Wednesday, October 15, 2025

Latest Posts

‘ಜ.21 ರಿಂದ ವಿಜಯ ಸಂಕಲ್ಪ ಅಭಿಯಾನ’.

- Advertisement -

state news :

ಮಂಡ್ಯದಲ್ಲಿ ಬಿಜೆಪಿಯಿಂದ ಮತ್ತೊಂದು ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದೆ..ಮಂಡ್ಯಕ್ಕೆ ಅಮಿತ್ ಶಾ ಭೇಟಿ ಕೊಟ್ಟ ಬೆನ್ನಲ್ಲೆ ಬಿಜೆಪಿ ಅಲರ್ಟ್ ಆಗಿದ್ದು, ಮಂಡ್ಯ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಕಮಲ ಅರಳಿಸಲು ಬಿಟ್ಟು ಬಿಡದೆ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಸರತ್ತು ನಡೆಯುತ್ತಿದೆ.  ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಕಮಲ ಅರಳಿಸಲು ಬಿಜೆಪಿ ತಂತ್ರಗಾರಿಕೆ ನಡೆಸುತ್ತಿದೆ. ಈಗಾಗಲೇ ಕೆ.ಆರ್.ಪೇಟೆಯಲ್ಲಿ ಒಂದು ಖಾತೆ ತೆರೆದಿರುವ ಬಿಜೆಪಿ ರಾಜ್ಯದಲ್ಲಿ 150 ಸೀಟ್ ಗೆಲ್ಲಲ್ಲು ಮಾಸ್ಟರ್ ಪ್ಲಾನ್ ಮಾಡಿದೆ.

ವಿಜಯ ಸಂಕಲ್ಪ ಅಭಿಯಾನದ ಮೂಲಕ ಪ್ರತಿ ಮನೆ ಮನೆ ತಲುಪಲು  ಕಾರ್ಯಕರ್ತರ ಸಜ್ಜು ಕರಪತ್ರ ಹಂಚಿಕೆ, ಮಿಸ್ಡ್ ಕಾಲ್ ಅಭಿಯಾನ, ಪ್ರತಿ ಮನೆಗಳ ಗೋಡೆ ಮೇಲೆ  ಕಾರ್ಯಕ್ರಮದ ಬರಹ.ಮನೆಮನೆಗೆ ತೆರಳಿ ಸದಸ್ಯತ್ವ ಹೆಚ್ಚಿಸಲು  ಕಸರತ್ತು ಜನವರಿ 21 ರಿಂದ  ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ  ಪ್ರತಿ ಮಂಡಲದಲ್ಲಿ ಬಿಜೆಪಿ ಸಾಧನೆ ಬಗ್ಗೆ ಮಾಹಿತಿ ಕೊಡಲಿದ್ದಾರೆ ಬಿಜೆಪಿ ಕಾರ್ಯಕರ್ತರು.

ರಾಜ್ಯದಲ್ಲಿ 2ಕೋಟಿ ಮನೆಗಳನ್ನ ತಲುಪುವ ಕಾರ್ಯದ ಗುರಿ.ಮಿಸ್ಡ್ ಕಾಲ್ ಅಭಿಯಾನದಲ್ಲಿ 1ಕೋಟಿ ಸದಸ್ಯತ್ವ ಮಾಡಿಸುವ ಗುರಿಯನ್ನು ಹೊಂದ್ದಿದೇವೆ ಎಂದು ಸುದ್ದಿಗೋಷ್ಟಿಯಲ್ಲಿ ಬಿಜೆಪಿ ವಕ್ತಾರ ಸಿ ಟಿ ಮಂಜು ಹೇಳಿಕೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರದಲ್ಲಿ ಬಿಜೆಪಿ ಅರಳಿಸಲು ಸಜ್ಜಾಗಿದ್ದೇವೆ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದಾರೆ.

ಜೆಡಿಎಸ್ ವಿರುದ್ದ ಬಿಜೆಪಿ ಶಾಸಕ ಪ್ರೀತಂಗೌಡ ವಾಗ್ದಾಳಿ

ಅಂತಿಮ ಹಂತ ತಲುಪಿದ ವಿಮಾನ ನಿಲ್ದಾಣ ಕಾಮಗಾರಿ!

ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರ ದಾಳಿ

- Advertisement -

Latest Posts

Don't Miss