- Advertisement -
Mandya News:
ಮಂಡ್ಯ ನಗರಸಭೆ ವತಿಯಿಂದ ನಗರದ ಪೇಟೆ ಬೀದಿಯಲ್ಲಿರುವ ಅಂಗಡಿಗಳು ಹಾಗೂ ಬೀದಿ ಬದಿ ವ್ಯಾಪಾರದ ಅಂಗಡಿಗಳ ಮೇಲೆ ದಾಳಿ ನಡೆಸಿ 364 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಗಳನ್ನು ವಶ ಪಡಿಸಿಕೊಂಡು ರೂ 23820/- ದಂಡ ವಿಧಿಸಲಾಗಿದೆ ಎಂದು ಮಂಡ್ಯ ನಗರಸಭೆ ಆಯುಕ್ತ ಮಂಜುನಾಥ್ ಅವರು ತಿಳಿಸಿದ್ದಾರೆ.ದಾಳಿಯನ್ನು ಸೋಮವಾರ ಸಂಜೆ ನಡೆಸಿದ್ದು, ದಾಳಿ ಸಂದರ್ಭದಲ್ಲಿ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ರವಿ ಕುಮಾರ್, ಆರೋಗ್ಯ ನಿರೀಕ್ಷಕ ಶಿವಶಂಕರ್, ಅಶ್ವಥ್, ಚಲುವರಾಜು, ಪ್ಲಾಸ್ಟಿಕ್ ವಿರೋಧಿ ಹೋರಾಟಗಾರ ಜಯಶಂಕರ್ , ನಗರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
- Advertisement -