Banglore News:
ರಾಜಧಾನಿ ಬೆಂಗಳೂರಲ್ಲೂ ಮೂರು ದಿನಗಳಂದ ಮೈ ಕೊರೆಯುವ ಚಳಿ ಮುಂದುವರಿದಿದ್ದು. ರಾಜಧಾನಿ ಬೆಂಗಳೂರಲ್ಲೂ ಇನ್ನು ಕೆಲವು ದಿನಗಳ ಕಾಲ ದಿನಗಳ ಇದೇ ರೀತಿಯ ಚಳಿ ಮುಂದುವರಿಯಲಿದೆ . ಮೈ ಕೊರೆಯುವ ಚಳಿಗೆ ಜನ ತತ್ತರಿಸಿ ಹೋಗಿದ್ದು ಕಾರ್ಮಿಕರು ಕೆಲಸಕ್ಕೆ ಹೋಗಲು ಮತ್ತು ಮಕ್ಕಳು ಶಾಲೆಗೆ ಹೋಗಲು ಭಯ ಪಡುತಿದ್ದಾರೆ .
ಇನ್ನ ಬೆಳಗಿನ ಜಾವ ಕೆಲಸಕ್ಕೆ ಹೋಗುವ ಉದ್ಯೋಗಿಗಳು ವಾಹನ ಸವಾರಿ ಸಮಯದಲ್ಲಿ ಮುಂದೆ ದಾರಿ ಕಾಣದೆ ವಾಹನ ಓಡಿಸಲು ಪರದಾಡುವಂತಾಗಿದೆ.
ಕಳೆದ ಎರಡು ದಿನಗಳಿಂದ ಈಶಾನ್ಯ ಮತ್ತು ಉತ್ತರ ಭಾಗದಿಂದ ಎರಡು ದಿನದಿಂದ ತಣ್ಣನೆ ಗಾಳಿ ಬೀಸುತ್ತಿದೆ. ಹೀಗಾಗಿಯೇ ಎರಡು ದಿನದಿಂದ ಚಳಿಯ ವಾತಾವರಣವಿದೆ. ಹೀಗಾಗಿ ಉತ್ತರ ಒಳನಾಡಿಗೆ ಶೀತ ಅಲೆಯ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಹಿಮಾಲಯದಿಂದ ಬೀಸುತ್ತಿರುವ ಶೀತಗಾಳಿ ಇಡೀ ಉತ್ತರ ಭಾರತವನ್ನೇ ಗಡಗಡ ನಡುಗಿಸುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಚಳಿ ಜನ್ರನ್ನ ಹೆಪ್ಪುಗಟ್ಟುವಂತೆ ಮಾಡ್ತಿದೆ. ದೆಹಲಿ ಸೇರಿದಂತೆ ಪಂಜಾಬ್, ಹರಿಯಾಣ, ರಾಜಸ್ಥಾನ, ಯುಪಿಯಲ್ಲೂ ಚಳಿ ಆರ್ಭಟ ಜೋರಾಗಿದೆ. ಇಡೀ ಉತ್ತರ ಭಾರತದಲ್ಲಿ ನರಕವೇ ಸೃಷ್ಟಿಯಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಭೀಕರ ಚಳಿಗೆ ತತ್ತರಿಸಿದೆ.. ಸತತ 6ನೇ ದಿನವೂ ರಣಚಂಡಿ ಶೀತಗಾಳಿಯು ಅಬ್ಬರಿಸ್ತಿದೆ. ನಿನ್ನೆ 1.1 ಡಿಗ್ರಿ ಸೆಲ್ಸಿಯಸ್ಗೆ ಉಷ್ಣಾಂಶ ಕುಸಿದಿದೆ.. ಕಳೆದ ದಶಕದಲ್ಲೇ ಇದು ಕನಿಷ್ಠ ತಾಪಮಾನ ಅಂತಾ ಹವಾಮಾನ ಇಲಾಖೆ ಹೇಳಿದೆ.
ಉತ್ತರ ಮತ್ತು ವಾಯವ್ಯ ಭಾರತದಲ್ಲಿ ಅತಿಯಾದ ಚಳಿ ಹಾಗೂ ದಟ್ಟ ಮಂಜು ಮುಸುಕಿದ ವಾತಾವರಣ ಮುಂದುವರಿದಿದೆ. ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಬಸ್ಸೊಂದು ಟ್ರಕ್‌ಗೆ ಡಿಕ್ಕಿಯಾಗಿ, ನಾಲ್ವರು ಮೃತಪಟ್ಟಿದ್ದಾರೆ. ಇನ್ನೂ ಒಡಿಶಾದಲ್ಲೂ ಶೀತಗಾಳಿ ಬೀಸುತ್ತಿದ್ದು, ಆತಂಕ ಮನೆ ಮಾಡಿದೆ.. ಕಾಶ್ಮೀರದ ಗುಲ್‌ಮಾರ್ಗ್, ಸೋನಮಾರ್ಗ್ ಹಲವೆಡೆ ಹಿಮಪಾತ ಹೆಚ್ಚಾಗಿದೆ..

