Hassan News:
ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿ ತಂಬಲಗೇರಿ ಗ್ರಾಮದ ನವೀನ್ ಹತ್ಯೆ ಹಿಂದೆ ಅಕ್ರಮ ಮರಳುಗಾರಿಕೆ ಧ್ವೇಷ ಇದೆ ಎಂಬುವುದು ಬೆಳಕಿಗೆ ಬಂದಿದೆ. ಗುಂಡೇಟಿನಿಂದ ಸಾವನ್ನಪ್ಪಿದ ನವೀನ್ ಹತ್ಯೆ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಒಬ್ಬರ ಬಂಧನವಾಗಿದೆ. ಕೃತ್ಯಕ್ಕೆ ಬಳಸಿದ್ದ ಬಂದೂಕು, ಕಾಡ್ರೇಜ್ ವಶಕ್ಕೆ ಪಡೆಯಲಾಗಿದೆ ಎಂದು ಹಾಸನ ಎಸ್ಪಿ ಹರಿರಾಂ ಶಂಕರ್ ಹೇಳಿಕೆ ನೀಡಿದ್ದಾರೆ. ಹಂತಕರು ಸಂಚುಮಾಡಿ ನವೀನನನ್ನು ಹತ್ಯೆ ಮಾಡಿರುವದಾಗಿ ತಿಳಿದು ಬಂದಿದೆ. ಹಾಗೆಯೆ ಆರ್,ಎಸ್,ಎಸ್ ಸಂಘಟನೆ ವಿಚಾರಕ್ಕೂ ಕೊಲೆಗೂ ಸಂಬಂಧವಿಲ್ಲ ಎಂದು ಎಸ್ಪಿ ಸ್ಪಷ್ಟನೆ ನೀಡಿದ್ದಾರೆ. ಇದೊಂದು ಹಳೇ ವೈಶಮ್ಯದಿಂದ ಮಾಡಿರುವ ಕೊಲೆ ಎಂಬುವುದು ಸಾಬೀತಾಗಿದೆ.
“ಪ್ರತಿ ವಿಧಾನಸಭಾ ಚುನಾವಣೆಯಲ್ಲಿಯೂ ಅವರು ಕ್ಷೇತ್ರ ಬದಲಾವಣೆ ಮಾಡುತಿದ್ದಾರೆ”: ಎಂ.ಟಿ.ಬಿ
“ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೇರು ವ್ಯಕ್ತಿತ್ವ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ:” ಸಿಎಂ ಬೊಮ್ಮಾಯಿ