ಯತ್ನಾಳ್ ಮಾತಿಗೆ ನಿರಾಣಿ ಭಾವುಕ..!

State News:
ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಮತ್ತು ಸಚಿವ ಮುರುಗೇಶ್ ನಿರಾಣಿ ಮಧ್ಯೆ ಕೆಲ ದಿನಗಳಿಂದ ವಾಕ್ ಸಮರ ನಡೆಯುತ್ತಿದೆ. ಪರಸ್ಪರವಾಗಿ ಇಬ್ಬರೂ ನಾಯಕರು ಮಾತಿನಲ್ಲಿಯೇ ಕುಟುಕುತ್ತಿದ್ದಾರೆ. ಇತ್ತೀಚೆಗೆ ಶಾಸಕ ಯತ್ನಾಳ್ ಸಚಿವ ಮುರುಗೇಶ್ ನಿರಾಣಿ ಅವರನ್ನು ಪಿಂಪ್ ಸಚಿವ ಎಂದು ಹೇಳಿದ್ದರು. ಸದ್ಯ ಈ ಹೇಳಿಕೆಗೆ ಮನನೊಂದ ಸಚಿವ ಮುರುಗೇಶ್ ನಿರಾಣಿ ಭಾವುಕರಾಗಿದ್ದಾರೆ. ಬಳಿಕ ಮಾತನಾಡಿ, ಯತ್ನಾಳ್ ಎಲ್ಲರ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಇದ್ದಾರೆ. ಜೆಡಿಎಸ್ಗೆ ಹೋಗಿ ಮುಸ್ಲಿಂ ಟೋಪಿ ಹಾಕಿದ್ದು ಎಲ್ಲರಿಗೂ ಗೊತ್ತಿದೆ. ಯತ್ನಾಳ್ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ. ನಾವು ಕೃಷ್ಣಾ, ಘಟಪ್ರಭಾ ನದಿಯ ನೀರು ಕುಡಿದು ಬೆಳೆದಿದ್ದೇವೆ. ನಾವು ಸುಮ್ಮನೆ ಇದ್ದೀವಿ ಅಂದರೆ ದೌರ್ಬಲ್ಯ ಅಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಏನೂ ಸತ್ಯ ಹರಿಶ್ಚಂದ್ರ ಅಲ್ಲ. ದೊಡ್ಡ ಸಮುದಾಯದಲ್ಲಿ ಹುಟ್ಟಿದ್ದೀರಿ ಗೌರವದಿಂದ ಮಾತಾಡಿ ಎಂದು ಸಚಿವ ನಿರಾಣಿ ವಾಗ್ದಾಳಿ ಮಾಡಿದರು.

ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಜೆ.ಡಿ.ಎಸ್ ನಾಯಕರು…!

ಸಾರಿಗೆ ಸಚಿವ ಶ್ರೀರಾಮುಲು ಗೆ ಐಟಿ ಶಾಕ್..!

ದೇವರಿಗೆ ಹರಕೆ ತೀರಿಸಿದ ಎಡಿಜಿಪಿ ಅಲೋಕ್ ಕುಮಾರ್..!

About The Author