Film News:
2023ರ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದೆಂದು ಈಗಾಗಲೇ ರಾಜ್ಯಾದ್ಯಂತ ಸುದ್ದಿ ಮಾಡಿ, ಸಿನಿರಸಿಕರು ಕಾತುರದಿಂದ ಕಾಯುತ್ತಿರುವ ಚಿತ್ರ ‘ಸ್ವಾತಿ ಮುತ್ತಿನ ಮಳೆ ಹನಿಯೇ’. ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ತಮ್ಮ ನಿರ್ಮಾಣ ಸಂಸ್ಥೆಯಾದ ‘ಆಪಲ್ ಬಾಕ್ಸ್ ಸ್ಟುಡಿಯೋಸ್’ ವತಿಯಿಂದ ಮೊದಲ ಬಾರಿ ನಿರ್ಮಾಪಕಿಯಾಗಿ ಕಾಣಿಸಿಕೊಳ್ಳಲಿದ್ದು, ‘ಲೈಟರ್ ಬುದ್ಧ ಫಿಲಂಸ್’ ಎಂಬ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದಾರೆ. ಈ ಚಿತ್ರವನ್ನು ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ನಿರ್ದೇಶಿಸಲಿದ್ದು ಅವರೊಂದಿಗೆ ಸಿರಿ ರವಿಕುಮಾರ್ ಕೂಡ ಕಾಣಿಸಿಕೊಳ್ಳಲಿದ್ದಾರೆ.
ನಟಿ-ನಿರ್ಮಾಪಕಿ ರಮ್ಯಾರವರು ಈ ಚಿತ್ರವು ನಮ್ಮೆಲ್ಲರನ್ನು ಪ್ರೀತಿ-ಪ್ರೇಮ ದೊಂದಿಗೆ ಒಲವಾಗುವಂತೆ ಮಾಡುತ್ತೆ ಎಂದು ವಿಶ್ವಾಸದಿಂದ ತಿಳಿಸುತ್ತಾ, “ಮೊದಲ ಬಾರಿ ನಾನು ನಿರ್ಮಾಪಕಿಯ ಜವಾಬ್ದಾರಿ ನಿರ್ವಹಿಸುತ್ತಾ ಬಹಳಷ್ಟು ವಿಷಯಗಳನ್ನು ಕಲಿತೆ. ನನಗಿದೊಂದು ಅದ್ಭುತವಾದ ಅನುಭವ. ಈ ಚಿತ್ರವು ಪ್ರೀತಿ ಹಾಗು ಆತ್ಮಶೋಧನೆಯನ್ನು ಕುರಿತು ಒಂದು ಸುಂದರ, ಕಾವ್ಯಾತ್ಮಕ ಹಾಗು ಸೌಮ್ಯ ಅನುಭವವಾಗಲಿದೆ.” ಎಂದರು
೨೦೨೨ರ ವಿಜಯದಶಮಿಯಂದು ಚಿತ್ರವು ಘೋಷಿಸಲಾಗಿದ್ದು, ಹಲವಾರು ಮನೋಜ್ಞ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಮೊದಲನೆ ನೋಟದ ಪೋಸ್ಟರ್ ಹಾಗು ಮುಖ್ಯ ಪಾತ್ರಗಳನ್ನು ಪರಿಚಯಿಸಲು ಬಿಡುಗಡೆ ಮಾಡಿದ ಪೋಸ್ಟರ್ಗಳ ಮೂಲಕ ಈಗಾಗಲೇ ಎಲ್ಲರ ಗಮನವನ್ನು ಸೆಳೆದಿದೆ. ‘ಪ್ರೇರಣಾ’ ಮತ್ತು ‘ಅನಿಕೇತ್’ ಎಂಬ ಮುಖ್ಯ ಪಾತ್ರಗಳಲ್ಲಿ ಸಿರಿ ರವಿಕುಮಾರ್ ಹಾಗು ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದಲ್ಲಿ ಪ್ರತಿಭಾನ್ವಿತ ನಟರ ದಂಡೇ ಇದ್ದು ಮುಖ್ಯವಾಗಿ ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹ ಶರ್ಮ, ಜೆಪಿ ತುಮ್ಮಿನಾಡ್, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಇನ್ನಿತರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ ಸಂಯೋಜಿಸಲಿದ್ದು, ಪ್ರವೀಣ್ ಶ್ರೀಯಾನ್ – ಛಾಯಾಗ್ರಹಣ ಹಾಗು ಸಂಕಲನದ ಜವಾಬ್ದಾರಿಯನ್ನು ನಿರ್ವಹಹಿಸಲಿದ್ದಾರೆ.
‘ಆರಾಮ್ ಅರವಿಂದ್ ಸ್ವಾಮಿ’ಯಾದ ಅನೀಶ್ ತೇಜೇಶ್ವರ್ – ಹುಟ್ಟುಹಬ್ಬಕ್ಕೆ ಸ್ಪೆಷಲ್ ವೀಡಿಯೋ ರಿಲೀಸ್