National story
ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ದಲಿತ ಯವಕನ ಮೇಲೆ ಹಲ್ಲೆ
ಭಾರತ ದೇಶ ಆರ್ಥಿಕತೆಯಲ್ಲಿ ಮತ್ತು ತಾಂತ್ರಿಕವಾಗಿ ಎಷ್ಟೇ ಅಭಿವೃದ್ದಿ ಹೊಂದಿದ್ದರೂ ಆದರೆ ಅವರ ಬುದ್ದಿಯಲ್ಲಿ ಮತ್ತು ನಡವಳಿಕೆಯಲ್ಲಿ ಯಾವುದೇ ಬದಲಾವಣೆಯಾಗಲಿ ಆಗುವುದಿಲ್ಲ.
ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರು ಬಡವರಿಗೆ ಮತ್ತು ದಲಿತರಿಗೆ ಸಿರಿವಂತರೀದ ಯಾವುದೇ ರೀತಿಯಾಗಿ ಅನ್ಯಾಯ ಆಗಬಾರದು ಎಂದು ಹಾಗೂ ಭಾರತದಲ್ಲಿ ಪ್ರತಿಯೋಬ್ಬರಿಗೂ ಸಮಾನ ರೀತಿಯ ಕಾನೂನು ದೊರಕಲಿ ಅನ್ನುವ ದೃಷ್ಟಿಯಿಂದ ಸಂವಿಧಾನವನ್ನು ರಚಿಸಿದ್ದಾರೆ.ಆದರೆ ದಲಿತರುಮತ್ತು ಬಡವರ ಮೇಲಿನ ದಬ್ಬಾಳಿಕೆ ಶೋಷಣೆ ಸಿಲ್ಲುತ್ತಿಲ್ಲ .
ಇತ್ತೀಚಿಗೆ ಉತ್ತರಕಾಶಿಯ ಸಾಲ್ರಾ ಗ್ರಾಮದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹೋಗಿದ್ದ ದಲಿತ ಯುವಕನನ್ನು ಐವರು ಮೇಲ್ಜಾತಿಯ ವ್ಯಕ್ತಿಗಳು ಒತ್ತೆಯಾಳಾಗಿಟ್ಟುಕೊಂಡು ರಾತ್ರೋರಾತ್ರಿ ದೊಣ್ಣೆಗಳಿಂದ ಥಳಿಸಿದ್ದಾರೆ ಮತ್ತು ಕೆಂಡದಿಂದ ಸುಟ್ಟಿದ್ದಾರೆ.
ಜನವರಿ 9 ರಂದು ಸಂಜೆ 7 ಗಂಟೆಗೆ ಗ್ರಾಮದ ಕೌನ್ವಾಲ್ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗಿದ್ದೆ. ದೇವಸ್ಥಾನದಲ್ಲಿದ್ದ ಕೆಲವರು ಒಮ್ಮೇಲೆ ನನ್ನ ಮೇಲೆ ಬಿದ್ದು ಹೊಡೆದು ಹಲ್ಲೆ ನಡೆಸಿದರು. ನಂತರ ಅಲ್ಲಿಯೇ ನನ್ನನ್ನು ಕಟ್ಟಿಹಾಕಿದರು. ಬಳಿಕ ಗ್ರಾಮದ ಮೇಲ್ಜಾತಿಯ ಐವರು ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ಮತ್ತು ಬೆಂಕಿ ಕೆಂಡದಿಂದ ನನ್ನನ್ನು ಸುಟ್ಟರು. ನಾನು ಮೂರ್ಛೆ ಹೋದೆ ಎಂದು ಆಯುಷ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇಡೀ ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ…?! ಮೋದಿ ಹೀಗಂದಿದ್ಯಾಕೆ..?!




