Political News:
ಪ್ರಜಾಧ್ವನಿ ಯಾತ್ರೆಯನ್ನು ಕೈಗೊಂಡ ಕಾಂಗ್ರೆಸ್ ಸರಕಾರ ಪ್ರಚಾರದ ಕಾರ್ಯವನ್ನು ಬಹು ಯೋಜಿತವಾಗಿಯೇ ಮಾಡುತ್ತಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಮನೆಗೂ 200 ಯೂನಿಟ್ ನಷ್ಟು ವಿದ್ಯುತ್ ನ್ನು ಉಚಿತವಾಗಿ ನೀಡುವ ಭರವಸೆಯನ್ನು ಡಿ.ಕೆ.ಶಿ ತಮ್ಮ ಹೇಳಿಕೆಯಲ್ಲಿ ಘೋಷಿಸಿದರು. ಜೊತೆಗೆ ಬಿಜೆಪಿ ಇದುವರೆಗೂ ಬಡವರನ್ನು ದೋಚುತ್ತಿದೆ.ಕರೆಂಟ್ ವಿಚಾರವಾಗಿಯೂ ಜನ ಸಾಮಾನ್ಯರನ್ನು ಹಿಂಡಿ ಹಿಪ್ಪೆ ಮಾಡಿದೆ ಕಾಂಗ್ರೆಸ್ ಗ್ಯಾರಂಟಿ ನಂ.1 ‘ಗೃಹಜ್ಯೋತಿ’ ಯೋಜನೆ! ನೀಡುತ್ತದೆ. ಬಿಜೆಪಿ ಸರ್ಕಾರದ ದುರಾಡಳಿತದಿಂದ, ಬೆಲೆಯೇರಿಕೆಯಿಂದ ದುಬಾರಿಯಾಗಿರುವ ಜನರ ಜೀವನ ನಿರ್ವಹಣೆಗೆ ಪರಿಹಾರವಾಗಿ ಕಾಂಗ್ರೆಸ್ ಪಕ್ಷವು ಮೊದಲ ಭರವಸೆಯನ್ನು ಇಂದು ಘೋಷಿಸುತ್ತಿದೆ. ಪ್ರತಿ ಮನೆಗೆ, ಪ್ರತಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ – ಇದು ಕಾಂಗ್ರೆಸ್ ಭರವಸೆ. ಎಂಬುವುದಾಗಿ ತಮ್ಮ ಪಕ್ಷದ ಪರವಾಗಿ ಡಿ.ಕೆ .ಶಿವಕುಮಾರ್ ಜನರಿಗೆ ಪ್ರಜಾಧ್ವನಿ ಯಾತ್ರೆ ಮೂಲಕ ಮೊದಲ ಭರವಸೆಯನ್ನು ಮೊಳಗಿಸಿದರು.