಮ ನಡೆದಿದ್ದು ಈ ಬಗ್ಗೆ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್ ಮಾತನಾಡಿ ಅಭಿವೃದ್ದಿ ಹೆಸರಿನಲ್ಲಿ ನಗರದಲ್ಲಿ ನಿರಂತರವಾಗಿ ಮರಗಳ ಮಾರಣಹೋಮ ನಡೆಯುತ್ತಿದೆ, ಈಗಾಗಲೇ ನಗರದಲ್ಲಿ ಬೃಹತ್ ಮರಗಳನ್ನು ಕಡಿದು ಕಾಂಕ್ರೀಟ್ ಕಾಡು ನಿರ್ಮಾಣ ಮಾಡಲು ಹೊರಟಿರುವ ಜನಪ್ರತಿನಿಧಿಗಳ ನಡೆ ಖಂಡನೀಯ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆದರೆ ಪರಿಸರ ಪ್ರೇಮಿಗಳು ಒಡಗೂಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮುಂದಿನ ವರ್ಷ 2023 ರಲ್ಲಿ ಯಾವಾಗ ಮತ್ತು ಎಷ್ಟು ಸೂರ್ಯ ಮತ್ತು ಚಂದ್ರ ಗ್ರಹಣಗಳು ಸಂಭವಿಸುತ್ತವೆ…
ಈ ಬಗ್ಗೆ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಲಾಗಿದ್ದು ಅಧಿಕಾರಿಗಳು ಕರೆಗೆ ಸ್ಪಂದಿಸುತ್ತಿಲ್ಲ, ಅರಣ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಮರಗಳ ಮಾರಣಹೋಮ ನಡೆಸಿದ್ದಾರೆ ಅರಣ್ಯ ಇಲಾಖೆಯ ಎದುರೇ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದರು. ಗಾಳಿ, ನೆರಳು ನೀಡಿ ನಗರಕ್ಕೆ ತಂಪು ನೀಡುವ ಮರಗಳು ಪಕ್ಷಿಗಳಿಗೂ ಆಶ್ರಯ ನೀಡುತ್ತಿವೆ , ಅಲ್ಲದೆ ನಗರದ ಸೌಂದರ್ಯ ವನ್ನು ಹೆಚ್ಚಿರುವ ಮರಗಳ ಮರಣ ಹೋಮ ಅಕ್ಷಮ್ಯ ಅಪರಾಧವಾಗಿದ್ದು ಇದೊಂದು ವೈಜ್ಞಾನಿಕ ಕೆಲಸವಾಗಿದೆ ಎಂದು ಹೇಳಿದರು. ಸ್ಥಳೀಯ ನಿವಾಸಿ ನಿರಂಜನ್ ಮಾತನಾಡಿ, ರಾತ್ರೋರಾತ್ರಿ ನಡೆದಿರುವ ಮರಗಳ ಮಾರಣಹೋಮ ಮಾಡಿರುವುದು ಖಂಡನೀಯ. ಮರಗಳನ್ನು ಬೆಳೆಯುವ ಕಷ್ಟ ಬೆಳೆಗಾರರಿಗೆ ಗೊತ್ತು ಕೊವಿಡ್ ಸಂಧರ್ಭದಲ್ಲಿ ಅಗತ್ಯವಿರುವ ಆಮ್ಲಜನಕ ನೀಡುವ ಮರಗಳನ್ನೇ ಕಡಿಯಲು ಬಿಟ್ಟಿರುವ ಸರಕಾರ ಮರಗಳನ್ನು ಉಳಿಸಿ ಬೆಳೆಸುವ ಕೆಲ್ಸ ಮಾಡಬೇಕು ಇಲ್ಲವಾದರರೆ ಮುಂದಿನ ಪೀಳಿಗೆ ಭಾರಿ ದೊಡ್ಡ ದಂಡ ತೆರಬೇಕಾಗುತ್ತದೆ ಎಂದು ಹೇಳಿದರು.
ಗರುಡ ಪುರಾಣದ ಪ್ರಕಾರ ಈ 5 ಅಭ್ಯಾಸಗಳಿಂದ ಬಡತನ ಹೆಚ್ಚಾಗುತ್ತದೆ..!
ಪರಿಸರ ಪ್ರೇಮಿ ರಾಜೇಗೌಡ ಮಾತನಾಡಿ, ನೂರಾರು ವರ್ಷಗಳ ಹಿತಿಹಾಸ ಹಿಂದಿರುವ ಬೃಹತ್ ಗಾತ್ರದ ಮರಗಳನ್ನು ಸರಕಾರ ನೆಲಕ್ಕೆ ಉರುಳಿಸಿದ್ದು, ಮರಗಳನ್ನು ಕಡಿದು ಆ ಸ್ಥಳಕ್ಕೆ ಆಕ್ಸಿಜನ್ ಸಿಲಿಂಡರ್ ಇಡಲು ಸರಕಾರ ಪ್ಲಾನ್ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಡಿದ್ದರೆ ನಾಡು ಎಂಬ ನಾಣ್ಣುಡಿ ಸುಳ್ಳಗುತಿದ್ದು ಸಂಪೂರ್ಣ ಕಾಂಕ್ರೀಟ್ ಮಯ ಮಾಡಲು ಯೋಜಿಸಿದೆ, ಕೊವೀಡ್ ಮರುಕಳಿಸುತ್ತಿರುವ ಈ ಸಂಧರ್ಭದಲ್ಲಿ ಮರಗಳನ್ನು ಕಡಿದಿರುವುದು ಖಂಡನೀಯ, ಇದೇ ರೀತಿಯ ಬೆಳವಣಿಗೆ ಮುಂದುವರೆದರೆ ಮುಂದಿನ ಪೀಳಿಗೆಗೆ ಮರಗಳನ್ನು ಚಿತ್ರಗಳಲ್ಲಿ ತೋರಿಸುವ ಕಾಲ ಬರಲಿದೆ ದಯಮಾಡಿ ಸರಕಾರ ಮರಗಳನ್ನು ಉಳಿಸಿ ಸಂರಕ್ಷಣೆ ಮಾಡುವ ವಿಶೇಷ ನಿಯಮಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಬ್ರಹ್ಮ, ,ವಿಷ್ಣು ,ಮತ್ತು ಮಹೇಶ್ವರರು ಒಟ್ಟಿಗೆ ಇರುವ ಏಕೈಕ ದೇವಾಲಯ ಎಲ್ಲಿದೆ ಗೊತ್ತಾ..?
ಭಾನುವಾರದಂದು ಪ್ರತ್ಯಕ್ಷ ದೇವರಾದ ಸೂರ್ಯನನ್ನು ಹೀಗೆ ಪೂಜಿಸಿ.. ಆರೋಗ್ಯ ನಿಮ್ಮದಾಗುತ್ತದೆ..!