Tuesday, October 14, 2025

Latest Posts

ಸಿದ್ದರಾಮಯ್ಯಗಾಗಿ ಮನೆ ಹುಡುಕಾಟದಲ್ಲಿರೋ ಕಾಂಗ್ರೆಸ್ ನಾಯಕರು…!

- Advertisement -

Political News:

ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ಬಾರಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ನಿಲ್ಲೋದು ಪಕ್ಕಾ ಆದ್ಮೇಲೆ ಚುನಾವಣೆ ಸಂದರ್ಭದಲ್ಲಿ ಇಲ್ಲೇ ಇರೋದಕ್ಕೆ ಒಂದು ಮನೆಯ ಅವಶ್ಯಕತೆ ಇದೆ. ಹಾಗಾಗಿ ಕೋಲಾರದಲ್ಲಿಯೇ ಒಂದು ಮನೆ ಫೈನಲ್ ಆಗಿದೆ.

ಕಳೆದ 10 ದಿನಗಳಿಂದ ಸಿದ್ದರಾಮಯ್ಯ ವಾಸವಿರಲು ಮನೆಗಾಗಿ ಕಾಂಗ್ರೆಸ್ ನಾಯಕರು ಹುಡುಕಾಟ ನಡೆಸುತ್ತಿದ್ರು. ಸದ್ಯ ಕೋಲಾರ ನಗರಸಭೆ ವ್ಯಾಪ್ತಿಯ 6ನೇ ವಾರ್ಡ್ ನ ಶಂಕರಪ್ಪ ಎಂಬುವರ ಮನೆ ಫೈನಲ್ ಆಗಿದ್ದು ವಾಸ್ತುಪ್ರಕಾರದ ಮನೆಯನ್ನೇ ಹುಡುಕಿದ್ದಾರೆ ಎನ್ನಲಾಗುತ್ತಿದೆ. ಕೋಲಾರದ ಹೊರವಲಯದ ಕೋಗಿಲಹಳ್ಳಿಯಲ್ಲಿ ಸಿದ್ದರಾಮಯ್ಯಗಾಗಿ ಮನೆ ಹುಡುಕಲಾಗಿದ್ದು ಇದು ಕುರುಬರಪೇಟೆ ನಿವಾಸಿ ಶಂಕರಪ್ಪ ಎಂಬುವರಿಗೆ ಸೇರಿರುವ ಮನೆಯಾಗಿದೆ. ಸುಮಾರು 1 ಎಕರೆ ವಿಶಾಲವಾದ ಪ್ರದೇಶದಲ್ಲಿ 56 ಅಡಿ ಉದ್ದ, 46 ಅಗಲ ವಿಸ್ತೀರ್ಣದ ಮನೆ ಇದಾಗಿದೆ.

ಮನೆಯಲ್ಲಿ ವಿಶಾಲವಾದ ಕೋಣೆಗಳು ಇವೆ. ನೆಲಮಹಡಿಯ ಮನೆಯಲ್ಲಿ ಹಾಲ್, ಡೈನಿಂಗ್ ಹಾಲ್ ಜೊತೆಗೆ ಎರಡು ಬೆಡ್ ರೂಂ, ದೇವರ ಮನೆ, ಓಪನ್ ಕಿಚನ್ ಇದೆ. ಮನೆಯ ಸುತ್ತಲೂ ಯಾವುದೇ ಮನೆಗಳಿಲ್ಲ. ಯಾವುದೇ ಕಿರಿ ಕಿರಿ ಇಲ್ಲದೆ ಶಾಂತವಾತಾವರಣ ಇರುವ ಸ್ಥಳ ಇದಾಗಿದೆ. ಇನ್ನು ಮನೆಯ ಸುತ್ತಲೂ ತೋಟಗಾರಿಕೆ ಬೆಳೆ, ಸಭೆ ಸಮಾರಂಭಕ್ಕೆ ಜಾಗ ಕೂಡ ಇದೆ. ಸಿದ್ದರಾಮಯ್ಯ ಹೇಳಿದಂತೆ ಹೈವೇ ಪಕ್ಕದ ಸರ್ವೀಸ್ ರಸ್ತೆಯಲ್ಲೇ ಮನೆ ಇದ್ದು ವಿಸ್ತಾರವಾದ ತೋಟದ ಮನೆ, ಕಾಂಪೌಂಡ್ ಇರುವ ಮನೆಯಾಗಿದೆ.

ಶಂಕರಪ್ಪ ಮನೆಗೆ ಕಾಂಗ್ರೆಸ್ ನಾಯಕರು ಹಾಗೂ ಸಿದ್ದರಾಮಯ್ಯ ಪಿಎ ಪ್ರಭಾಕರ್ ಭೇಟಿ ಕೊಟ್ಟು ನೋಡಿಕೊಂಡು ಹೋಗಿದ್ದಾರೆ. ಆದ್ರೆ ಇದುವರೆಗೂ ಮನೆ ಆಯ್ಕೆ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. ತಾತ್ಕಾಲಿಕವಾಗಿ ಮನೆಯನ್ನು ಆಯ್ಕೆ ಮಾಡಿರುವ ಕಾಂಗ್ರೆಸ್ ಮುಖಂಡರು, ಮನೆಯ ಮಾಲೀಕರಿಗೆ ಖಚಿತವಾಗಿ ಮನೆ ಬೇಕು ಎಂದು ಹೇಳಿಲ್ಲ, ಆದರೂ ಮನೆಯನ್ನು ಬಾಡಿಗೆಗೆ ಕೊಡಲು ಮನೆಯ ಮಾಲೀಕರು ಸಿದ್ಧರಿದ್ದಾರೆ. ಅಲ್ಲದೆ ಭದ್ರತೆ ದೃಷ್ಟಿಯಿಂದ ಸಿದ್ದರಾಮಯ್ಯ ಅವರಿಗೆ ಈ ಮನೆ ಸೂಕ್ತವಾಗಿದೆ. ಆದ್ರೆ ಅಂತಿಮ ಉತ್ತರ ಸಿದ್ದರಾಮಯ್ಯ ಕಡೆಯಿಂದ ಬರಬೇಕಿದೆ ಎನ್ನುತ್ತಾರೆ ಮನೆಯ ಮಾಲೀಕರು.

ಇನ್ನು ವಿಶೇಷ ಸೌಲಭ್ಯ ಹೊಂದಿರುವ ಮನೆಯನ್ನೇ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯಗಾಗಿ ಹುಡುಕಿದ್ದಾರೆ. ಒಂದು ವೇಳೆ ಇದೇ ಮನೆ ಅಂತಿಮವಾದರೆ ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗೃಹಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ಮತಕ್ಕೆ 6 ಸಾವಿರ…! ಸಿಎಂ ಸೇರಿ ಅನೇಕರ ಮೇಲೆ ದೂರು..?!

ತಮ್ಮೇಶ್ ಗೌಡರ ನೇತೃತ್ವದಲ್ಲಿ ಅದ್ದೂರಿಯಾದ ಬ್ಯಾಟರಾಯನಪುರ ಶ್ರೀನಿವಾಸ ಕಲ್ಯಾಣೋತ್ಸವ

ಶಾಸಕರಿಂದ ಇಂದಿರಾಗಾಂಧಿ ನರ್ಸಿಂಗ್ ಬಾಲಕಿಯರ ವಿದ್ಯಾರ್ಥಿನಿಲಯ ಉದ್ಘಾಟನೆ

- Advertisement -

Latest Posts

Don't Miss