Friday, March 14, 2025

Latest Posts

ಕಾರು ಹಾಯಿಸಿ ಹಲ್ಲೆ

- Advertisement -

bengalore news
ಬೆಂಗಳೂರಿನಲ್ಲಿ ದಿನೇ ದಿನೇ ದುರ್ಘಟನೆಗಳು ಜಾಸ್ತಿಯಾಗುತ್ತಿವೆ. ಯಾವುದಾದರೊಂದು ಕಾರಣ ಇಟ್ಟುಕೊಂಡು ಒಬ್ಬರ ಮೇಲೆ ಒಬ್ಬರು ಕತ್ತಿ ಮಸೆಯತ್ತಿರುತ್ತಾರೆ. ಯುವಕರು ಯುವತಿಯರ ಮೇಲೆ ಅತ್ಯಾಚಾರ ಎಸಗುವುದು ನಂತರ ಯುವತಿಯರ ಕುಟುಂಬದವರು ಯವಕನ ಮೇಲೆ ಹಲ್ಲೆ ನಡೆಸುವುದು ಸಾಮಾನ್ಯವಗುತ್ತಿದೆ.ಅಂತಹದ್ದೇ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ.
ಮದುವೆಯಾಗಿರುವ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಎನ್ನುವ ಕಾರಣಕ್ಕೆ ಯುವತಿ ಮತ್ತವರ ಸ್ನೇಹಿತರು ಸೇರಿ ಯುವಕನು ಬರುವದನ್ನು ಕಾದು ಕುಳಿತು ಅವನ ಮೇಲೆ ಕಾರು ಹಾಯಿಸಿದ್ದಾರೆ. ಅವನು ಕಾರಿನ ಬಾನೆಟ್ ಮೇಲೆ ಬಂದು ಬೀಳುತ್ತಾನೆ ಅವನು ಬಿದ್ದಿರುವುದನ್ನೇ ಬಂಡವಾಳ ಮಾಡಿಕೊಂಡು ಅವನನ್ನು ೪ ಕಿಲೋ ಮೀಟರ್ ವರೆಗೆ ಒತ್ತುಹೊಯ್ದು ಕೊಲೆ ಮಾಡಲು ಯತ್ನಿಸಿದ್ದಾರೆ.
ದರ್ಶನ್ ಎನ್ನುವ ಯುವಕ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನುವ ಆರೋಪದಡಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಯುವತಿ ಪ್ರಿಯಾಂಕ ಮತ್ತವಳ ಪತಿ ಪ್ರಮೋದ್ ಘಟನೆ ನಡೆದಿರುವ ಸಂಬAಧ ಜ್ಙಾನಭಾರತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ದರ್ಶನ್ ಪಾಪರೆಡ್ಡಿಪಳ್ಯದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಉಳ್ಳಾಳ ರಸ್ತೆಯ ಸಿಗ್ನ÷್ಲನಲ್ಲಿ ಕಾರು ನಿಲ್ಲಿಸಿದ್ದೆ ಕೆಂಪು ದೀಪ ಇದ್ದರೂ ಕಾರು ಚಲಾಯಿಸಿದ್ದರು. ಪ್ರಿಯಾಂಕ ನನ್ನ ಕಾರಿಗೆ ತಾಕಿಸಿದ್ದಕ್ಕೆ ಕೆಳಗಿಳಿದು ಕೇಳೀದೆ. ಅದಕ್ಕೆ ಪ್ರಿಯಾಂಕ ಮದ್ಯದ ಬೆರಳು ತೋರಿಸಿ ಹೊರಟುಹೋದಳು .ಆರೋಪಿ ಕಾರು ಹಿಂಬಾಲಿಸಿಕೊAಡು ಹೋಗಿ ಮಾರ್ಗ ಮಧ್ಯ ತಡೆದೆ. ಅಷ್ಟರಲ್ಲಿ ಅವರ ಸ್ನೇಹಿತರು ಸ್ಥಳಕ್ಕೆ ಬಂದು ನನ್ನ ಮೆಲೆ ಹಲ್ಲೆ ಮಾಡಿದರು ಎಂದು ದರ್ಶನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂಕಷ್ಟದಲ್ಲಿ ರಾಜ್ ಬಿ ಶೆಟ್ಟಿ , ರಮ್ಯಾ…!!!

‘ಸಿದ್ದರಾಮಯ್ಯ ಸೋಲಿಸಿ’ಎಂಬ ಕರಪತ್ರ  ಹಂಚಿಕೆ  

ನಟಿ ಅಭಿನಯಾ ಕೆರಿಯರ್ ಗೆ ಫುಲ್ ಸ್ಟಾಪ್..!!

- Advertisement -

Latest Posts

Don't Miss