Friday, December 27, 2024

Latest Posts

ಮೆಟ್ರೋ ಪಿಲ್ಲರ್ ದುರಂತ,15 ಅಧಿಕಾರಿಗಳಿಗೆ ನೋಟೀಸ್..!

- Advertisement -

State news:

ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಮೃತ ಪಟ್ಟ ಪ್ರಕರಣಕ್ಕೆ ಸಂಬಂಧಿಸದಂತೆ BMRCL MD ಸೇರಿದಂತೆ 15 ಜನ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಇನ್ನೂ ಕಾಮಗಾರಿ ಅವಘಡದ ಬಗ್ಗೆ ತೀವ್ರ ತರ ವಿಚಾರಣೆಯನ್ನ ನಡೆಸುತ್ತಿರುವ ತನಿಖಾಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ನಾಗವಾರ ರಿಂಗ್ ರೋಡ್‍ನ ಎಚ್‍ಬಿಆರ್ ಲೇಔಟ್ ಬಳಿ ಮೆಟ್ರೋ ಪಿಲ್ಲರ್‌ ಕುಸಿದು ತಾಯಿ-ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಈ ಸಂಬಂಧ ಐವರ ವಿರುದ್ಧ ಎಫ್ಐಆರ್  ಕೂಡ ದಾಖಲಿಸಲಾಗಿದೆ.

ಮೃತ ತೇಜಸ್ವಿನಿ ಪತಿ ಲೋಹಿತ್ ಕುಮಾರ್ ಅವರು ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಸಂಬಂಧ ಸೈಟ್ ಇಂಜಿನಿಯರ್ಸ್‌, ಕಂಟ್ರ್ಯಾಕ್ಟರ್ಸ್‌, BMRCL ಆಫೀಸರ್ಸ್‌, ಸೈಟ್ ಇನ್‌ಚಾರ್ಜ್‌ ಆಫೀಸರ್ಸ್ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ವಿಜಯಸಂಕಲ್ಹ ಯಾತ್ರೆ ಉದ್ಘಾಟಿಸಲಿರುವ ನಡ್ಡಾ..!

“ನನ್ನ ಕಂಡರೆ ಮೋದಿಗೆ ಭಯವಿದೆ..!”:ಸಿದ್ದರಾಮಯ್ಯ

ಮಂಡ್ಯ: ಜ.25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ

- Advertisement -

Latest Posts

Don't Miss