- Advertisement -
Film News:
ದಳಪತಿ ವಿಜಯ್ ನಟನೆಯ ʻವಾರಿಸುʼ ಸಿನಿಮಾ ಮತ್ತು ಅಜಿತ್ ಕುಮಾರ್ ನಟನೆಯ ʻತುನಿವುʼ ಸಿನಿಮಾ ಒಂದೇ ದಿನ ತೆರೆಗೆ ಬಂದಿದೆ.ಎಂಟು ವರ್ಷಗಳ ನಂತರ ಇಬ್ಬರು ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು.
ಸಂಕ್ರಾಂತಿ ಹಬ್ಬಕ್ಕೂ ಮೊದಲು ತೆರೆಗೆ ಬಂದ ತುನಿವು ಮತ್ತು ವಾರಿಸು ಸಿನಿಮಾಗಳು ಅಭಿಮಾನಿಗಳನ್ನು ರಂಜಿಸಿದ್ದಕ್ಕಿಂತ ಹೆಚ್ಚಾಗಿ ಕಿತ್ತಾಟಕ್ಕೆ ಕಾರಣವಾಗಿದೆ.
ಚಿತ್ರಮಂದಿರದ ಹೊರಭಾಗದಲ್ಲಿದ್ದ ವಾರಿಸು ಪೋಸ್ಟರ್ ಅನ್ನು ಅಜಿತ್ ಅಭಿಮಾನಿಗಳು ಹರಿದು ಹಾಕಿದರು. ಅದೇ ಸಮಯಕ್ಕೆ ವಿಜಯ್ ಅಭಿಮಾನಿಗಳು ಸಹ ತುಣಿವು ಪೋಸ್ಟರ್ ಹರಿದು ಹಾಕಿದರು. ಪೋಸ್ಟರ್ ಹರಿದುಹಾಕುವ ಮೂಲಕ ಪ್ರಾರಂಭವಾದ ಜಗಳ ತಾರಕಕ್ಕೇರಿತು. ಪೋಸ್ಟರ್ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಪೊಲೀಸರು ಅಜಿತ್ ಮತ್ತು ವಿಜಯ್ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ಮಾಡಿ ಅಭಿಮಾನಿಗಳನ್ನು ಚದುರಿಸಿದ್ದಾರೆ.
- Advertisement -