ಹಾಸನ: ಕೊರಿಯರ್ ಶಾಪ್ ಸಿಬ್ಬಂದಿ ಗಾಯಾಳು ಶಶಿಯನ್ನು ಎಸ್ಪಿ ಹರಿರಾಮ್ ಶಂಕರ್ ಭೇಟಿಯಾಗಿದ್ದಾರೆ. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಕೆಆರ್ ಪುರಂನ ಡಿಟಿಡಿಸಿ ಕೊರೊಯರ್ ಶಾಪ್ ನಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿದೆ. ಕೊರಿಯರ್ ಬಂದಿದ್ದ ಮಿಕ್ಸಿ ಬ್ಲಾಸ್ಟ್ ಆಗಿದ್ದರ ಹಿಂದೆ ಏನೋ ಮಾಹಿತಿ ಇದೆ, ಮಿಕ್ಸಿಯನ್ನು ಆನ್ ಮಾಡಿದಾಗ ಬ್ಲಾಸ್ಟ್ ಆಗಿದೆ ಎಂದು ಹೇಳಲಾಗುತ್ತಿದೆ, ಆನ್ ಮಾಡದೆಯೇ ಬ್ಲಾಸ್ಟ್ ಆಗಿದೆ ಎಂದೂ ಹೇಳಲಾಗುತ್ತಿದೆ. ಕೊರಿಯರ್ ಆಫೀಸ್ ನಲ್ಲಿ ಕೆಲಸ ಮಾಡೋ ವ್ಯಕ್ತಿಗೆ ದೇಹದ ನಾಲ್ಕು ಭಾಗದಲ್ಲಿ ಪೆಟ್ಟಾಗಿದೆ. ಗಯಾಳುಗೆ ಯಾವುದೇ ಪ್ರಾಣಾಪಾಯ ಇಲ್ಲವೆಂದು ತಿಳಿಸಿದರು.
ಬ್ಲಾಸ್ಟ್ ಅದ ಮಿಕ್ಸಿಯ ಬಾಗಗಳೇ ತಾಗಿ ಪೆಟ್ಟಾಗಿದೆ. ಮಿಕ್ಸಿಯ ಬ್ಲೇಡ್ ತಾಗಿ ಅವರಿಗೆ ಪೆಟ್ಟಾಗಿದೆ. ಇನ್ನು ಇದಕ್ಕೆ ಸಂಬಂಧ ಪಟ್ಟಂತೆ ಬೇರೆ ಏನೂ ಇದೆ ಎಂದು ಕಂಡು ಬಂದಿಲ್ಲ.
ಕಾಡಾನೆ ಹಾವಳಿ ತಡೆಯದ ಸರ್ಕಾರಕ್ಕೆ ಸೆಡ್ಡು ಹೊಡೆದು ನಿಂತ ರೈತರು
ಮೈಸೂರಿನಿಂದ ಎಫ್.ಎಸ್.ಎಲ್ ನವರು ಬರುತ್ತಾರೆ. ಮಿಕ್ಸಿ ಯಾಕೆ ಮತ್ತು ಹೇಗೆ ಬ್ಲಾಸ್ಟ್ ಆಗಿದೆ ಎಂದು ಪರಿಶೀಲನೆ ನಡೆಯುತ್ತೆದೆ. ಕೊರಿಯರ್ ಎಲ್ಲಿಂದ ಬಂತು ಎನ್ನುವ ಮಾಹಿತಿ ಇದೆ. ಎಲ್ಲವನ್ನೂ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಯಾರೂ ಊಹಾಪೋಹಗಳಿಗೆ ಒಳಗಾಗಿ ಗೊಂದಲ ಆಗೋದು ಬೇಡಾ, ಶಾರ್ಟ್ ಸರ್ಕ್ಯೂಟ್ ಆಗಿದೆಯೊ ಬೇರೆ ಏನಾದರೂ ಇದೆಯೋ ಪರಿಶೀಲನೆ ನಡೆಸುತ್ತೇವೆ. ಎಲ್ಲಿಂದ ಯಾರಿಗೆ ಕೊರಿಯರ್ ಬಂದಿತ್ತು ಎಂದು ತನಿಖೆ ನಡೆಸಿದ ನಂತರ ಗೊತ್ತಾಗುತ್ತದೆ. ಯಾವುದೇ ಆತಂಕ ಸದ್ಯಕ್ಕೆ ಇಲ್ಲ, ಎಫ್.ಎಸ್ ಎಲ್ ನವರು ಬಂದು ವೈಜ್ಞಾನಿಕ ಸಾಕ್ಷ್ಯ ಪಡೆದ ಬಳಿಕ ಎಲ್ಲವೂ ಗೊತ್ತಾಗುತ್ತದೆ ಎಂದು ಎಸ್ಪಿ ತಿಳಿಸಿದರು.
ಮುಂದಿನ ವರ್ಷ 2023 ರಲ್ಲಿ ಯಾವಾಗ ಮತ್ತು ಎಷ್ಟು ಸೂರ್ಯ ಮತ್ತು ಚಂದ್ರ ಗ್ರಹಣಗಳು ಸಂಭವಿಸುತ್ತವೆ…